ಹೋರಾಟಗಾರ್ತಿ ಶಾಮಬಾಯಿ ದಸ್ತಿ ನುಡಿನಮನ

0
143

ಕಲಬುರಗಿ: ಹೋರಾಟಗಾರ ಲಕ್ಷ್ಮಣ ದಸ್ತಿಯವರ ತಾಯಿಯವರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ರಾಮಣ್ಣ ಉರ್ಫ್ ವಿಜಯಕುಮಾರ ದಸ್ತಿಯವರ ಧರ್ಮ ಪತ್ನಿ ಶ್ರೀಮತಿ ಶಾಮಬಾಯಿ ದಸ್ತಿಯವರ ನುಡಿ ನಮನ ಕಾರ್ಯಕ್ರಮದಲ್ಲಿ ಶ್ರೀಮತಿ ಶಾಮಬಾಯಿ ದಸ್ತಿಯವರ ನಿಸ್ವಾರ್ಥ ಮತ್ತು ತ್ಯಾಗದ ಸೇವೆಯ ಚರಿತ್ರೆಯ ಬಗ್ಗೆ ಎಲ್ಲರೂ ತಮ್ಮ ತಮ್ಮ ಮನದಾಳದ ಮಾತುಗಳಲ್ಲಿ ನುಡಿದರು.

92 ವರ್ಷಕ್ಕೂ ಮೇಲ್ಪಟ್ಟು ವಯಸ್ಸಿನ ಶ್ರೀಮತಿ ಶಾಮಬಾಯಿ ದಸ್ತಿಯವರು ಇದೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ಒಳಗಾಗಾಗಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದರು.

Contact Your\'s Advertisement; 9902492681

ಇವರ ದೇಶ ಭಕ್ತಿ ಮತ್ತು ಸಾಮಾಜಿಕ ಕಳಕಳಿಯ ನಿಸ್ವಾರ್ಥ ಸೇವೆಯ ಸ್ಮರಣಾರ್ಥ ನಗರದ ಹಿಂದಿ ಪ್ರಚಾರ ಸಭಾದ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನೂರಾರು ಆಯಾ ಕ್ಷೇತ್ರದ ಗಣ್ಯರು, ಪರಿಣಿತರು, ಸಾಮಾಜಿಕ ಕಾರ್ಯಕರ್ತರು ಭಾಗವ‌ಹಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸಿದರು.

ಸುಮಾರು ಐದುವರೆ ದಶಕಗಳ ಪೂರ್ವದಲ್ಲಿ ಪತಿಯ ನಿಧನದ ನಂತರ ಎದೆಗುಂದದೆ ಧೈರ್ಯದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಾಲುಗಳನ್ನು ಎದುರಿಸಿದ ಶ್ರೀಮತಿ ಶಾಮಬಾಯಿ ದಸ್ತಿಯವರು ಮಕ್ಕಳಿಗೆ ಪತಿಯ ದೇಶ ಭಕ್ತಿ ಮತ್ತು ಸಾಮಾಜಿಕ ಕಳಕಳಿಯ ಬಧ್ದತೆಯ ಸಂಸ್ಕಾರಗಳು ನೀಡಿ ಕೊನೆ ಉಸಿರು ಇರುವವರೆಗೂ ತನ್ನಗಾಗಿ ಎನು ಬಯಸದೆ ನಿಸ್ವಾರ್ಥ ಜೀವನ ಸಾಗಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿ ತಾಯಿತ್ವ ಎನೆಂಬುದನ್ನು ತೋರಿಸಿಕೊಟ್ಟ ಇವರ ಸ್ಮರಣಾರ್ಥ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಲ್ಲರೂ ಮುಕ್ತಕಂಠದಿಂದ ಹೋರಾಟಗಾರ ಲಕ್ಷ್ಮಣ ದಸ್ತಿಯವರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಪ್ರಭುಲಿಂಗ ನಿಲೂರೆ, ಚಿಂತಕರಾದ ಅಶೋಕ ಗುರೂಜಿ, ಲಿಂಗರಾಜ ಸಿರಗಾಪೂರ, ಮನೀಷ್ ಜಾಜು,ಡಾ .ಎ.ಎಸ್ ಭದ್ರಶೆಟ್ಟಿ, ಡಾ.ಗಾಂದೀಜೀ ಮೋಳಕೇರಿ, ಪ್ರೊ.ಶಿವರಾಜ ಪಾಟೀಲ,ಡಾ.ಶ್ರಿಧರ ದೇಶಪಾಂಡೆ, ಜ್ಞಾನಮಿತ್ರ ಸಾಮವೆಲ್,ಸಾಲೋಮನ್ ದಿವಾಕರ್, ಬಿ. ಬಿ ನಿಂಗಪ್ಪ, ಮರಿಲಿಂಗಪ್ಪ ಕಿಣ್ಣಿಕೇರಿ ,ಬಿ.ಬಿ.ನಾಯಕ, ಆಕಾಶ ರಾಠೋಡ್, ಮುತ್ತಣ್ಣ ನಾಡಗೇರಿ, ಗಿರೀಶ ಗೌಡ ದುಮುದ್ದರಿ, ಶಾಂತಪ್ಪ ಕಾರಭಾಸಗಿ, ಸುಭಾಷ್ ಶೀಲವಂತ, ಬಾಬುರಾವ್ ಗಂವಾರ್ , ಮಲ್ಲಿನಾಥ ಸಂಗಶೆಟ್ಟಿ, ಸಿದ್ದು ಬಿರಾದಾರ, ಕಲ್ಯಾಣರಾವ ಪಾಟೀಲ, ವಿಶ್ವನಾಥ ಪಾಟೀಲ ಗೂನಳ್ಳಿ, ಅಬ್ದುಲ್ ಖದೀರ, ಅಸ್ಲಂ ಚೌಂಗೆ, ಬಸವರಾಜ ಕಲ್ಯಾಣಿ, ಶಿವಾನಂದ ಕಾಂದೆ ಪರಮೇಶ್ವರ, ಅಮಿತ್ ಶರಣಬಸಪ್ಪ.ಕೆ.ಜಂಬಣ್ಢ ಗೌಡಾ, ವಿನೋದ ಸೇರಿದಂತೆ ನೂರಾರು ಜನ ಭಾಗವಹಿಸಿ ತಮ್ಮ ತಮ್ಮ ಮನದಾಳದ ಮಾತುಗಳು ನುಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here