ಬಸವಜಯಂತಿ: ವಿವಿಧ ಸ್ಪರ್ಧೆಗೆ ಚಾಲನೆ

0
217

ಕಲಬುರಗಿ: 891ನೇ ಬಸವ ಜಯಂತಿ ಅಂಗವಾಗಿ ಬಸವ ಜಯಂತಿ ಉತ್ಸವ ಸಮಿತಿಯ ಮಹಿಳಾ ಘಟಕದ ವತಿಯಿಂದ ನಗರದ ಪ್ರಗತಿ ಕಾಲೋನಿಯ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಭವನ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಎಂದು ಬಸವ ಜಯಂತಿ ಉತ್ಸವ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ನಾಗವೇಣಿ ಪಾಟೀಲ ರೇವೂರ ತಿಳಿಸಿದ್ದಾರೆ.

ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ವಚನ ಕಂಠ ಪಾಠ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ (ಶರಣರ ಭಾವಚಿತ್ರ), ಬಸವಣ್ಣನವರ ವಚನಾಧಾರಿತ ಭರತ ನಾಟ್ಯ ಸ್ಪರ್ಧೆ, ಶರಣರ ಉಡುಪಿನ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸಲಾಗಿತ್ತು.

Contact Your\'s Advertisement; 9902492681

ಅಫಜಲಪುರ, ದೇಸಾಯಿ ಕಲ್ಲೂರ, ಜೇವರ್ಗಿ ಹಾಗೂ ಕಲಬುರಗಿ ನಗರದ ನೂರಾರು ವಿದ್ಯಾರ್ಥಿಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು.

ಸಂಗೀತಾ ಕೊರಳ್ಳಿ, ಚಂದ್ರಕಲಾ ಹಾರಕೂಡೆ, ಮಲ್ಲಮ್ಮ ಕಡಾಲ, ಶ್ರೀದೇವಿ ಸಾಸನಗೇರಾ, ಶ್ರೀದೇವಿ ಅಫಜಲಪುರ, ಶೀಲಾವತಿ ಇಂಗಿನ್, ಚಂದ್ರಕಲಾ ವಿ.ಎ. ವಿವಿಧ ಸ್ಪರ್ಧೆಗಳ ನಿರ್ಣಾಯಕರಾಗಿ ಆಗಮಿಸಿದ್ದರು.

ಬುದ್ಧಿಮಾಂದ್ಯ ಮಕ್ಕಳು ಕೂಡ ಶರಣರ ವೇಷ ಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪ್ರಮಥ ಸತ್ಯಂಪೇಟೆ ಪ್ರಾರ್ಥನೆಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here