ಕಲಬುರಗಿ: 2024 ನೇ ಸಾಲಿನ ಭಾರತೀಯ ಪರಾ ಟೆನಪಿನ್ ಬಾಲಿಂಗ್ ಫೆಡ್ರೇಷನ್ ವತಿಯಿಂದ ಆಯೋಜಿಸಿದ 4ನೇ ಕ್ರೀಡಾ ಚಾಂಪಿಯನ್ ಶಿಪ್ ನಲ್ಲಿ ಕಲಬುರಗಿ ಜಿಲ್ಲೆಯಿಂದ ಭಾಗವಹಿಸಿದ ವಿಕಲಚೇತನ ಮಹಿಳಾ ಕ್ರೀಡಾಪಟುಗಳಿಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಾಚ೯ 25 ಮತ್ತು 26 ರಂದು ಬೆಂಗಳೂರಿನಲ್ಲಿ ನಡೆದ ಕ್ರೀಡೆಯಲ್ಲಿ ಕಲಬುರಗಿ ಜಿಲ್ಲೆಯಿಂದ ವಿಕಲಚೇತನ ಮಹಿಳಾ ಕ್ರೀಡಾಪಟುಗಳು ದ್ವಿತೀಯಾ ಮತ್ತು ತೃತೀಯ ಸ್ಥಾನವನ್ನು ಗಳಿಸಿ ಚಿನ್ನ ಹಾಗೂ ತಾಮ್ರದ ಪದಕಗಳನ್ನು ಪಡೆದುಕೊಂಡಿರುವ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ತಿಳಿಸಿದರು.
ಪರಾ ಟೆನಪಿನ್ ಬಾಲಿಂಗ್ ಚಾಂಪಿಯನ್ ಶಿಪ್ 2024 ಕ್ರೀಡೆಯಲ್ಲಿ ವಿಜೇತರಾದ ಮಂಜುಳಾ ಎಂ. ಮತ್ತು ಮಹಾದೇವಿ ಕಲಮಣಿ ಯಲ್ಲಪ್ಪ ವಿಕಲಚೇತನ ಮಹಿಳಾ ಕ್ರೀಡಾಪಟುಗಳಿಗೆ ಗುರುವಾರ ಅಂಗವಿಕಲ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಹಾಗೂ ಕ್ರೀಡಾಪಟುಗಳ ಪೋಷಕರು ಇದ್ದರು.