ದಸರಾ ಕ್ರೀಡಾಕೂಟದ ವಿಭಾಗ ರಾಜ್ಯಮಟ್ಟದಲ್ಲಿ ಮಿಂಚಲಿ : ಸಂಗಣ್ಣ ಕರಡಿ

0
18

ಕೊಪ್ಪಳ,: ಜಿಲ್ಲಾಮಟ್ಟದಲ್ಲಿ ಗೆದ್ದವರು ವಿಭಾಗ ಮತ್ತು ರಾಜ್ಯಮಟ್ಟದ ದಸರಾದಲ್ಲಿ ಮಿಂಚಲಿ, ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಅವರು ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡಾಪಟುಗಳಿಗೆ ಸೌಲಭ್ಯ ಸೇರಿದಂತೆ ವಿವಿಧ ಹಂತದ ಬೇಡಿಕೆಗಳನ್ನು ಈಡೇರಿಸುವಂತೆ ಯುವಜನರ ಪರವಾಗಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮನವಿ ಸಲ್ಲಿಸಿದೆ, ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ, ಸಂಬಂಧಿಸಿದ ಎಲ್ಲಾ ಜನಪ್ರತಿನಿಧಿಗಳನ್ನು ಕರೆದುಕೊಂಡು ಕೇಂದ್ರ ಕಚೇರಿಗೆ ಭೇಟಿ ನೀಡಿ ಈಗಾಗಲೇ ಸಲ್ಲಿಸಿರುವ 15 ಕೋಟಿ ಅನುದಾನವನ್ನು ತಂದು ಕ್ರೀಡಾಂಗಣ ಪೂರ್ತಿಗೊಳಿಸುವದು, ಕಂಪೌಂಡ್ ನಿರ್ಮಾಣ, ಮತ್ತೊಂದು ಒಳಾಂಗಣ ಕ್ರೀಡಾಂಗಣ, ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ, ಗ್ರಾಮೀಣ ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ಆಯೋಜನೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿರುವ ಕ್ರೀಡಾ ಅನುದಾನದ ಸಮರ್ಪಕ ಬಳಕೆ ಕುರಿತು ಮನವಿ ಸಲ್ಲಸಿದ್ದು ಸೂಕ್ತವಾಗಿ ಅನುಷ್ಠಾನಕ್ಕೆ ತರಲಾಗುವದು ಎಂದರು.

Contact Your\'s Advertisement; 9902492681

ಇದೇ ವೇಳೆ ಜಿಲ್ಲೆಯ ಅನೇಕ ಕ್ರೀಡಾ ಸಾಧಕರನ್ನು ಸ್ಮರಿಸಿದ ಸಂಸದರು, ನಮ್ಮ ಜಿಲ್ಲೆಯಲ್ಲಿ ಕ್ರೀಡೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ, ಸರ್ವರೂ ಪ್ರತಿದಿನ ಯೋಗ, ವ್ಯಾಯಾಮ ಅಥವಾ ಕ್ರೀಡೆಯನ್ನು ದಿನಚರಿ ಮಾಡಿಕೊಂಡಲ್ಲಿ ಮಾತ್ರ ಹೆಚ್ಚು ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗಲು ಸಾಧ್ಯ ಎಂದರು. ಕ್ರೀಡಾ ಜ್ಯೋತಿ ಬೆಳಗಿಸಿ, ಶಾಟ್ ಪುಟ್ ಎಸೆಯುವ ಮೂಲಕ ಜಿಲ್ಲಾ ಪಂಚಾಯತಿ ಅಧ್ಯಕ್ಷ ಹೆಚ್. ವಿಶ್ವನಾಥರಡ್ಡಿ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿ, ಹೆಚ್ಚು-ಹೆಚ್ಚು ಅನುದಾನ ಮತ್ತು ಪ್ರೋತ್ಸಾಹದ ಅಗತ್ಯವಿದ್ದು, ಪ್ರಸ್ತುತ ಸಾಲಿನಲ್ಲಿ ಸಾಧ್ಯವಾದಷ್ಟು ವಿಶೇಷ ಅನುದಾನ ಕೊಡಲು ಪ್ರಯತ್ನಿಸಲಾಗುವದು, ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ಕ್ರೀಡಾ ಅನುದಾನ ಒದಗಿಸಲು ಜಿಲ್ಲಾ ಪಂಚಾಯತಿ ಮೂಲಕ ಮುಂದಿನ ಸಭೆಯಲ್ಲಿ ಠರಾವು ಪಾಸ್ ಮಾಡಲಾಗುತ್ತದೆ ಎಂದು ಯುವ ಒಕ್ಕೂಟ ಸಲ್ಲಿಸಿದ ಮನವಿಗೆ ಸ್ಪಂದಿಸಿ, ಕ್ರೀಡಾಪಟುಗಳು ಹೆಚ್ಚು ಆಸಕ್ತಿಯಿಂದ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಸಂಸದ ಮತ್ತು ಜಿಲ್ಲಾ ಪಂಚಾಯತ ಅಧ್ಯಕ್ಷರಿಗೆ ಲಿಖಿತ ಮನವಿ ಸಲ್ಲಿಸಿ ವಿವಿಧ ಬೇಡಿಕೆಗಳನ್ನು ತುರ್ತಾಗಿ ಈಡೇರಿಸುವಂತೆ ಮನವಿ ಮಾಡಿದರು. ಅಲ್ಲದೇ ಪ್ರತಿ ಗ್ರಾಮಕ್ಕೊಂದು ವ್ಯಾಯಾಮ ಶಾಲೆ, ಚಿಕ್ಕ ಜಿಮ್ ನಿರ್ಮಾಣ ಮಾಡಿಕೊಡುವಂತೆ ಕೋರಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಚಂಡೂರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಠ್ಠಲ ಬಿ., ಜ್ಯೋತಿ ಗೊಂಡಬಾಳ, ಶ್ರೀನಿವಾಸ ಕಂಟ್ಲಿ, ಜಗದಯ್ಯ ಸಾಲಿಮಠ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಧರ್ಮಣ್ಣ ಹಟ್ಟಿ, ಆನಂದ ಹಳ್ಳಿಗುಡಿ, ಬಸಯ್ಯ ಸಾಲಿಮಠ, ರಾಘವೇಂದ್ರ ಅರಕೇರಿ ಮತ್ತು ಗಣೇಶ ಹೊರತಟ್ನಾಳ, ತರಬೇತುದಾರರಾದ ಯತಿರಾಜ ಕುಷ್ಟಗಿ, ಸುರೇಶ ಯಾದವ, ತಿಪ್ಪಣ್ಣ ಮಾಳಿ, ಭೀಮಸಿ, ತುಕಾರಾಮ್, ಹನುಮೇಶ ಇತರರು ಇದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದೇಶಕ ಆರ್.ಜಿ ನಾಡಗೀರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಮನೂರಪ್ಪ ಭಜಂತ್ರಿ ಸಂಗಡಿಗರು ನಾಡಗೀತೆ ಮತ್ತು ರೈತ ಗೀತೆ ಪ್ರಸ್ತುತಪಡಿಸಿದರು. ತಾಲೂಕ ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ ಸ್ವಾಗತಿಸಿದರು. ಕ್ರೀಡಾಧಿಕಾರಿ ಹನುಮಂತಪ್ಪ ವಗ್ಯಾನವರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here