ಕಲಬುರಗಿ: ಪ್ರಸ್ತುತವಾಗಿ ಕಂಪ್ಯೂಟರ ಜ್ಞಾನವಿಲ್ಲದಿದ್ದರೆ ಅನಕ್ಷರಸ್ಥ ಎಂಬ ಸ್ಥಿತಿಗೆ ಬಂದಿರುವುದು ಕಂಪ್ಯೂಟರ್‍ನ ಮಹತ್ವವವನ್ನು ಸಾರುತ್ತದೆ. ವಿದ್ಯಾರ್ಥಿಗಳು ಯಾವುದೇ ಪದವಿ, ಕೋರ್ಸ್ ಮಾಡುವುದುರ ಜೊತೆಗೆ ಕಂಪ್ಯೂಟರ ಶಿಕ್ಷಣ ಪಡೆಯಬೇಕು. ಇದರಿಂದ ನಿಮಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಕಂಪ್ಯೂಟರವಿಲ್ಲದ ಕ್ಷೇತ್ರ ನಾವಿಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಎಸ್.ಬಿ.ಕಾಲೇಜಿನ ಎದುರುಗಡೆಯಿರುವ ‘ಕೊಹಿನೂರ ಕಂಪೂಟರ ತರಬೇತಿ ಸಂಸ್ಥೆ’ಯಲ್ಲಿ ಶುಕ್ರವಾರ ಜರುಗಿದ ಸಂಸ್ಥೆಯಲ್ಲಿ ತರಬೇತಿ ಪಡೆದು ಕಂಪ್ಯೂಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ವಿತರಸಿ ಅವರು ಮಾತನಾಡುತ್ತಿದ್ದರು.
ಕೆಲವು ವರ್ಷಗಳ ಹಿಂದೆ ಸೀಮಿತ ಕ್ಷೇತ್ರಕ್ಕೆ ಮೀಸಲಾಗಿದ್ದ ಕಂಪ್ಯೂಟರನ ಬಳಕೆ, ಪ್ರಸ್ತುತ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಿಗೆ ವ್ಯಾಪಿಸಿದೆ. ಕಂಪ್ಯೂಟರನ ಬಳಕೆಯಿಂದ ಕೆಲಸದ ವೇಗದ ಹೆಚ್ಚಳ, ಸಮಯದ ಉಳಿತಾಯ, ದಕ್ಷತೆ, ನಿಖರತೆ ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಂಪ್ಯೂಟರ ಶಿಕ್ಷಣ ಪಡೆಯುವುದು ಅವಶ್ಯಕವಾಗಿದೆ ಎಂದರು.
ಕೊಹಿನೂರ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ 31 ವರ್ಷಗಳಿಂದ ಗುಣಮಟ್ಟದ ಕಂಪ್ಯೂಟರ ತರಬೇತಿ ನೀಡುತ್ತಿದೆ. ಸಂಸ್ಥೆಯಿಂದ ತರಬೇತಿ ಹೊಂದಿದ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರದೆಲ್ಲೆಡೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಭವಿಷ್ಯ ಉತ್ತಮವಾಗಿದೆ. ಇದು ನಮಗೆ ಅತ್ಯಂತ ಸಂತೋಷದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರಾದ ಸ್ಮಿತಾ ಕಟ್ಟಳ್ಳಿ, ಪ್ರತ್ವಿ ಕೋರವಾರ, ವೀಣಾ ಬಿರಾದಾರ, ಅರ್ಚನಾ ಗಾಯಕವಾಡ, ಪ್ರಮುಖರಾದ ಅನೀಲಕುಮಾರ, ಸಾಯಿಪ್ರಸಾದ ಎಸ್.ಸಣಮನಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.