ಕಲಬುರಗಿ; ತಾಲೂಕಿನ ಆಲಗೂಡ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಮನೆಯೊಂದು ಹೊತ್ತಿ ಉರಿದ ಘಟನೆ ಸಬ್ ಅರ್ಬನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಲಗೂಡ ಗ್ರಾಮ ರೈತ ಸೈಬಣ್ಣ ಎನ್ನೋರಿಗೆ ಸೇರಿದ ಮನೆ ಬೆಂಕಿ ಗಾಹುತಿಯಾಗಿದ್ದು, ಮನೆಯಲ್ಲಿದ್ದ 20 ಸಾವಿರ ನಗದು ಹಣ, 7-8 ತೊಲೆ ಚಿನ್ನಾಭರಣ, ದವಸಧಾನ್ಯ ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ತಿಳಿಸಿದ್ದಾರೆ.
ಮನೆಗೆ ಬೆಂಕಿ ಬಿದ್ದ ಹಿನ್ನೆಲೆ ಸೈಬಣ್ಣ ಕುಟುಂಬ ಅತಂತ್ರವಾಗಿದೆ.