ಸುಬ್ರಾವ್ ಕುಲಕರ್ಣಿ ಅವರ ಕಥೆಗಳು ಮಾನವೀಯತೆ ಗುಣ ಹೊಂದಿವೆ: ಡಾ.ಜಯದೇವಿ ಗಾಯಕವಾಡ

0
22

ಕಲಬುರಗಿ: ಸಾಹಿತಿ,ಕವಿ,ಕಥೆಗಾರರಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅನುಕಂಪ ಇರಬೇಕು.ಆ ಸಾಮಾಜಿಕ ವ್ಯವಸ್ಥೆಯ ನೋವುಗಳು ಇರದಿದ್ದರೆ ಕಂಡ ಅನುಭಗಳಿಗೆ ಕಥಾ ಹಂದರ ಹೆಣೆಯುವ ಮೂಲಕ ಒಬ್ಬ ಸಮರ್ಥ ಕಥೆಗಾರ ಸುಬ್ರಾವ್ ಕುಲಕರ್ಣಿಯವರಾಗಿದ್ದಾರೆ. ರಾಗ ದರ್ಬಾರಿ ಕಥಾ ಸಂಕಲನದ ಮೂಲಕ ಅನನ್ಯವಾದ ಭಾರತೀಯ ಸಂಸ್ಕೃತಿ,ದೇಶ ಪ್ರೇಮ,ರಂಗಭೂಮಿ, ಹೆಣ್ಣಿನ ಸಮಸ್ಯೆ,ಜಾತಿವ್ಯವಸ್ಥೆ, ಮಹೃದಯ ವೈಶಾಲ್ಯತೆ, ಮಾನವೀಯತೆ ಹೊಂದಿದ ಕಥೆಗಳು.ಹತ್ತು ಕಥೆಗಳು ಒಂದಿಲ್ಲೊಂದು ವೈಶಿಷ್ಟ್ಯತೆ ಹೊಂದಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದಬಡಾ.ಜಯದೇವಿ ಗಾಯಕವಾಡ ನುಡಿದರು.

‌‌‌‌‌‌‌ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಏರ್ಪಡಿಸಿದ ಮಾಸಿಕ ಕಾರ್ಯಕ್ರಮದಲ್ಲಿ ಸುಬ್ರಾವ್ ಕುಲಕರ್ಣಿ ಅವರ ರಾಗ ದರ್ಬಾರಿ ಕಥಾಸಂಕಲನ ಕುರಿತು ವಿಮರ್ಶಾತ್ಮಕ ಮಾತನಾಡಿ ವಾಸ್ತವಿಕ ಚಿಂತನೆಯ ಕಥೆಗಳಾಗಿವೆಂದರು.

Contact Your\'s Advertisement; 9902492681

ಕಥೆಗಾರ ಕಥೆಗಳು ಹುಟ್ಟುವುದು ಪರಿಣಾಮಕಾರಿ ಎಲ್ಲರ ಅಭಿಪ್ರಾಯವಾಗಿವೆ.ಬರೆದದ್ದು ವಿಮರ್ಶೆ ಆಗಬೇಕೆಂದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಪುಸ್ತಕ ಸಂಸ್ಕೃತಿ ಬೆಳೆಸಿ,ಲೇಖಕರ ಪ್ರೋತ್ಸಾಹ, ಯುವಕರು,ವಿದ್ಯಾರ್ಥಿಗಳು ಓದುವ ಹವ್ಯಾಸ ಕಡಿಮೆ ಆಗುತ್ತದೆ.ಅದನ್ನು ಬೆಳೆಸುವ ದೃಷ್ಟಿ ಹೊಂದಿದ್ದೇವೆಂದರು.

ವಿಶ್ವನಾಥ ಭಕರೆ,ಪ.ಮನುಸಗರ,ಆವಂಟಿ,ಶಿವಾನಂದ ಹಿರೇಮಠ ಸೂರ್ಯಕಾಂತ ಸೊನ್ನದ,ಡಾ.ರಾಜಕುಮಾರ ಮಾಳಗೆ ಡಾ.ಸುನೀಲ ಜಾಬಾದಿ,ಡಾ.ಚಿದಾನಂದ ಕುಡ್ಡನ್,ಡಾ. ಮಲ್ಲಿನಾಥ ನಿಂಬರ್ಗೆ,ಡಾ.ವಿಠ್ಠಲ ದಂಡಿನ, ಡಾ.ಚಿ.ಸಿ. ನಿಂಗಣ್ಣ, ಶಾಂತಲಿಂಗಪ್ಪ ಪಾಟೀಲ, ನಾಗಣ್ಣ ಗಣಜಲಖೇಡ,ಡಾ.ಗವಿಸಿದ್ಧಪ್ಪ ಪಾಟೀಲ,ಡಾ.ಸಿದ್ಧಪ್ಪ ಹೊಸಮನಿ,ಸಿದ್ಧರಾಮ ಸಿ.ಸರಸಂಬಿ ಉಪಸ್ಥಿತರಿದ್ದರು.
ಸಂಚಾಲಕ ಡಾ.ಶರಣಬಸಪ್ಪ ವಡ್ಡನಕೇರಿ ನಿರೂಪಿಸಿ ವಂದಿಸಿದರು.ಸಂಘದ ಉಪಾಧ್ಯಕ್ಷ ಡಾ.ಸ್ವಾಮಿರಾವ್ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here