ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

0
77

ಕಲಬುರಗಿ: ವಿಶ್ವ ಅಸ್ತಮಾ ದಿನಾಚರಣೆಯ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ವತಿಯಿಂದ ಬುಧವಾರ ಅಸ್ತಮಾ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ಕೆಬಿಎನ್ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ. ಸಿದ್ದಲಿಂಗ ಚೆಂಗಟಿ ಮಾತನಾಡಿ ಅಸ್ತಮಾದ ಬಗ್ಗೆ ಜಾಗೃತಿ ಅವಶ್ಯ. ವರ್ಷಕ್ಕೆ ಲಕ್ಷಾಂತರ ಜನ ಇದರಿಂದ ಸಾವನಪ್ಪುತ್ತಿದ್ದಾರೆ. ಜನರನ್ನು ಶಿಕ್ಷಿತಗೊಳಿಸಿದಲ್ಲಿ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿ ಜನರಲ್ ಮೆಡಿಸಿನ್ ವಿಭಾಗವನ್ನು ಶ್ಲಾಘಸಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಅಭಿನಂದಿಸಿದರು.

Contact Your\'s Advertisement; 9902492681

ಜನರಲ್ ಮೆಡಿಸಿನ್ ವಿಭಾಗದ ಡಾ. ಸುಮಂಗಲಾ ಅಸ್ತಮಾ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಸ್ತಮಾಕ್ಕೆ ಕಾರಣಗಳು,ಲಕ್ಷಣಗಳು, ಚಿಕಿತ್ಸೆ, ಅಸ್ತಮಾ ಪ್ರಕಾರಗಳು, ಆಹಾರ ಕ್ರಮ ಮುಂತಾದವುಗಳ ಬಗ್ಗೆ ಸರಳವಾಗಿ ತಿಳಿ ಹೇಳಿದರು.

ನಂತರ ಅಂಗಗಳ ರಕ್ಷಣೆ ಮತ್ತು ಮಧುಮೇಹ ನಿರ್ವಹಣೆ ವಿಷಯದ ಬಗ್ಗೆ ಪ್ಯಾನೆಲ್ ಚರ್ಚೆ ನಡೆಯಿತು. ಡಾ. ಸಾಗರ್ ಸೌರಬ್ ಎಂಡೋಕ್ರೈನೋಲೋಜಿಸ್ಟ್, ಡಾ. ಪೂರ್ಣಿಮಾ ತಡಕಲ್ ನೆಫ್ರಾಲಜಿಸ್ಟ್, ಡಾ. ಮಹೇಶ ಡಿ ಹಕ್ಕೆ ಎಂಡೋಕ್ರೈನೋಲೋಜಿಸ್ಟ್ ಪಾಲ್ಗೊಂಡಿದ್ದರು. ಡಾ. ಹಿಮಾಯತುಲ್ಲಾ ಪ್ಯಾನಲ್ ಚರ್ಚೆ ನಡೆಸಿಕೊಟ್ಟರು.

ಡಾ. ಚಂದ್ರಕಲಾ ಸ್ವಾಗತಿಸಿದರೆ, ಡಾ. ಗಿರೀಶ್ ರೋನಾಡ್ ವಂದಿಸಿದರು. ಡಾ. ಶ್ರೀ ರಾಜ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ಗುರುಪ್ರಸಾದ್, ಡಾ. ಪ್ರಶಾಂತ ಇ ಡಿ ಒಳಗೊಂಡಂತೆ ಒಟ್ಟು 60 ಜನರು ಪಾಲ್ಗೊಂಡಿದ್ದರು.

ಅಲ್ಲದೇ ಸೋಮವಾರ ಆಸ್ಪತ್ರೆಯಲ್ಲಿ ಜೆನೆರಲ್ ಮೆಡಿಸಿನ ವಿಭಾಗದಿಂದ ಉಚಿತ ಪಿ ಎಫ್ ಟಿ ತಪಾಸಣೆ ನಡೆಯಿತು. ಅಸ್ತಮಾ ಅಥವಾ ಶ್ವಾಸಕೋಶದ ಸಮಸ್ಯೆ ಕಂಡು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.

ಸುಮಾರು 100 ಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾದರು ಎಂದು ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಕಲಾ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here