ಕೆರೆ ಹೂಳೆತ್ತುವ ಸ್ಥಳಕ್ಕೆ ರೈತ ಮುಖಂಡ ದಯಾನಂದ ಪಾಟೀಲ್ ಭೇಟಿ

0
7

ಕಲಬುರಗಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸೈಯದ್ ಚಿಂಚೋಳಿ ಗ್ರಾಮದ ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಸಮರ್ಪಕ ನಿರ್ಮಾಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ರೈತ ಮುಖಂಡ ದಯಾನಂದ ಪಾಟೀಲ್ ಆಗ್ರಾ ಪಡೆಸಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೃಷಿ ಕಾರ್ಮಿಕರ ಗುಳೆ ಹೋಗುವುದನ್ನು ತಪ್ಪಿಸಿ ಪ್ರತಿಯೊಂದು ಹಳ್ಳಿಗಳಲ್ಲೂ ಪುರುಷ ಮಹಿಳೆಯರಿಗೂ ಸಮಾನ ವೇತನ ನೀಡಿ ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಕೆಲಸ ನಿರ್ವಹಿಸಿದೆ ಕಾಟಾಚಾರಕ್ಕೆ ಎಂಬಂತೆ ಅಲ್ಪ ಸ್ವಲ್ಪ ಕಾಮಗಾರಿ ನಿರ್ಮಾಣ ಮಾಡಿ ಕಾರ್ಮಿಕರ ಬಾವ ಚಿತ್ರಕ್ಕೆ ಮಾತ್ರ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಇನ್ನೂ ಮುಂದೆ ಬಾವ ಚಿತ್ರ ತೋರಿಸಿ ಕೋಟ್ಯಾಂತರ ಹಣ ದೋಚುವ ಕಾರ್ಯ ನಿಲ್ಲಿಸಿ ಪ್ರತಿ ವರ್ಷ ಖರ್ಚು ಮಾಡುವ ಹಣದಲ್ಲಿ ಸಮರ್ಪಕ ವಾಸ್ತವದಲ್ಲಿ ಕಾಮಗಾರಿ ನಿರ್ಮಾಣ ಮಾಡಬೇಕು.

Contact Your\'s Advertisement; 9902492681

ಈಗ ಕೈಗೆತ್ತಿಕೊಂಡ ಸೈಯದ್ ಚಿಂಚೋಳಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡಿಸಿ ಕೆರೆಗೆ ನೀರು ಹರಿಸಬೇಕು ನೀರು ತುಂಬಿಸುವುದರಿಂದ ಈ ಕೆರೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕಾಮಗಾರಿ ನಿರ್ಮಾಣ ಮಾಡಲು ರಾಜ್ಯ ನವ ಕರ್ನಾಟಕ ರೈತ ಸಂಘದ ರಾಜಾಧ್ಯಕ್ಷರಾದ ದಯಾನಂದ ಪಾಟೀಲ್ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು ಒಂದು ವೇಳೆ ಸಮರ್ಪಕ ಕೆಲಸ ನಿರ್ವಹಿಸಿದೆ ಹೋದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here