ಡಾ.ಬಾಬಾ ಸಾಹೇಬರು ಸರ್ವರ ಮನದಲ್ಲಿ ದೈವ ಶಕ್ತಿಯಾಗಿದ್ದಾರೆ

0
54

ಆಳಂದ; ಡಾ. ಬಿ ಆರ್ ಅಂಬೇಡ್ಕರ್ ಅವರು ಮಾನವೀಯ ಮೌಲ್ಯಗಳ ಬಿತ್ತನೆ ಯೊಂದಿಗೆ ಭಾರತದ ಸಂವಿಧಾನ ರಚಿಸಿ ಜಗತ್ತಿಗೆ ಆದರ್ಶ ವ್ಯಕ್ತಿಯಾಗಿ ಸರ್ವರ ಮನದಲ್ಲಿಯೂ ಅಮರರಾಗಿ ಉಳಿದಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು.

ತಾಲೂಕಿನ ಝಳಕಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಜಯಂತಿ, ಉತ್ಸವ,ಮೆರವಣಿಗೆ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಸಮೃದ್ಧ ಸಮಾಜ ನಿರ್ಮಿಸುವಂತಾಗಬೇಕು. ಅಂಬೇಡ್ಕರ ಅವರು ಚಿಕ್ಕವರಿಂದಲೇ ಬಡತನ ಎಂಬುವುದು ಸಾಧನೆಯ ಮೆಟ್ಟಿಲುಗಳನ್ನಾಗಿಸಿ ಸಾಧನೆಯ ಶಿಖರವೇರಿ ಭಾರತ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.

Contact Your\'s Advertisement; 9902492681

ಶರಣರು, ಸಂತರು, ಮಹಾನ ವ್ಯಕ್ತಿಗಳು ಮಾನವ ಕುಲವನ್ನೇ ಒಳಿತನ್ನು ಬಯಸಿದ ಮಹಾನ್ ವ್ಯಕ್ತಿ ಗಳಾಗಿದ್ದಾರೆ,ಆದರೆ ಇಂದಿನ ದಿನಗಳಲ್ಲಿ ಕೆಲವು ಜನರು ಕೇವಲ ಜಾತಿ, ಧರ್ಮಕ್ಕೆ ಸೀಮಿತ ಮಾಡುತ್ತಿದ್ದಾರೆ. ಇಂತಹ ವಾತಾವರಣ ಮುಂದುವರೆದರೆ ಬಲಿಷ್ಠ ರಾಷ್ಟ್ರ ವಾಗಲು ಮಾರಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಗುರುಗಳಾದ ಶಿವಶರಣಪ್ಪ ಕಗ್ಗೋಡ ಮಾತನಾಡುತ್ತಾ ಡಾ ಬಿ ಆರ್ ಅಂಬೇಡ್ಕರ್ ಅವರು ತನಗಾಗಿ ಜೀವನ ಮಾಡದೆ ಪರರಿಗಾಗಿ ಜೀವನ ಮಾಡಿ, ಶೈಕ್ಷಣಿಕ ಕ್ರಾಂತಿಯೊಂದಿಗೆ ಸಮಾನತೆ ಸಾರಿದ ಮಹಾನ ಸಂತರಾಗಿದ್ದಾರೆ. ಅವರ ಆಚಾರ ವಿಚಾರಗಳೇ ನಮ್ಮ ಬದುಕಿಗೆ ದಾರಿ ದೀಪವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಗೇಶ ಪಡಶೆಟ್ಟಿ, ಹುಸೇನ್ ನದಾಫ, ಚಿದಾನಂದ ಹೊಸಳ್ಳಿ, ರವಿಕಾಂತ ನಾಗಲೆಗಾಂವ, ವಿಕ್ರಮ ಮರಬೆ, ಅಂಬಣ್ಣ ಪೂಜಾರಿ, ವೀರಣ್ಣಾ ಕಳಸಗೊಂಡ, ಶಿವಕುಮಾರ ಕೊಡಲಹಂಗರಗಿ, ಭೋಗೆಶ ಬಿರಾದಾರ, ನಾಗಯ್ಯ ಹಿರೇಮಠ, ಸೋಮನಾಥ ಮರಬೆ, ಲಕ್ಷ್ಮಣ ಹೊಸಳ್ಳಿ, ಭೋಗೇಶ ಮುನ್ನಳ್ಳಿ, ಹಣಮಂತ ಅಂಕಲಗಿ, ಭೋಗೇಶ ಬೋರಳ್ಳಿ, ವೀರಣ್ಣ ಖೇಳಗಿ, ಸಿದ್ದರಾಮ ಸಿಂಗೆ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಅನೇಕ ಜನ ಯುವಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here