ಕಸಾಪ: ಏ.28 ರಂದು ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

0
50

ಕಲಬುರಗಿ: ಮಾನವನ ಜೀವನದ ಮೌಲ್ಯ ತಿಳಿಸುವ ಸಾಮಥ್ರ್ಯ ಹೊಂದಿರುವ ತತ್ವಪದಗಳಲ್ಲಿ ನಿಜವಾದ ತಿರುಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸುವ ಪ್ರಯತ್ನದೊಂದಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ತತ್ವಪದ ಸಾಹಿತ್ಯ ಸಮ್ಮೇಳನವನ್ನು ಏ. 28 ರಂದು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ತೇಗಲತಿಪ್ಪಿ, ನಮ್ಮ ಕನ್ನಡ ನಾಡಿನ ಅನೇಕ ಪರಂಪರೆಗಳಲ್ಲಿ ತತ್ವಪದ ಪರಂಪರೆಯೂ ಒಂದಾಗಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ತತ್ವಪದಗಳು ಜನಜೀವನದ ಅವಿಭಾಜ್ಯ ಅಂಗಗಳಾಗಿವೆ. ನಮ್ಮೆಲ್ಲರ ಬದುಕು ಅರ್ಥಪೂರ್ಣವಾಗಬೇಕಾದರೆ ಪ್ರತಿಯೊಬ್ಬರೂ ತತ್ವಪದಗಳಲ್ಲಿನ ತಿರುಳನ್ನು ಅರ್ಥೈಸಿಕೊಳ್ಳಬೇಕಾದುದು ಇಂದು ಅವಶ್ಯವಿದೆ ಎಂದು ಅವರು ವಿವರಿಸಿದರು.

Contact Your\'s Advertisement; 9902492681

ಅಂದು ಬೆಳಗ್ಗೆ 9.30 ಕ್ಕೆ ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕನ್ನಡ ಭವನದ ವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕøತಿಕ ಮೆರವಣಿಗೆ ಜರುಗುವುದು.
ನಂತರ 10.45 ಕ್ಕೆ ಅನುಭಾವಿ ಕವಿ ಜಂಬಗಿ ಶರಣರ ವೇದಿಕೆಯಡಿಯಲ್ಲಿ ನಡೆಯುವ ತತ್ವಪದ ಸಾಹಿತ್ಯ ಸಮ್ಮೇಳವನ್ನು ನಾಡಿನ ಹಿರಿಯ ಸಂಸ್ಕøತಿ ಚಿಂತಕ ಮಲ್ಲಿಕಾರ್ಜುನ ಕಡಕೋಳ ಉದ್ಘಾಟಿಸಲಿದ್ದು, ಚಿಗರಿಹಳ್ಳಿ ಶ್ರೀ ಜಗದ್ಗುರು ಮರುಳಶಂಕರ ದೇವರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಸಮ್ಮುಖ ವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು ಸರ್ವಾಧ್ಯಕ್ಷತೆ ನುಡಿಗಳನ್ನಾಡಲಿದ್ದು, ಜಿಲ್ಲಾ ಕಸಾಪ ವಿಜಯಕುಮಾರ ತೇಗಲತಿಪ್ಪಿ, ನಿವೃತ್ತ ಉಪನ್ಯಾಸಕ ಮಹ್ಮದ್ ಅಲ್ಲಾವುದ್ದೀನ್ ಸಾಗರ, ಆರತಿ ಪಾಟೀಲ ಉಪಸ್ಥಿತರಿರುವರು.

ಮಧ್ಯಾಹ್ನ 12.30 ಕ್ಕೆ ತತ್ವಪದಗೊಳಗಿನ ತಿಳಿವು ಎಂಬ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ:ತತ್ವಪದಗಳ ಪ್ರಸ್ತುತತೆ ಕುರಿತು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ತತ್ವಪದ ಸಾಹಿತ್ಯ: ಕರ್ನಾಟಕ ಸೌಹಾರ್ದ ಪರಂಪರೆ ಕುರಿತು ಚಿಂತಕ ಡಾ. ಗೌಸುದ್ದೀನ್ ತುಮಕುರಕರ್ ವಿಚಾರ ಮಂಡನೆ ಮಾಡಲಿದ್ದಾರೆ. ಜನಪದ ಗಾಯಕಿ ಈರಮ್ಮಾ ಗುರುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಮಲ್ಲಿನಾಥಗೌಡ ಪಾಟೀಲ ಯಲಗೋಡ, ಗೌಡಪ್ಪಗೌಡ ಪಾಟೀಲ ಮಲ್ಕಾಪಲ್ಲಿ, ಲಕ್ಷ್ಮೀಕಾಂತ ಸ್ವಾದಿ, ಮಲ್ಲಿನಾಥ ಪಾಟೀಲ ಕಾಳಗಿ, ಡಾ. ಗೋವಿಂದರಾಜ ಆಲ್ದಾಳ ಉಪಸ್ಥಿತರಿರುವರು.

ಮಧ್ಯಾಹ್ನ 2.05 ಕ್ಕೆ ನಡೆಯುವ ತತ್ವಪದ ಸಂಭ್ರಮದಲ್ಲಿ ತತ್ವಪದ ಗಾಯಕರಾದ ಶಿವರುದ್ರಯ್ಯಾ ಗೌಡಗಾಂವ, ಮಲ್ಲಿಕಾರ್ಜುನ ಫರಹತಾಬಾದ, ಶಿವಸಂಗಪ್ಪ ಹೂಗಾರ ಗಂವ್ಹಾರ, ಮಹಾಂತಪ್ಪ ಎಸ್ ನಾಯಿಕೋಡಿ, ಬಸವೇಶ್ವರ ಭಜನಾ ಮಂಡಳಿ, ಈರಯ್ಯಾ ಸ್ವಾಮಿ ಯಾತನೂರ, ಶ್ರೀಧರ ಹೊಸಮನಿ, ಮಹಾಂತಪ್ಪ ಕಟ್ಟಿಮನಿ, ಎಂ.ಎನ್. ಸುಗಂಧಿ, ಸಾಯಿಬನ್ಣ ಕಟ್ಟಿಮನಿ, ಶೃತಿ ಚರಂತ್ರಿಮಠ, ದಾನೇಶ್ವರಿ ಹಿರೇಮಠ ಸೇರಿದಂತೆ ಅನೇಕರು ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಗೀತ ಕಲಾವಿದ ಬಾಬುರಾವ ಕೋಬಾಳ ಅಧ್ಯಕ್ಷತೆ ವಹಿಸಲಿದ್ದು, ಶ್ರೀಹರಿ ಕರಕೆಳ್ಳಿ, ಗುರುಬಸಪ್ಪ ಚಾಂದಕವಟೆ, ಮಹೇಶ ಚಿಂತನಪಳ್ಳಿ ಉಪಸ್ಥಿತರಿರುವರು.

ಮಧ್ಯಾಹ್ನ: 3.30 ಕ್ಕೆ ಹಿರಿಯ ಕವಿ ಎಚ್.ಬಿ.ತೀರ್ಥೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ತತ್ವಪದ ಕವಿಗೋಷ್ಠಿಯಲ್ಲಿ ಅನುಭವಿ ಕವಿಗಳಾದ ಕಲ್ಲಯ್ಯಾ ಸ್ಥಾವರಮಠ, ಶಕುಂತಲಾ ಪಾಟೀಲ, ನರಸಿಂಗರಾವ ಹೇಮನೂರ, ಡಾ. ಪರ್ವೀನ್ ಸುಲ್ತಾನಾ, ಭೀಮರಾಯ ಹೇಮನೂರ, ಸಿದ್ಧರಾಮ ಸಿ ಸರಸಂಬಿ, ಪಂಚಾಕ್ಷರಿ ಪೂಜಾರಿ, ಪ್ರಭು ನಿಷ್ಠಿ ನಿಡಗುಂದಾ, ವಿಜಯಕುಮಾರ ಪಾಟೀಲ, ಎಸ್ ಎಸ್, ಚತುರಾಚಾರ್ಯಮಠ, ಮಲ್ಲಿಕಾರ್ಜುನ ಆಲಮೇಲ ಯಡ್ರಾಮಿ ಅವರು ತತ್ವಪದಕಾರರ ಕುರಿತು ಕವನ ವಾಚಿಸಲಿದ್ದಾರೆ. ವಿಶ್ವಾರಾಧ್ಯ ಬಿರಾಳ ಶಹಾಬಾದ, ಪುನೀತರಾಜ ಸಿ ಕವಡೆ, ಡಾ. ರಾಜಶೇಖರ ಕಟ್ಟಿಮನಿ, ಚಂದ್ರಕಾಂತ ಬಿರಾದಾರ, ಅನೀಲ ಮುಗಳಿ, ಚಂದ್ರಶೇಖರ ಬಿಜಾಪೂರ, ಬಾವುರಾವ ಪಾಟೀಲ ಮಾಡಿಯಾಳ ಉಪಸ್ಥಿತರಿರುವರು.

ಸಾ. 5.05 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಶ್ರೀಶೈಲ್ ನಾಗರಾಳ ಸಮಾರೋಪ ನುಡಿಗಳನ್ನಾಡಲಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ಕರ್ನಾಟಕ ನೃತ್ಯ, ಸಂಗೀತ ಅಕಾಡೆಮಿಯ ಸದಸ್ಯ ಶಂಕರ ಹೂಗಾರ ದೇಸಾಯಿ ಕಲ್ಲೂರ, ಹಿರಿಯ ಸಾಹಿತಿ ಸೂರ್ಯಕಾಂತ ಸೊನ್ನದ, ಮಹಾನಂದಾ ಸಿಂಗೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಜಾನಪದ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದ ಪ್ರಮುಖರಾದ ದೇವೀಂದ್ರ ಬಿರಾದಾರ ಮುರಗಾನೂರ, ಶಿವಶರಣಪ್ಪ ಸುಜ್ಯಾತ್ ದೇಗಾಂವ, ನಬಿ ಪಡೇಲ್ ಹರವಾಳ, ದೇವೇಂದ್ರಪ್ಪ ಸಜ್ಜನ್, ಶಾಂತಲಿಂಗ ಪಾಟೀಲ ಕೋಳಕೂರ, ಬಸವರಾಜ ಆಲಗೂಡ, ಚಂದ್ರಶೇಖರ ಹೊಸೂರಕರ್, ಮಲ್ಲಿನಾಥ ಮೇಳಕುಂದಾ, ಶರಣಮ್ಮ ಪಿ ಸಜ್ಜನ್, ರಾಮಯ್ಯಸ್ವಾಮಿ ಐನೋಳ್ಳಿ, ಕರಬಸಯ್ಯ ಸ್ವಾಮಿ ಮಠಪತಿ, ವಿಶ್ವನಾಥ ಬಾಳದೆ ಟೆಂಗಳಿ ಅವರನ್ನು ಸತ್ಕರಿಸಲಾಗುವುದು.
ಕಲ್ಯಾಣ ನಾಡಿನ ತತ್ವಪದಕಾರರ ಭಾವಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಹಕಾರ ಧುರೀಣ ಚನ್ನಮಲ್ಲಯ್ಯ ಎಸ್ ಹಿರೇಮಠ ಅವರು ಚಾಲನೆ ನೀಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕಲ್ಯಾಣಕುಮಾರ ಸಂಗಾವಿ, ಕಾರ್ಯಾಧ್ಯಕ್ಷ ಬಲವಂತರಾಯಗೌಡ ಬಿರಾದಾರ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ,ಪ್ರಮುಖರಾದ ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಎಂ ಎನ್ ಸುಗಂಧಿ, ಸಂತೋಷ ಕುಡಳ್ಳಿ, ಎಸ್ ಕೆ ಬಿರಾದಾರ, ನಾಗಪ್ಪ ಎಂ ಸಜ್ಜನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here