ಕಾಂಗ್ರೆಸ್ ಪಕ್ಷ ಖರ್ಗೆ ಪ್ರೈವೇಟ್ ಲಿಮಿಟೆಡ್ ಕಂಪನಿ: ಡಾಮ ಉಮೇಶ್ ಜಾಧವ್ ಆರೋಪ

0
15

ಕಮಲಾಪುರ: ಕಾಂಗ್ರೆಸ್ ಪಕ್ಷವು ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಕೈಗೆ ಸಿಕ್ಕಿ ಈಗ ಅದು ಖರ್ಗೆ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಆರೋಪಿಸಿದ್ದಾರೆ.

ಕಮಲಾನಗರದಲ್ಲಿ ಬುಧವಾರ ಪಕ್ಷದ ಕಾರ್ಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಇಡೀ ಕಾಂಗ್ರೆಸ್ ಪಕ್ಷವನ್ನು ತಮ್ಮ ಸ್ವಂತ ಕಂಪನಿಯಾಗಿ ಖರ್ಗೆ ಕುಟುಂಬ ಬಳಸಿಕೊಳ್ಳುತ್ತಿದೆ. ಅಪ್ಪ ಎಐಸಿಸಿ ಅಧ್ಯಕ್ಷರು,ಮಗ ಮೊದಲ ಬಾರಿಗೆ ಗೆದ್ದು ಸಚಿವ ನಾಗಿದ್ದು ಎರಡನೇ ಬಾರಿಗೆ ಸಮಾಜ ಕಲ್ಯಾಣ ಸಚಿವರಾದರು. ಮೂರನೇ ಬಾರಿ ಪಂಚಾಯತ್ ರಾಜ್ ಖಾತೆಯ ಸಚಿವರಾಗಿ ಮೊದಲಿನ ಸಾಲಿನಲ್ಲಿ ನಿಂತು ಪ್ರಮಾಣವಚನ ಸ್ವೀಕರಿಸಿದರು. ಈಗ ಅಳಿಯನಿಗೆ ಟಿಕೆಟ್ ನೀಡಿ ಎಂಪಿ ಮಾಡಲು ಹೊರಟಿದ್ದಾರೆ. ಪ್ರಚಾರ ಭಾಷಣ ಸಭೆಯಲ್ಲಿ ಮಾತನಾಡಿ ರಾಧಾಕೃಷ್ಣರನ್ನು ಗೆಲ್ಲಿಸಿದರೆ ತ್ರಿಬಲ್ ಲಾಭ ಎಂದು ಜನರ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧಿಸಲು ಇನ್ನು ಯಾವುದೇ ದಲಿತರ ಅಥವಾ ಬಂಜಾರ ಸಮುದಾಯದವರು ಅಭ್ಯರ್ಥಿಯಾಗಿ ಇವರಿಗೆ ಸಿಗಲಿಲ್ಲವೇ? ಎರಡನೇ ಹಂತದ ನಾಯಕರನ್ನು ಬೆಳೆಸುವ ಆಸಕ್ತಿ ಖರ್ಗೆ ಕುಟುಂಬಕ್ಕೆ ಇಲ್ಲವಾಗಿ ಹೋಗಿದೆ. ಕಾಂಗ್ರೆಸ್ ಪಕ್ಷವು ರಾಜಕೀಯ ಬಂಡವಾಳ ಹೂಡಿಕೆಯನ್ನು ಬೇರೆಯವರ ಬದಲಾಗಿ ತಮ್ಮ ಮಕ್ಕಳು ಅಳಿಯಂದಿರು ಮೇಲೆ ಮಾಡುತ್ತಿದೆ. ಕಲ್ಬುರ್ಗಿಯ ಕಾಂಗ್ರೆಸ್ ಅಭ್ಯರ್ಥಿ ಸಾರ್ವಜನಿಕರಿಗೆ ಪರಿಚಯವಿಲ್ಲದ ಮುಖವಾಗಿದ್ದು ಅವರನ್ನು ಸಾಮಾನ್ಯ ಜನರು ಭೇಟಿ ಮಾಡಲು ಕೂಡ ಸಾಧ್ಯವಾಗದ ವ್ಯಕ್ತಿ. ಕ್ಷೇತ್ರದಲ್ಲಿ ದಿನದ 24 ಗಂಟೆ ಕೈಗೆ ಸಿಗುವ ಜನಪ್ರತಿನಿಧಿಗಳು ಬೇಕಾಗಿದ್ದು ಕಾಂಗ್ರೆಸ್ಸಿನ ಯಾವುದೇ ಆಮಿಷಗಳಿಗೆ ಬಲಿಯಾಗದೆ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ಕಲ್ಬುರ್ಗಿಯಲ್ಲಿ ಬಿಜೆಪಿಯನ್ನುತ್ಯಧಿಕ ಮತಗಳಿಂದ ಗೆಲ್ಲಿಸಬೇಕಾಗಿದೆ. ಕಲ್ಬುರ್ಗಿ ಮತಕ್ಷೇತ್ರದ ಬಗ್ಗೆ ಈಗಾಗಲೇ ಅನೇಕ ಚುನಾವಣಾಪೂರ್ವ ವರದಿಗಳಲ್ಲಿ ಬಿಜೆಪಿಯ ಗೆಲುವು ಶತಸಿದ್ಧ ಎಂದು ಹೇಳಲಾಗಿದೆ ಕಾಂಗ್ರೆಸ್ಸಿನ ಗುಂಡಾಗಿರಿ ಯಿಂದ ಮತದಾರರನ್ನು ಭಯಭೀತರನ್ನಾಗಿಸಿ ಮತ ಚಲಾಯಿಸಿದಂತೆ ನೋಡಿಕೊಳ್ಳುವ ಪ್ರವೃತ್ತಿಯ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

Contact Your\'s Advertisement; 9902492681

ಖರ್ಗೆ ಲಿಮಿಟೆಡ್ ಕಂಪನಿ ಮತ್ತು ಕಾಂಗ್ರೆಸ್ ಈ ಚುನಾವಣೆಯ ನಂತರ ಮುಗ್ಗರಿಸುವುದು ಖಚಿತವಾಗಿದ್ದು ಮುಂದೆ ಕಾಂಗ್ರೆಸ್ ತಲೆ ಎತ್ತುವುದಿಲ್ಲ ಎಂದು ಹೇಳಿದರು.

ದಲಿತರ ಸಂರಕ್ಷಕರೆಂದು ಸುಳ್ಳು ಹೇಳುವ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹಲವು ಬಾರಿ ಅಪಮಾನ ಮಾಡಿದ ಪಕ್ಷವಾಗಿದೆ. ಮುಂಬೈ ಮತ್ತು ಬಾಂದ್ರಾ ಚುನಾವಣೆಗಳಲ್ಲಿ ಎರಡು ಬಾರಿ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು. ಅಂಬೇಡ್ಕರ್ ರವರ ನಿಧನರಾದಾಗ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗೆ ಸ್ಥಳವನ್ನು ಕೊಡದೆ ಕೊನೆಗೆ ಅವರಲ್ಲಿದ್ದ ಕಾರನ್ನು ಮಾರಾಟ ಮಾಡಿ 5000 ಮುಂಬೈಯ ಚೌಪಾಟಿ ಗೆ ತಂದು ಅಂತಿಮ ಬಿಸಿ ವಿಧಾನ ನಡೆಸಲಾಯಿತು.

ಅಂಬೇಡ್ಕರ್ ಅವರಿಗೆ ಸೇರಿದ ಪಂಚ ತೀರ್ಥಗಳೆಂದು ಕರೆಯಲ್ಪಡುವ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದು ನರೇಂದ್ರ ಮೋದಿಯವರು. ಇಂತಹ ಹೀನ ಮನಸ್ಸಿನ ಕಾಂಗ್ರೆಸ್ಸಿನ ಬಗ್ಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು “ಕಾಂಗ್ರೆಸ್ ಸುಡುವ ಮನೆ”(ಕಾಂಗ್ರೆಸ್ ಈಸ್ ಬರ್ನಿಂಗ್ ಹೌಸ್) ಅದನ್ನು ಬಿಟ್ಟು ಹೊರಬನ್ನಿ ಎಂದು ಕರೆ ನೀಡಿದ್ದರು.

371 ಜೆ ಕಲಂ ಜಾರಿ ಖರ್ಗೆ ಕೊಡುಗೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಆದರೆ ಇದರ ಹಿಂದಿನ ಶಕ್ತಿ ವೈಜನಾಥ್ ಪಾಟೀಲ್, ಹನುಮಂತ ರಾಹು ದೇಸಾಯಿ, ವಿಶ್ವನಾಥ ರೆಡ್ಡಿ ಮುದ್ನಾಳ್, ಧರಂ ಸಿಂಗ್ ಮುಂತಾದವರು. ಅಂದಿನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ಶಿಫಾರಸು ಮಾಡಿದ ನಂತರ ಕೇಂದ್ರದಲ್ಲಿ ಚರ್ಚೆಗೆ ಬಂದಿದೆ. ಅಡ್ವಾಣಿ ಅವರು ಈ ಶಿಫಾರಸ್ಸನ್ನು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದ್ದು ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೂ ಇದನ್ನ ಅನ್ವಯಿಸಲು ಸರಿಯಾದ ರೂಪದಲ್ಲಿ ಮರಮಂಡನೆ ಮಾಡಿ ಎಂದು ರಾಜ್ಯ ಸರಕಾರಕ್ಕೆ ಕಳುಹಿಸಿಕೊಟ್ಟು ನಂತರ ವಿಸ್ತೃತ ರೂಪದಲ್ಲಿ ಅದನ್ನು ಸಲ್ಲಿಸಲಾಗಿತ್ತು. ಈ ಸಾಧನೆಯನ್ನು ತಮ್ಮದೇ ಕೊಡುಗೆ ಎಂದು ಬಿಂಬಿಸುತ್ತಿರುವುದು ಜನತೆಗೆ ಮಾಡಿದ ಮೋಸ ಎಂದು ಅವರು ದೂರಿದರು.

ಈ ಬಾರಿಯ ಚುನಾವಣೆಯಲ್ಲಿ ಕಲ್ಬುರ್ಗಿ ಮತಕ್ಷೇತ್ರದಲ್ಲಿ ಡಾಕ್ಟರ್ ಉಮೇಶ್ ಜಾದವ್ ಅವರಿಗೆ ಮತದಾರರು ಒಂದೊಂದು ವೋಟನ್ನು ಹಾಕುವುದರ ಮೂಲಕ ಮೋದಿಯವರ ಗೆಲುವಿಗೆ ಕಾರಣರ ಕರ್ತರಾಗಬೇಕು ಎಂದು ಶಾಸಕ ಬಸವರಾಜ್ ಮತ್ತು ಹೇಳಿದರು.

ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳಿಂದ ಕಲ್ಬುರ್ಗಿ ಗ್ರಾಮೀಣ ಮತ ಕ್ಷೇತ್ರದ ಜನರು ಮರುಳಾಗದೆ ಸುಮಾರು 13 ಸಾವಿರ ಮತಗಳಿಂದ ಶಾಸಕನನ್ನಾಗಿ ಆಯ್ಕೆ ಮಾಡಿದ್ದು ಈ ಬಾರಿ ಹೆಚ್ಚಿನ ಮುನ್ನಡೆಯೊಂದಿಗೆ ಬಿಜೆಪಿಯ ನ್ನು ಗೆಲ್ಲಿಸಿಕೊಡಲು ಕ್ಷೇತ್ರದ ಜನರು ಸಿದ್ಧರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ 20,000 ಮತಗಳ ಮುನ್ನಡೆಯನ್ನು ನೀಡಿದ್ದ ಗ್ರಾಮೀಣ ಮತಕ್ಷೇತ್ರದ ಪ್ರಜ್ಞಾವಂತ ಮತದಾರರು ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಜಾದವ್ಗೆ ವೋಟು ಹಾಕುವುದರ ಮೂಲಕ ಬೆಂಬಲಿಸಲಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ಹಗಲು ರಾತ್ರಿ ದುಡಿದು ಜಾಧವ್ ಅವರನ್ನು ಲೋಕಸಭೆಗೆ ಕಳುಹಿಸಲು ಪಣ ತೊಟ್ಟಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಹನುಮಂತ ರಾವ್ ಮಾಲಾಜಿ, ಸಂಗಮೇಶ್ ವಾಲಿ ಮಲ್ಲಿನಾಥ ಪಾಟೀಲ್ ರೇವಣಪ್ಪ ಸಾಹುಕಾರ್, ಸಿದ್ದಣ್ಣಗೌಡ, ಶಶಿಕಲಾ ಟೆಂಗಳಿ, ರಾಜಕುಮಾರ್ ಪಾಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಣ್ಣಾ ರಾವ್ ಮತ್ತು ಹಣಮಂತ ಬಿರಾದರ್ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here