ದೇಶದ ದುಬಾರಿ ಪ್ರಧಾನ ಮಂತ್ರಿ ಮೋದಿಯನ್ನು ತಿರಸ್ಕರಿಸಿ

0
99

ಕಲಬುರಗಿ: ಆರ್ಥಿಕ ಮತ್ತು ನಿರುದ್ಯೋಗದಂತ ಸಂಕಷ್ಟದ ಬಡ ದೇಶಕ್ಕೆ ದುಬಾರಿ ಪ್ರಧಾನಿ ಸಿಕ್ಕಿದ್ದು ದುರ್ದೈವ, ಸನ್ಯಾಸಿಯಾಗಿದ್ದು, ದೇಶಕ್ಕೊಸ್ಕರವೆಂದು ಪ್ರಧಾನಿ ಮೋದಿಯವರು ಮೋಜಿನ ಮಾತು ಹೇಳಿ ದ್ರೋಹ ಬಗೆದಿದ್ದಾರೆ. ಇಂಥ ಪ್ರಧಾನಿಯನ್ನು ಜನ ತಿರಸ್ಕರಿಸಬೇಕು ಎಂದು ಮುಖ್ಯಮಂತ್ರಿ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.

ಬೀದರ್ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಾಗರ ಈಶ್ವರ ಖಂಡ್ರೆ ಪರ ಆಳಂದ ತಾಲೂಕಿನ ಕಿಣ್ಣಿಸುಲ್ತಾನ, ಹೋದಲೂರ, ಆಳಂಗಾ, ತಡೋಳಾ, ಖಜೂರಿಯಲ್ಲಿ ಭಾನುವಾರ ಕೈಗೊಂಡ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ನೇಹರು ಪ್ರಧಾನಿಯಾಗಿದ್ದಾಗ 25 ಸಾವಿರ ಮಾತ್ರ ಖರ್ಚಾದರೆ, ಮೋದಿಯವರ 82 ಕೋಟಿಯಲ್ಲಿ ಆರು ಹೊಸ ಕಾರು, 18,500 ಕೋಟಿಯಲ್ಲಿ ಎರಡು ವಿಮಾನ ಖರೀದಿಸಿದ್ದಾರೆ. ಅವರ ಪೇನ್ನು 2.50 ಲಕ್ಷ ರೂಪಾಯಿ, ಕನ್ನಡಕ 1.50ಲಕ್ಷ ರೂಪಾಯಿ ಇದೆ. ಇದಕ್ಕೆ ಯಾರಪ್ಪನ ದುಡ್ಡು, ಬಡವರ ಮಕ್ಕಳಿಗೆ 2 ರೂಪಾಯಿ ಪೇನಿಗೆ ಗತಿಯಿಲ್ಲವಾಗಿದೆ. ಕೆಲಸವಿಲ್ಲ. ವಾಸಿಸಲು ಮನೆ ಒದಗಿಸಲಾಗಿಲ್ಲ. ಪ್ರಚಾರಕ್ಕೆ ಬಂದರೆ ದಿನಕ್ಕೆ 5 ಕೋಟಿ ಖರ್ಚಾಗುತ್ತಿದೆ ಇಂಥ ದುಬಾರಿ ಪ್ರಧಾನಿಯಾಗಿದ್ದು ಉದ್ಯಮಿ ಅದಾನಿಗೆ ಮಾಡಿದ ಲಾಭದಲ್ಲಿ ಇಡೀ ವರ್ಷ ನೆರೇಗಾ ಕೆಲಸ ಕೈಗೊಳ್ಳಬಹುದಾಗಿದೆ ಎಂದರು.

ಕಾಂಗ್ರೆಸ್ ಗ್ಯಾರೆಂಟಿ ನೀಡಿ ಬಡವರ ಬದುಕು ಕಟ್ಟಿಕೊಡಲು ಪ್ರಯತ್ನಿಸಿದ್ದರೆ ಬಿಜೆಪಿಗರು ಬಿಟ್ಟಿಗ್ಯಾರೆಂಟಿಗಳಿಂದ ಸರ್ಕಾರ ದಿವಾಳಿಯಾಗಿದೆ ಎನ್ನುತ್ತಿದ್ದಾರೆ. ಜನರ ದುಡ್ಡು ಜನರಿಗೆ ಕೊಟ್ಟರೆ ಇವರಿಗ್ಯಾಕೆ ಹೊಟ್ಟೆಯೂರಿ ಎಂದು ಪಾಟೀಲ ವಾಗ್ದಾಳಿ ನಡೆಸಿದ ಅವರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಕೊಟ್ಟ ಗ್ಯಾರೆಂಟಿಗಳು ಸಹ ಜಾರಿಯಾಗಲಿವೆ ಎಂದರು.

ರೈತರ ಸಾಲಮನ್ನಾ ಮಾಡುವಂತೆ ರೈತರು ಹೇಳಿದರು ಯಾವ ಪರಿಹಾರವೂ ಕೊಡದೆ ಕೇಂದ್ರ ಹಿಂದೇಟು ಹಾಕಿದೆ ರೈತರಿಗೆ ನ್ಯಾಯಕೊಟ್ಟಿಲ್ಲ. ಪಾಲು ನೀಡುವಲ್ಲಿ ಮೋದಿಯವರು ಕರ್ನಾಟಕಕ್ಕೆ ಮಲತಾಯಿ ದೋರಣೆ ಅನುಸರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕುಟುಂಬದ ಮಹಿಳೆಯೋರ್ವಳಿಗೆ ವಾರ್ಷಿಕ ಲಕ್ಷ ರೂಪಾಯಿ, ರಾಜ್ಯ ಸರ್ಕಾರದದಿಂದ 24 ಸಾವಿರ ಸೇರಿ 1.24 ಲಕ್ಷ ರೂಪಾಯಿ ಕುಟುಂಬದ ಮಹಿಳೆಗೆ ಕಾಂಗ್ರೆಸ್ ನೀಡಲಿದೆ ಎಂದರು.

ರೈತರ 72 ಸಾವಿರ ಕೋಟಿ ಸಾಲವನ್ನು ಪ್ರಧಾನಿ ಮೋದಿ ಅವರು 10 ವರ್ಷದಲ್ಲಿ ಒಂದು ರೂಪಯಿ ಮನ್ನಾಮಾಡಿಲ್ಲ. 2022ರಲ್ಲಿ ಒಟ್ಟು 14 ಲಕ್ಷ ಕೋಟಿ ರೈತ ಸಾಲಮನ್ನಾ ಮಾಡುವ ಬದಲು ಶ್ರೀಮಂತರಾದ ಅದಾನಿ ಅಂಬಾನಯವರಿಗೆÉ ರೈತ ಸಾಲದ ದುಪ್ಪಟ್ಟು ಮನ್ನಾ ಮಾಡಿದ್ದಾರೆ. ಅದಾನಿಗೆ 16 ಸಾವಿರ ಕೋಟಿ ದಿನಕ್ಕೆ ಅದಾಯ ಬರುವಂತೆ ಮಾಡಿದ್ದು, ಇದು ನ್ಯಾಯವೇ ಸಾಮಾಜಿಕ, ಆರ್ಥಿಕ ನ್ಯಾಯವೇ ಇದು ಜನರಿಗೆ ಮೋಸವಲ್ಲವೇ ಎಂದು ಪ್ರಶ್ನಿಸಿದರು.

ನರೇಗಾ ಕೂಲಿ ಕಾರ್ಮಿಕರಿಗೆ ಕೇವಲ 340 ರೂಪಾಯಿ ಇದೆ. ಅಧಿಕಾರಕ್ಕೆ ಬಂದರೆ 400 ರೂಪಾಯಿ ಕಾಂಗ್ರೆಸ್ ಕೊಡಲಿದೆ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೇರಿ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಭರವಸೆ ಈಡೇರಿಸಿಲ್ಲ. ರೈತರ ಆರ್ಥಿಕ ವೃದ್ಧಿ ಎಂದಿದ್ದರು ಯಾರಿಗೂ ಆಗಿಲ್ಲ. ಸ್ವೀಜಲ್ಯಾಂಡನಲ್ಲಿ ಕಾಂಗ್ರೆಸ್ಸಿಗರು ಹಣವಿಟ್ಟಿದ್ದಾರೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಕೊಡುತ್ತೇನೆ ಎಂದಿದ್ದರು ಯಾರಿಗೂ ಕೊಟ್ಟಿಲ್ಲ. ದೇಶದ ಜನತೆಗೆ ದೊಡ್ಡ ಸುಳ್ಳು ವಂಚನೆ ಮಾಡಿರುವ ಇಂಥ ಪ್ರಧಾನಿಗಳನ್ನು ದಿಕ್ಕಿರಿಸಬೇಕು ಎಂದು ಹರಿಹಾಯ್ದರು.

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಈಶ್ವರ ಖಂಡ್ರೆ ಅವರು ಸ್ಪರ್ಧಿಸಿದ್ದು, ಈ ಚುನಾವಣೆ ಬಹು ಮಹತ್ವದಾಗಿದೆ. ಜ್ಯಾತ್ಯೀತತ ಮತ್ತು ಸಂವಿಧಾನ ಕಾಪಾಡುವುದರ ಜೊತೆಗೆ ದೇಶವನ್ನು ಕಟ್ಟುವುದಾಗಿದೆ. ಸಾಮಾನ್ಯ ಜನರ ಬದುಕು ಕಟ್ಟಿಕೊಡುವ ಚುನಾವಣೆ ಆಗಿದೆ. ಈ ಬಾರಿ ಕಾಂಗ್ರೆಸ್ ಪರ ಅಲೆಯಿದೆ. ಐದು ಗ್ಯಾರೆಂಟಿಗಳು ಮನಗೆ ಮುಟ್ಟಿದ್ದು ಮತದಾರರು ಒಲವು ತೋರಿದ್ದಾರೆ. ಈ ನಡುವೆ ಜನರ ಹಿತಕ್ಕಿಂತ ಜಾತಿ, ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚಿ ದೇಶವನ್ನು ಆಳಲು ಹೊರಟಿರುವ ಬಿಜೆಪಿಗೆ ಸೋಲಿಸಿ ಕಾಂಗ್ರೆಸಿಗೆ ವೋಟ್ ಕೊಟ್ಟು ಗೆಲ್ಲಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಅಭ್ಯರ್ಥಿ ಸಾಗರ ಖಂಡ್ರೆ ಸೇರಿದಂತೆ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here