ವೈದ್ಯರಿಗೆ ನಿರಂತರ ಕಲಿಕೆ ಅಗತ್ಯ: ಡಾ ನಿರಂಜನ್ ನಿಷ್ಠೆ

0
26

ಕಲಬುರಗಿ: ವೈದ್ಯರು ಎಂಬಿಬಿಎಸ್, ಎಂ ಡಿ ಕಲಿತ ನಂತರವೂ ಪ್ರಾಕ್ಟೀಸ್ ಮಾಡುವ ಅವಧಿಯಲ್ಲಿ ಓದುತ್ತಾ ಇರಬೇಕು. ವೈದ್ಯರಾದ ತಕ್ಷಣ ಕಲಿಕೆ ನಿಲ್ಲುವುದಿಲ್ಲ. ನಿರಂತರ ಓದುವಿಕೆ ಮನುಷ್ಯನನ್ನು ಜ್ಞಾನಿ ಮತ್ತು ಪಂಡಿತರನ್ನಾಗಿ ಮಾಡುತ್ತದೆ ಎಂಬುದನ್ನು ಬಾಬಾಸಾಹೇಬ ಅಂಬೇಡ್ಕರರ ಉದಾಹರಣೆ ಯೊಂದಿಗೆ ಶರಣಬಸವ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ನಿಷ್ಠೆ ನುಡಿದರು.

ಖಾಜಾ ಶಿಕ್ಷಣ ಸಂಸ್ಥೆಯ ಖಾಜಾ ಬಂದೇನವಾಜ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬುಧವಾರ 2018 ನೇ ಬ್ಯಾಚಿನ ಪದವಿ ಪ್ರಧಾನ ಸಮಾರಂಭ ಸ್ಪಾರ್ಟಾನಿಯನ್ಸ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

Contact Your\'s Advertisement; 9902492681

ಇತ್ತೀಚಿಗೆ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದ್ದುˌ ವೈದ್ಯರಿಗೆ ವ್ಯಾಪಕ ಸ್ಪರ್ಧೆ ದೊರೆಯಲಿದೆ. ಅಲ್ಲದೇ ಕೃತಿಕ ಬುದ್ಧಿವಂತಿಕೆ ಕೂಡ ಕಠಿಣ ಸ್ಪರ್ಧೆ ಒಡ್ಡಲಿದೆ. ವೈದ್ಯರು ಕಾನೂನು, ವಾಣಿಜ್ಯ, ಇತಿಹಾಸದ ಜ್ಞಾನ ಹೊಂದಿದಲ್ಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುಬಹುದು. ವೈದ್ಯರು ಒಳ್ಳೆಯ ಮನುಷ್ಯನಾಗಿರುವುದು ಎಲ್ಲಕ್ಕಿಂತ ಹೆಚ್ಚಿನ ಮಹತ್ವ ಎಂದರು. ಕಠಿಣ ಪರಿಶ್ರಮ ಸತತವಾಗಿ ಇರಲಿ ಎಂದರು.

ಕೆಬಿಎನ್ ವಿಶ್ವ ವಿದ್ಯಾಲಯದ ಸಮ ಕುಲಾಧಿಪತಿ ಜನಾಬ್ ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ ಮಾತನಾಡಿ ಅಧ್ಯಕ್ಷೀಯ ಸಮಾರೋಪದಲ್ಲಿ ವೈದ್ಯಕೀಯ ಕ್ಷೇತ್ರ ವಾಣಿಜ್ಯಕರಣವಾಗಬಾರದು. ಇದು ಒಂದು ಪವಿತ್ರ ಕೆಲಸ. ದೇವರ ನಂತರ ವೈದ್ಯರೇ ರೋಗಿಗಳಿಗೆ ಸಹಾಯ ಮಾಡುವವರು. ವೈದ್ಯರು ಅಹಂಕಾರಿಗಳಾಗಬಾರದು. ಮಕ್ಕಳನ್ನು ವೈದ್ಯರನ್ನಾಗಿ ಮಾಡಿ ದೇಶ ಸೇವೆಯ ಕಾರ್ಯಮಾಡಿದ್ದಾರೆ ಎಂದು ಪಾಲಕರನ್ನು ಶ್ಲಾಘಸಿದರು.

ಈ ಕಾರ್ಯಕ್ರಮದಲ್ಲಿ 101ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಡಾ ಮೊಹಮ್ಮದ್ ಹುಸೇನ್ ಮುಲ್ಲಾ ಮೊದಲ ಟಾಪ್ಪರ್, ಡಾ ಲಕ್ಷಿತಾ ಜೈನ್ ಎರಡನೇಯ ಟಾಪ್ಪರ್, ಡಾ ರಫಿಯಾ ಖಾಸದರ ಮೂರನೇ ಟಾಪ್ಪರ ಆಗಿ ಹೊರ ಹೊಮ್ಮಿದ್ದಾರೆ. ಫಾರ್ಮ್ಯಾಕಲಜಿಯಲ್ಲಿ ಡಾ ನಿಮರಾ ಅಭಿದ್ ಆಫ್ಜಲ 10ನೆಯ ರಾಂಕ್ ಪಡೆದಿದ್ದಾರೆ.

ತಲ್ಹಾ ಪ್ರಾರ್ಥಿಸಿದರೆ, ಮೆಡಿಕಲ ಡೀನ್ ಡಾ ಸಿದ್ದೇಶ ಸಿರವಾರ ಸ್ವಾಗತಿಸಿದರು. ರೀಸರ್ಚ್ ಡೀನ ಡಾ. ರಾಜಶ್ರೀ ಪಾಲಾಡದಿ ಪರಿಚಯಿಸಿದರು. ಕೆಬಿಎನ ಆಸ್ಪತ್ರೆಯ ಸೂಪೇರಿಟೆಂಡೆಂಟ್ ಡಾ. ಸಿದ್ಧಲಿಂಗ ಚೆಂಗಟಿ ವಂದಿಸಿದರೆ, ಡಾ ಇರಫಾನ್ ಅಲಿ ನಿರೂಪಿಸಿದರು.

ಆಡಿಟೋರಿಯಂನಲ್ಲೀ ನಡೆದ ಈ ಕಾರ್ಯಕ್ರಮದಲ್ಲಿ ಕೆಬಿಎನ್ ವಿವಿ ಯ ಉಪ ಕುಲಪತಿ ಪ್ರೊ ಅಲಿ ರಜಾ ಮೂಸ್ವಿ, ಡಾ ಬಷೀರ್, ಇಂಜಿನಿಯರಿಂಗ್ ಡೀನ ಪ್ರೊ ಅಜಾಮ, ಡಾ ಗುರುರಾಜ್, ಮೆಡಿಕಲ ನಿಕಾಯದ ಎಲ್ಲ ವಿಭಾಗಗಳ ಮುಖ್ಯ ಸ್ಥರು, ಅಧ್ಯಪಕರು, ಎಲ್ಲ ವಿದ್ಯಾರ್ಥಿಗಳು, ಪದವಿ ಪಡೆದ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here