ಸುರಪುರ: ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲಾಯಾದ್ಯಂತ ಅನೇಕ ಗ್ರಾಮಗಳ ಜನರು ಸಂಕಷ್ಟ ಹೆದರಿಸುತ್ತಿದ್ದಾರೆ.ಅಲ್ಲದೆ ಮನೆ ಜಮೀನು ಹಾಳಾಗಿದ್ದು ಸರಕಾರ ಪರಿಹಾರ ನೀಡದೆ ರೈತರಿಗೆ ತೊಂದರೆ ಮಾಡುತ್ತಿರುವುದನ್ನು ಖಂಡಿಸಿ ಈ ತಿಂಗಳ ೩೦ ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ನೀರಾವರಿ ಸಲಹಾ ಸಮಿತಿಯಲ್ಲಿ ಒಬ್ಬರು ರೈತ ಹೋರಾಟಗಾರರನ್ನು ನೇಮಿಸಿಕೊಳ್ಳಬೇಕು.ಯಾವುದೆ ಕಾಲುವೆ ಹೊಡೆದುಹೋದಲ್ಲಿ ಕೂಡಲೆ ದುರಸ್ಥೆಗೊಳಿಸಬೇಕು.ಏಪ್ರಿಲ್ ಮೂವತ್ತರ ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕು.ಈಗ ನೆರೆಯಿಂದ ಹಾಳಾದ ಜಮೀನುಗಳ ದುರಸ್ಥಿಗಾಗಿ ಪರಿಹಾರ ಧನ ನೀಡಬೇಕು ಮತ್ತು ಜಿಲ್ಲೆಯಾದ್ಯಂತ ಹಾಳಾದ ರಸ್ತೆಗಳನ್ನು ದುರಸ್ಥಿಗೊಳಿಸುವಂತೆ ಸರಕಾರಕ್ಕೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಂಘದ ತಾಲ್ಲೂಕು ಘಟಕ್ಕಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. ಸಾಹೇಬಗೌಡ ಮದಲಿಂಗನಾಳ ಗೌರವಾಧ್ಯಕ್ಷ,ಹಣಮಂತ್ರಾಯ ಮಡಿವಾಳ ಅಧ್ಯಕ್ಷ,ಚಾಂದಪಾಶ ಮಾಲಗತ್ತಿ ಉಪಾಧ್ಯಕ್ಷ,ಸುರೇಶ ದರಬಾರಿ ಪ್ರಧಾನ ಕಾರ್ಯದರ್ಶಿ,ಮಲ್ಲಿಕಾರ್ಜುನ ಪೊಲೀಸ್ ಪಾಟೀಲ ಸಹ ಕಾರ್ಯದರ್ಶಿ,ರಾಘವೇಂದ್ರ ಕುಪ್ಪಗಲ್ ಖಜಾಂಚಿ,ಪಂಚಾಕ್ಷರಿ ಹಿರೇಮಠ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹುಕಾರ,ಮಹಿಳಾ ಘಟಕದ ವಿಭಾಗಿಯ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ,ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಜಂಪಾ,ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ,ಶಿವಲಿಂಗಯ್ಯ ಬೇವಿನಾಳಮಠ,ರುದ್ರಯ್ಯ ಮೇಟಿ,ಮುದ್ದಣ್ಣ ಅಮ್ಮಾಪುರ,ಶಂಕಟ ಜಾಧವ,ಮಾನಪ್ಪ ಪೂಜಾರಿ,ಚಂದ್ರಕಾಂತ ಹೆಗ್ಗಣದೊಡ್ಡಿ ಸೇರಿದಂತೆ ಅನೇಕರಿದ್ದರು.