ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಾಭಿಮಾನ ಮೂಡಿಸಿ: ಅಧ್ಯಕ್ಷ ಗೌಡಪ್ಪಗೌಡ ಮಾಲಿ ಪಾಟೀಲ್

0
70

ಸುರಪುರ: ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಸ್ತು, ಸಮಯ ಪ್ರಜ್ಞೆ, ಹಾಗೂ ದೇಶಾಭೀಮಾನ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಸ್‌ಡಿಎಂಸಿ ಅಧ್ಯಕ್ಷ ಗೌಡಪ್ಪಗೌಡ ಮಾಲಿ ಪಾಟೀಲ್ ಹೇಳಿದರು.

ಮಂಗಳವಾರ ತಾಲೂಕಿನ ಕೋನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಹಾಗೂ ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವು ಹೈದರಾಬಾದ್ ಕರ್ನಾಟಕ ಭಾಗದ ೬ ಜಿಲ್ಲೆಗಳು ಹೈದರಾಬಾದ್ ರಾಜ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದವು. ಅಂದು ಅವರು ಈ ಭಾಗವನ್ನು ರಾಷ್ಟ್ರೀಯ ಒಕ್ಕೂಟಕ್ಕೆ ಸೇರ್ಪಡೆಯಾಗಲು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಂದಿನ ಗೃಹ ಸಚಿವ ಸರ್ಧಾರ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಸೈನಿಕ ಕಾರ್ಯಾಚರಣೆ ಜೊತೆಗೆ ಆಯಾ ಭಾಗದ ಪ್ರಮುಖ ನಾಯಕರು ಜನತೆ ಸೇರಿ ಹೋರಾಟ ಮಾಡಿದ ಫಲವಾಗಿ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ತಿಳಿಸಿದರು.

Contact Your\'s Advertisement; 9902492681

ಸ್ವಾತಂತ್ರ್ಯ ಹೋರಾಟಕ್ಕೆ ಹಲವಾರು ಮಹನೀಯರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ವಿದ್ಯಾರ್ಥಿಗಳಿಗೆ ಇತಿಹಾಸ ಪರಿಚಯಿಸುವುದು ಅವಶ್ಯಕವಾಗಿದೆ. ಇದರಿಂದ ಅವರಲ್ಲಿ ಮಾತೃಭೂಮಿ ಬಗ್ಗೆ ಗೌರವ ಮೂಡುತ್ತದೆ ಎಂದು ಹೇಳಿದರು. ವಿರುಪಣ್ಣಗೌಡ ಕೋಳೂರು ಮಾತನಾಡಿ ಪರಿಸರ ನಾಶದಿಂದ ಪರಿಸರದಲ್ಲಿ ಅಸಮತೋಲನವುಂಟಾಗಿ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ನಡೆದ ಪ್ರವಾಹದಿಂದ ನದಿ ಪಾತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದು ದುರಾದೃಷ್ಟಕರ. ಯುವ ಪೀಳಿಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಶಾಲಗಳಲ್ಲಿ ಗಿಡಗಳನ್ನೆ ನೆಡಬೇಕು. ವಿದ್ಯಾರ್ಥಿಗಳು ಪರಿಸರವನ್ನು ಉಳಿಸಿ ಬೆಳೆಸಬೇಕು ಇದರಿಂದ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಹಾಗೆ ನಾಡಿನ ಕಲೆ, ವಾಸ್ತುಶಿಲ್ಪ, ಧಾರ್ಮಿಕ ಸಂಸ್ಕೃತಿ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆಗೆ ವಿಶ್ವಕರ್ಮರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ತಿಪ್ಪಯ್ಯಸ್ವಾಮಿ, ಸರಸ್ವತಿ, ಶೋಭಾ, ಅನಿತಾ, ಬಸಮ್ಮ, ಶಿವರಾಮಯ್ಯ, ಊರಿನ ಗಣ್ಯರಾದ ಅಂಬ್ರಯ್ಯ ಸ್ವಾಮಿ, ಶಾಂತಗೌಡ ಪಾಟೀಲ್, ಪರಣ್ಣಗೌಡ ಶಾಂತಪೂರ, ಪರಮಣ್ಣ ಶಳ್ಳಿಗ್ಗಿ, ನಾನೆಗೌಡ ದಾನರಡ್ಡೆ, ಅಂಬ್ರೇಶಗೌಡ ಸರ್ಜಾಪುರ, ಶಾಂತಮೂರ್ತಿ ವಿಶ್ವಕರ್ಮ, ಮಲ್ಲಯ್ಯ ವಿಶ್ವಕರ್ಮ, ಈರಣ್ಣ ಗುಡಿಮನಿ, ಪರಮಣ್ಣ, ಪರಮಣ್ಣ ಪೂಜಾರಿ ಅಂಗನವಾಡಿ ಶಿಕ್ಷಕಿ ರೇಣುಕಾ ವಿ, ಕಾಶಿಬಾಯಿ, ಲಕ್ಷ್ಮೀ ಆಶಾ ಕಾರ್ಯಕರ್ತೆ ರಾಚಮ್ಮ, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here