ಕಲಬುರಗಿ: ತತ್ವಪದ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

0
114

ಕಲಬುರಗಿ: ಜನರ ಮನದ ಮೈಲಿಗೆಯನ್ನು ತಮ್ಮ ಸಾಹಿತ್ಯದ ಮೂಲಕ ತೊಳೆದ ತತ್ವಪದಕಾರರ ಚಿಂತನೆಯನ್ನು ಪರಿಚಯಿಸುವ ದಿಸೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ಏ. 28 ರಂದು ನಗರದ ಕನ್ನಡ ಭವನದ ಆವರಣದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಒಂದು ದಿನದ ತತ್ವಪದ ಸಾಹಿತ್ಯ ಸಮ್ಮೇಳನವನ್ನು ಅನುಭವ ಮಂಟಪದ ರೀತಿಯಲ್ಲಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ…

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯ ತತ್ವಪದಕಾರರು ಮಾಡಿದ್ದಾರೆ. ಸಾಮರಸ್ಯ ಮತ್ತು ಸಹಬಾಳ್ವೆಯ ಚಿಂತನೆಗಳನ್ನು ತತ್ವಪದಕಾರರು ಹೊಂದಿದ್ದರು ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿಯ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದರು.

Contact Your\'s Advertisement; 9902492681

ಸ್ವಾಗತ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು ಸತ್ಕಾರ ಸ್ವೀಕರಿಸಿ ಮಾತನಾಡಿದ ಯಡ್ರಾಮಿ ತಾಲೂಕಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಲವಂತರಾಯಗೌಡ ಬಿರಾದಾರ ಅರಳಗುಂಡಗಿ ಅವರು, ತತ್ವಪದ ಸಾಹಿತ್ಯ ನಮ್ಮ ನೆಲದ ಸಂಪತ್ತಾಗಿದೆ. ಈ ಸಂಪತ್ತಾಗಿರುವ ತತ್ವಪದಗಳಲ್ಲಿರುವ ಸತ್ವವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡಬೇಕಾಗಿದೆ. ಹಾಗಾಗಿ ಈ ತತ್ವಪದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಸಹಕರಿಸುವುದಾಗಿ ಹೇಳಿದರು.

ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಸಾಹಿತಿ ಡಾ. ಕೆ ಎಸ್ ಬಂಧು, ಕಸಾಪ ಜೇವರ್ಗಿ ಅಧ್ಯಕ್ಷರು ಎಸ್ ಕೆ ಬಿರಾದಾರ, ಪ್ರಮುಖರಾದ ರಾಜೇಂದ್ರ ಮಾಡಬೂಳ, ಎಚ್ ಎಸ್ ಬರಗಾಲಿ, ಸಂತೋಷ ಕುಡಳ್ಳಿ, ಪುನೀತರಾಜ್ ಕವಡೆ, ಧರ್ಮರಾಜ ಜವಳಿ, ಅಬ್ದುಲ್ ರೌಫ್, ಅಜೀಜ್ ಬಳಗಾರ, ಶಿವುಕುಮಾರ ನಿಡಗುಂದಾ, ಲಿಂಗಬಸವ ಸೇಡಂ, ಬ್ಯಾತಗಿ ತಮ್ಮನಗೋಳ, ಶಿವಣ್ಣಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here