ರಿಲ್ಯಾಕ್ಸ್ ಮೂಡ್ ಗೆ ಜಾರಿದ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್

0
350

ಕಲಬುರಗಿ: ಕಳೆದ 52 ದಿನಗಳಿಂದ ಸಖತ್ತ ಬ್ಯುಸಿಯಾಗಿದ್ದ ಲೋಕಸಭಾ ಸದಸ್ಯರಾದ ಡಾಕ್ಟರ್ ಉಮೇಶ್ ಜಾದವ್ ಬುಧವಾರದಿಂದ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ.

ಚುನಾವಣೆಯ ಪ್ರಮುಖ ಹಂತ ಮತದಾನ ಮುಗಿದ ಬಳಿಕ ಜಾದವ್ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರೂ ಲೆಕ್ಕ ಮಾತ್ರ ಪಕ್ಕ ಇಟ್ಟುಕೊಂಡಿದ್ದಾರೆ. ಹಾಗೆಂದು ಸುಮ್ಮನೆ ಕುಳಿತಿಲ್ಲ ಪತ್ರಿಕೆಗಳ ವರದಿ ಓದುವುದು,ಟಿವಿ ವಿಶ್ಲೇಷಣೆ ವೀಕ್ಷಣೆ ಮಾಡುವುದು ಜೊತೆಗೆ ಮನೆಯ ಉದ್ಯಾನದಲ್ಲಿ ಗಿಡಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ.

Contact Your\'s Advertisement; 9902492681

ಸೂರ್ಯನಗರಿ ಕಲಬುರ್ಗಿಯಲ್ಲಿ ಮತದಾನದ ದಿನ (ಮೇ .7) 45 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು ಚುನಾವಣೆಯ ಕಾವು ಕೂಡ ಜೋರಾಗಿತ್ತು ಮತದಾನದ ದಿನ ಮುಂಜಾನೆ ಐದು ಗಂಟೆಯಿಂದ ಕಾಲಿಗೆ ಚಕ್ರ ಕಟ್ಟಿ ಓಡಾಟ ನಡೆಸಿದ ಜಾಧವ್ ತನ್ನ ನಿತ್ಯ ಸಂಪ್ರದಾಯವನ್ನು ಮಾತ್ರ ಮರೆಯಲಿಲ್ಲ. ಪ್ರಾತಃಕಾಲ ಮನೆ ದೇವರಿಗೆ ಪೂಜೆ ಸಲ್ಲಿಸಿ ಹಿರಿಯರಿಗೆ ನಮಸ್ಕಾರ ಮಾಡಿ ನೇರವಾಗಿ ಶ್ರೀ ಶರಣಬಸವೇಶ್ವರ ಗುಡಿಯಲ್ಲಿ ಆರಾಧ್ಯ ದೇವರ ದರ್ಶನ ಪಡೆದರು ನಂತರ ಅಲ್ಲಿಂದ ಮತಗಟ್ಟೆಗೆ ತರಲಿ ತಮ್ಮ ಹಕ್ಕನ್ನು ಚಲಾಯಿಸಿದರು ಆಬಳಿಕ ಸುಡುಬಿಸಿಲಿನ ತಾಪವನ್ನು ಲೆಕ್ಕಿಸದೆ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೆಯನ್ನು ಪರಿಶೀಲಿಸಿದರು. ತಡರಾತ್ರಿವರೆಗೆ ಸುತ್ತಾಡಿದರು.

ಬಿಡುವಿಲ್ಲದ ಓಡಾಟ; ಕಳೆದ ಮಾರ್ಚ್ 16ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಲ್ಬುರ್ಗಿಗೆ ಆಗಮಿಸಿ ಭಾರತದ ಸಾರ್ವತ್ರಿಕ ಚುನಾವಣೆ ಪ್ರಚಾರ ಕ್ಕೆ ಶಂಖನಾದ ಮೊಳಗಿಸಿದರು ಅಂದೇ ಸಾಯಂಕಾಲ ನಾಲ್ಕು ಗಂಟೆಗೆ ಚುನಾವಣಾ ದಿನಾಂಕ ಪ್ರಕಟಗೊಂಡು ಚುನಾವಣೆ ನೀತಿ ಸಂಹಿತೆ ಜಾರಿ ಗೊಂಡಿತ್ತು. ಆನಂತರ ಕಣ್ಣಿಗೆ ನಿದ್ದೆ ಇಲ್ಲದೆ ಕಲ್ಬುರ್ಗಿ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ವಿಶಾಲ ಪ್ರದೇಶದಲ್ಲಿ ಗ್ರಾಮ ಗ್ರಾಮಗಳಿಗೂ ಮೂರು ನಾಲ್ಕು ಬಾರಿ ಸುತ್ತಾಡಿದರು.

ತಾರಾ ಪ್ರಚಾರಕರ ಜೊತೆ ಮಾಜಿ ಹಾಲಿ ಶಾಸಕರ ಜೊತೆ ಜಿಲ್ಲಾ ಪಂಚಾಯತ್ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಹಿರಿಯರು ಬುದ್ಧಿಜೀವಿಗಳ ಜೊತೆ ಬೆರೆತು ಮತ ಯಾಚಿಸಿದರು. ರಾತ್ರಿ 10 ಗಂಟೆಯ ವರೆಗೆ ಚುನಾವಣಾ ಪ್ರಚಾರ ಭಾಷಣದಲ್ಲಿ ಪಾಲ್ಗೊಂಡು ತಿರುಗಿ ಮನ ಸೇರಿದಾಗ ತಡರಾತ್ರಿ ಎರಡು-ಮೂರು ಗಂಟೆ ಆಗುತ್ತಿತ್ತು. ಕೇವಲ 2 ರಿಂದ 3 ತಾಸು ಮಾತ್ರ ನಿದ್ದೆ ಮಾಡಿ ದಿನ 5 ಗಂಟೆಗೆ ಎದ್ದು ಮತ್ತೆ ಯಥಾ ಪ್ರಕಾರ ಪ್ರಚಾರ ಅಂಗಣಕ್ಕೆ ಇಳಿಯುತ್ತಿದ್ದರು.

ಲೋಕಸಭಾ ಕ್ಷೇತ್ರದ ಒಂದು ತುದಿ ಅಬ್ಜಲ್ಪುರದಲ್ಲಿದ್ದರೆ ಇನ್ನೊಂದು ತುದಿ ಗುರುಮಠಕಲ್ ನಲ್ಲಿದೆ ಈ ಕ್ಷೇತ್ರಗಳಲ್ಲಿ ಪ್ರವಾಸದ ನಡುವೆ ಮೊಬೈಲ್ ಕಿವಿಗೆ ಆನಿಸಿಕೊಂಡು ಮಾತುಕತೆ, ತನ್ನ ಸಲಹಾ ತಂಡ ಮಾಧ್ಯಮ ಸಲಹೆಗಾರರು ಹಾಗೂ ತಜ್ಞರ ಜೊತೆ ಕಾರಲ್ಲಿ ಚರ್ಚೆ ರೂಪುರೇಷೆ ಹೆಣೆದು ಚುನಾವಣಾ ತಂತ್ರ ರೂಪಿಸುತ್ತಿದ್ದರು. ಚರ್ಚೆ,ಎಲೆಕ್ಷನ್ ಪ್ಲಾನ್ ಗೆ ಸಂಚರಿಸುತ್ತಿರುವ ಕಾರು ವಾರ್ ರೂಂ ಥರಾ ಇತ್ತು. ಊಟಕ್ಕೂ ವಿರಾಮ ಇಲ್ಲದೆ ಕಾರಿನೊಳಗಿದ್ದ ಬಿಸ್ಕತ್ತು ಬಾಳೆಹಣ್ಣು ತಿಂದು ಹಸಿವು ನೀಗಿಸುತ್ತಿದ್ದರು. ಸ್ವತಃ ವೈದ್ಯರಾಗಿರುವುದರಿಂದ ಆರೋಗ್ಯ ಪಾಲನೆಗೆ ಒತ್ತು ನೀಡಿದ್ದರು ಸಮಯದ ಕೊರತೆ ಓಡಾಟ ದ ವೇಗದಿಂದ ಯಾವುದು ಸಾಧ್ಯವಾಗುತ್ತಿರಲಿಲ್ಲ.

ಪ್ರಚಾರ ಭಾಷಣ ಸಭೆ ಇಲ್ಲದೆ ರಿಲಾಕ್ಸ್ ಮೂಡ್ ನಲ್ಲಿದ್ದು ಹೂವಿನ ಗಿಡಗಳಿಗೆ ನೀರುಣಿಸಿದರು. ನಂತರ ವ್ಯಾಯಾಮ ಮುಗಿಸಿ ಚಹಾ ಸವಿದರು ಟಿವಿ ಪತ್ರಿಕೆಗಳ ವರದಿ ವಿಶ್ಲೇಷಣೆ ಮೇಲೆ ಕನ್ನಡಿಗರು ಕುಟುಂಬದವರ ಜೊತೆ ಬೆರೆದರು. ಇಷ್ಟೆಲ್ಲದರ ಮಧ್ಯೆ ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಕ ಮಾಡಿಕೊಂಡ ಜಾಧವ್ ಅಭಿಪ್ರಾಯ ಸಂಗ್ರಹ (ಫೀಡ್ ಬ್ಯಾಕ್) ನಲ್ಲೂ ನಿರತರಾಗಿದ್ದರು.

ಮನೆಗೆ ನಾಯಕರು ಪಕ್ಷದ ಪ್ರಮುಖರು ಆಗಮಿಸಿದಾಗ ಗೆಲುವಿನ ಅಂಕಿ ಅಂಶಗಳ ಚರ್ಚೆ ಗಳನ್ನು ಮಾಡಿ ಗೆಲುವಿನ ಖಾತ್ರಿ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮೊಬೈಲ್ ರಿಂಗ್ ಅಣಿಸಿದಾಗ ತಾನೇ ಎತ್ತಿಕೊಂಡು ಅತ್ತ ಕಡೆಯಿಂದ ಶುಭಾಶಯದ ಸುರಿಮಳೆ, ಬರುತ್ತಿರುವುದನ್ನು ಕಂಡಾಗ ಅವರ ಮುಖ ಅರಳುತ್ತಿತ್ತು. ತಮ್ಮೆಲ್ಲರ ಆಶೀರ್ವಾದ ಮೋದಿ ಅವರ ಜನಪ್ರಿಯತೆ ಎಂದು ನಯವಾಗಿ ಉತ್ತರಿಸಿ ಸಂತಸ ಹಂಚಿಕೊಂಡರು.

ಪಕ್ಕದಲ್ಲಿ ಪೆನ್ನು ಮತ್ತು ಕಾಗದ ಇಟ್ಟುಕೊಂಡು ಅಂಕಿ ಅಂಶ ಕ್ರೋಡ್ಡಿಕರಿಸಿ ಮತಗಳ ಲೆಕ್ಕ ಪಕ್ಕಾ ಮಾಡಿ ಇನ್ನೇನು ಗೆಲುವಿಗೆ ಇನ್ನೊಂದು ಗೇಣು ಇರುವ ಭಾವ ವ್ಯಕ್ತವಾಗಿದೆ ಮತದಾರನು ಭವಿಷ್ಯ ಬರೆದಿದ್ದಾನೆ ಅಭ್ಯರ್ಥಿಯ ಭವಿಷ್ಯ ಈಗ ಮತಯಂತ್ರದಲ್ಲಿ ಭದ್ರವಾಗಿದೆ. ಜೂನ್ ನಾಲ್ಕರವರೆಗೆ ಕಾಯಬೇಕಷ್ಟೆ. ಮಂಗಳವಾರ ಮತದಾನವಾಗಿರುವುದರಿಂದ ನನಗೂ ಹಾಗು ರಾಷ್ಟ್ರಮಟ್ಟದಲ್ಲಿ ಮೋದಿಯವರಿಗೆ ಮಂಗಳಕರ ಸುದ್ದಿ ಖಚಿತ ಎಂದು ಖಾತ್ರಿ ವ್ಯಕ್ತಪಡಿಸಿ ಜಾದವ್ ರಿಲ್ಯಾಕ್ಸ್ ಮೂಡ್ ನಲ್ಲಿ ಸಮಯ ಕಳೆಯುತ್ತಿದ್ದಾರೆ.

ಮತದಾನ ಪ್ರಮಾಣ ಕಲಬುರ್ಗಿಯಲ್ಲಿ ಹೆಚ್ಚಾದುದರಿಂದ ಯುವ ಮತದಾರರ ಹಾಗೂ ಮೊದಲನೇ ಬಾರಿಗೆ ಮತ ಚಲಾಯಿಸುವವರ ಮನಸ್ಥಿತಿ ದೇಶಕ್ಕೆ ಮೋದಿ ಎಂಬ ಪ್ರಜ್ಞೆ ನನ್ನ ಗೆಲುವಿಗೆ ಸೋಪಾನವಾಗಲಿದೆ ಎನ್ನುತ್ತಾರೆ ಜಾತವು ಇನ್ನೇನು ಗೆಲುವಿಗೆ ಒಂದೇ ಮೆಟ್ಟಿಲು ಬಾಕಿ ಅದಕ್ಕಾಗಿ ಈಗ ಜಾತವು ರಿಲಾಕ್ಸ್.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here