ಕಲಬುರಗಿ: ಎಐಎಂಐಎಂ ಅಧ್ಯಕ್ಷ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0
20

ಕಲಬುರಗಿ: ಎಐಎಂಐಎಂ ಮಾಜಿ ಜಿಲ್ಲಾ ಅಧ್ಯಕ್ಷ ಅಬ್ದುಲ್‌ ರಹೀಂ ಮಿರ್ಚಿ ಅವರು ತಮ್ಮ ನೂರಾರು ಜನ ಬೆಂಬಲಿಗರೊಂದಿಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾಂಗ್ರೆಸ್ ಧ್ವಜ ನೀಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಕಾಂಗ್ರೆಸ್ ಮುಖಂಡರಾದ ಫರಾಜುಲ್ ಇಸ್ಲಾಂ, ರಾಜಗೋಪಾಲ ರೆಡ್ಡಿ, ಜಬ್ಬಾರ್ ಸಾಗರ್, ನಹೀಮ್ ಖಾನ್, ಸೈಯದ್‌ ಅಹಮದ್‌ ವಹಾಜ್ ಬಾಬಾ, ಅಹೆಮದ್‌ ಇಸ್ಲಾಂ, ಮಜ‌ ಆಲಂಖಾನ್, ಅಜ್ಜಲ್ ಗೋಲಾ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here