ಕಲಬುರಗಿ: ಅಮಾಯಕರಿಗೆ ಹೆದರಿಸಿ ದರೋಡೆ ಮಾಡುತ್ತಿದ್ದ 9 ಜನರ ಬಂಧನ

0
335

ಶಹಾಬಾದ: ತಾಲೂಕಿನ ಭಂಕೂರ, ಸಣ್ಣೂರ ರಸ್ತೆಯ ಮುಗುಳನಾಗಾವಿ ಕ್ರಾಸ್ ಬಳಿ ದಾರಿ ಹೋಕರಿಂದ ಹಣ, ಬಂಗಾರ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 9 ಜನರನ್ನು ನಗರದ ಪೆÇಲೀಸರು ಬಂಧಿಸಿದ್ದು ಪ್ರಮುಖ ಆರೋಪಿ ಪರಾರಾಯಾಗಿದ್ದಾನೆ.

ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ಮುಗುಳನಾಗಾವಿ ಕ್ರಾಸ್ ಬಳಿ ದಾರಿ ಹೋಗುವವರನ್ನು ಅಡ್ಡಗಟ್ಟಿ ಅವರಿಂದ ಹಣ, ಬಂಗಾರ, ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ದೇವಲ ಗಾಣಗಾಪುರದ ಹಣಮಂತ ಬಸಣ್ಣ ಕೋಳೆಕರ, ಅರುಣ ಕುಮಾರ ಶಿವಾಜಿ ಹೊನ್ನೂರ, ಭಂಕೂರ ಶಾಂತನಗರದ ಜಗನ್ನಾಥ ಈಶ್ವರಪ್ಪ ಕಣಮೇಶ್ವರ, ಶ್ರೀಧರ ಮಹೇಶ ಧನ್ನಾ, ಕಲಬುರಗಿಯ ಶಹಾಬಜಾರದ ವಿಶಾಲ ಸುಭಾಷ ನೀಲೂರಕರ್, ಭೂತಪುರದ ಸುನೀಲ ಚಂದ್ರಕಾಂತ ಮಂತಟ್ಟಿ, ಶಹಾ ಬಾದ್ ನಿಜಾಮ ಬಜಾರದ ಚಂದ್ರಕಾಂತ ತುಕಾರಾಮ ಬುರಲೆ, ಬಿರಾಳದ ವಜೀರ ದ್ಯಾವಪ್ಪ ಗೋಗಿ, ನಾವದಗಿಯ ಪರ್ವತರೆಡ್ಡಿ ಬಸವರೆಡ್ಡಿ ಬಂಧಿತರು.

Contact Your\'s Advertisement; 9902492681

ಆರೋಪಿಗಳಿಂದ 25 ಅಡಿ ಉದ್ದದ ನೂಲಿನ ಹಗ್ಗ, ಕಪ್ಪು ಬಣ್ಣದ ಮುಖವಾಡ, ಸಂಖ್ಯೆ ಇಲ್ಲದ ಸಿಲ್ವರ ಬಣ್ಣದ ರೇನಾಲ್ಟ್ ಕಂಪನಿಯ ಡಸ್ಟರ್ ಕಾರ್, ಕೆಂಪು ಬಣ್ಣದ ಸ್ಕೂಟಿ, ಬಡಿಗೆ, ಕಬ್ಬಿಣದ ರಾಡು, ಚಾಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿಸಿದ 9 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದರೋಡೆಯ ಪ್ರಕರಣಗಳ ಪ್ರಮುಖ ಆರೋಪಿಯಾದ ವಿಜಯಕುಮಾರ ಹಳ್ಳಿ ತಲೆ
ಮರೆಸಿಕೊಂಡಿದ್ದಾನೆ. ಈತ ಶಹಾಬಾದ್ ನಗರದ ಸುತ್ತಲಿನ ಪ್ರದೇಶದಲ್ಲಿ ಅಮಾಯಕ ಜನರಿಗೆ ಹೆದರಿಸಿ, ಬೆದರಿಸಿ, ಹಣ ಕೀಳುತ್ತಿದ್ದ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ಆತನ ಬಂಧನಕ್ಕೂ ವಿಶೇಷ ತಂಡ ರಚಿಸಲಾಗಿದೆ.ಎಸ್‍ಪಿ ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿಶ್ರೀನಿಧಿ ಹಾಗೂ ಡಿವಾಯ್‍ಎಸ್‍ಪಿ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪಿಐ ನಟರಾಜ ಲಾಡೆ, ಕಾಳಗಿ ಸಿಪಿಐ ಅಮೋಜ ಕಾಂಬಳೆ, ಪಿಎಸ್‍ಐ ಸುದರ್ಶನ ರೆಡ್ಡಿ, ಸಿಬ್ಬಂದಿ ದೊಡ್ಡಪ್ಪ ಗೌಡ, ಬಸವರಾಜ, ಸಂತೋಷ, ಹುಸೇನ ಪಾಶಾ, ಕಾಮಯ್ಯ ಗುತ್ತೇದಾರ, ನಿಂಗಣ್ಣ ಗೌಡ, ಸವಿಕುಮಾರ, ರವಿ ಕುಮಾರ, ಬಸವರೆಡ್ಡಿ ತಂಡದೊಂದಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here