ಕಲಬುರಗಿ: ಕಳೇದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸಹೋದರ ನೀತಿನ್ ಗುತ್ತೇದಾರ್ ನನ್ನು ಎತ್ತಿ ಕಟ್ಟಿ ನನ್ನ ವಿರುದ್ದವೇ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿ ನನ್ನ ಕುಟುಂಬ ಒಡೆಯುದಕ್ಕೆ ಬಿಜೆಪಿಯವರೆ ಕಾರಣ ಎಂದು ಬಿಜೆಪಿಯ ಹಿರಿಯ ಮುಖಂಡ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಹೇಳಿದರು.
ಮಂಗಳವಾರ ಮಾಲಿಕಯ್ಯ ಗುತ್ತೇದಾರ ಹಿತೈಷಿ ಹಾಗೂ ಬೆಂಬಲಿಗರ ಮುಂದಿನ ರಾಜಕೀಯ ಜೀವನದ ಕುರಿತು ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು.
2023ರಲ್ಲಿ ನನ್ನ ವಿರುದ್ಧ ಚುನಾವಣೆ ಕಣಕ್ಕೆ ಇಳಿದಿದ್ದಾಗ
ಬಿಜೆಪಿ ನಾಯಕರು ಒಂದೇ ಒಂದು ಸಲ ಬಂದು ಮಾತನಾಡಲಿಲ್ಲ ಎಂದು ಬಿಜೆಪಿ ನಾಯಕರ ಮೇಲೆ ಬೇಸರ ವ್ಯಕ್ತಪಡಿಸಿ ಅಸಮಾಧಾನ ಹೊರಹಾಕಿದ್ದರು.
ಹಿತೈಷಿ ಹಾಗೂ ಅಭಿಮಾನಿಗಳ ತುಂಬಿದ ಸಭೆಯಲ್ಲಿ ಕೆಲವು ಜನ ಬಿಜೆಪಿ ಪಕ್ಷದಲ್ಲೇ ಉಳಿದುಕೊಳ್ಳಿ ಎನ್ನುವವರು ಕೈ ಎತ್ತಿ ಬೆಂಬಲ ಸೂಚಿಸಿ ಎಂದಾಗ ಕೆಲವರು ಮಾತ್ರ ಕೈ ಎತ್ತಿ ಬಿಜೆಪಿಯಲ್ಲೇ ಇರಿ ಅಂದರು.
ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳಿ ಎನ್ನುವವರು ಕೈ ಎತ್ತಿ ಎಂದಾಗ ಇಡೀ ಸಭೆ ಹೋಯ್ ಎನ್ನುವ ಕರಡಾತನದೊಂದಿಗೆ ಕೈ ಎತ್ತಿ ಬೆಂಬಲ ಸೂಚಿಸಿದರು. ಇನ್ನೂ ಅತೀ ಹೆಚ್ಚಿನ ಜನ ನಿಮ್ಮ ನಿರ್ಧಾರಕ್ಕೆ ಬದ್ದ ಎಂದು ಸಂದೇಶ ನೀಡಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವೆ ಎಂದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸ್ಪಷ್ಟಪಡಿಸಿದರು.