ಕಲಬುರಗಿ: ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ವತಿಯಿಂದ ಸಪ್ತ ನೇಕಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡ ಶ್ರೀರಾಮನವಮಿ ಮತ್ತು ಸದ್ಗುರು ಶ್ರೀ ಸಿದ್ದರೂಢರ ಜಯಂತಿ ಕಾರ್ಯಕ್ರಮ ಜರುಗಿತು.
ನಗರದ ಹಿರಿಯ ವಕೀಲರಾದ ನಂದ ಕಿಶೋರ್ ಬೂಬ್ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಪಿ ಎನ್ ಟಿ ಕಾಲೋನಿಯಲ್ಲಿರುವ ದೇವಸಾಲಿ ಸಮಾಜದ ಜನಗಳು ಸ್ಥಾಪಿಸಿದ ಶ್ರೀ ಸಿದ್ಧಾರೂಢ ರ ದೇವಸ್ಥಾನದ ಪರಮ ಭಕ್ತರಾದ ಶಾಂತಿಲಾಲ ಮತ್ತು ಶ್ರೀಮತಿ ನಿಶಾ ಜೊತೆಗೂಡಿ ಪೂಜೆ ಸಲ್ಲಿಸಿದರು.
ಸದಸ್ಯರಾದ ಜೇ. ವಿನೋದ ಕುಮಾರ ಎಲ್ಲರಿಗೂ ಸ್ವಾಗತಿಸಿದರು. ಕಾನೂನು ಸೇವಾ ಸಂಸ್ಥೆಯ ಸಂಸ್ಥಾಪಕರಾದ ಶಿವಲಿಂಗಪ್ಪಾ ಅಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಗೆ ಮೊದಲು ಬಾರಿಗೆ ಆಗಮಿಸಿದ ಬೂಬ್ ರವರು ಸಂಸ್ಥೆಯ ಗೌರವ ಸ್ವೀಕರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು 100 ವರ್ಷಗಳ ಹಿಂದೆಯೇ ನೇಕಾರ ಸಮುದಾಯ ದ ಗೌರವ ಎತ್ತಿ ಹಿಡಿದು ನ್ಯಾಯ ಪರ ಧ್ವನಿಯನ್ನು ಎಲ್ಲರಿಗೂ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವೈಹಿಸಿದ ಸದ್ಗುರು ಶಿವಶರಣರು, ಅಕ್ಕಲಕೋಟ್ ಇವರು ಅಸ್ಮಿತೆ ಜಾಗ್ರತಿ ಗೊಳಿಸಿ, ಸಮಾನತೆ ಮೂಡಿಸಲು, ನ್ಯಾಯ ಹೋರಾಟ ಗೈದು, ಜಾತಿ ಸಂಕುಲ ಮೀರಿ ಧಾರ್ಮಿಕ ಸೇವೆಯನ್ನು ಜನಮಾನಸದಲ್ಲಿ ನೆಲೆ ಉರಿದ ಈ ಇಬ್ಬರು ಸದಾ ಪೂಜನಿಯರು ಎಂದು ತಿಳಿಸಿದರು.
ಶಾಂತಿಲಾಲ ಮಾತನಾಡಿ, ನಾವು ಮೂಲತಃ ವಲಸೆ ಜನಾಂಗದವರು, ಹೊಟ್ಟೆ ಪಾಡಿಗೆ ಜಿಲ್ಲೆಗೆ ಆಗಮಿಸಿ ಕಳೆದ 25 ವರ್ಷಗಳ ಕಾಲ ಸದ್ಗುರು ಸೇವೆ ಮಾಡಿದ ಕಾರಣವೇ ನಾವು ಕೂಡಾ ಪರಮ ಭಕ್ತರ ಸಾಲಿಗೆ ಸೇರಿಸಿ ಸಮುದಾಯಗಳು ಗೌರವಿಸುವದಲ್ಲದೆ ನಮ್ಮನ್ನು ಅನುಪಾಲಿಸುತ್ತಾರೆ ಎಂದು ತಿಳಿಸಿದರು.
ಕೊನೆಯಲ್ಲಿ ನ್ಯಾಯವಾದಿ ತ್ರೀವೇದಿ ವಿಜಯ ಕುಮಾರ ವಂದಿಸಿದರು, ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಭಂಡಾರಿ ರಾಜ ಗೋಪಾಲ, ಸತೀಶ ಜಮಖಂಡಿ ಇತರರು ಉಪಸ್ಥಿತರಿದ್ದರು.