ಮನುಕುಲದ ಉಳಿವಿಗಾಗಿ ಜೀವವೈವಿಧ್ಯತೆ ಕಾಪಾಡಿ

0
21

ಶಹಾಬಾದ: ಜೀವವೈವಿಧ್ಯತೆ ಇದ್ದರೇ ಮಾತ್ರ ಮನುಕುಲದ ಉಳಿವು.ಇಲ್ಲದಿದ್ದರೇ ಅಳಿವು ನಿಶ್ಚಿತ ಎಂದು ರದ್ದೇವಾಡಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ವಾಸುದೇವ ನಾಯಕ ಹೇಳಿದರು.

ಅವರು ಕಲಬುರಗಿ-2 ರದ್ದೇವಾಡಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಜೀವವೈವಿಧ್ಯತೆ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಪರಿಸರದ ಮೇಲಿನ ಮಾನವನ ದಬ್ಬಾಳಿಕೆಯಿಂದ ಅನೇಕ ಗಿಡ -ಮರಗಳು, ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿಗಳು ನಾಶವಾಗುವ ಮೂಲಕ ಪರಿಸರದ ಅಸಮತೋಲನವಾಗುತ್ತಿದೆ. ಜೀವ ವೈವಿ ಧ್ಯತೆ ಮತ್ತು ಆಹಾರ ಸರಪಳಿ ಪರಸ್ಪರ ಪೂರಕ ಸಂಬಂಧಿಗಳಾಗಿದ್ದು,ಜೀವ ವೈವಿಧ್ಯತೆ ರಕ್ಷಣೆ ಮಾಡುವುದು ಅಗತ್ಯವಾಗಿದೆ. ಇದರಿಂದ ಪರಿಸರ ಸಮತೋಲನೆ ಸಾಧ್ಯವಿದೆ ಎಂದು ಹೇಳಿದರು.

ಕಲಬುರಗಿಯ ಸ್ವಾಸ್ಥ್ಯ ಮತ್ತು ಪರಿಸರ ಚಿಂತಕರಾದ ರಮೇಶ ಮಹೀಂದ್ರಕರ್ ಇಜೇರಿ ಮಾತನಾಡಿ,ಜೀವ ವೈವಿಧ್ಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ.ಜೀವ ವೈವಿಧ್ಯತೆ ಉಳಿದರೆ ಮನುಕುಲ ಉಳಿಯುತ್ತದೆ.ಆದ್ದರಿಂದ ಪರಿಸರಕ್ಕೆ ಧಕ್ಕೆಯಾಗದಂತೆ ಹಾಗೂ ಜೀವಿಗಳಿಗೆ ತೊಂದರೆಯಾಗದಂತೆ ಬದುಕುವ ಮೂಲಕ ಈ ಪರಿಸರವನ್ನು ಕಾಪಾಡೋಣ ಎಂದರು.

ಡಾ.ಮಹಾಂತೇಶ ಜೋಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವವೈವಿಧ್ಯ ಸಮೃಧವಾಗಿರುವ ಸ್ಥಳಗಳನ್ನು ಸಂರಕ್ಷಿಬೇಕು. ಪ್ಲಾಸ್ಟಿಕ್, ರಸಗೊಬ್ಬರ, ಹಾನಿಕಾರಕ ರಾಸಾಯನಿಕಗಳ ಬಳಕೆ ತಗ್ಗಿಸುವುದು. ವಿವಿಧ ಮಾಲಿನ್ಯಗಳನ್ನು ತಡೆಗಟ್ಟು ವುದು, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುವುದು, ಸಾವಯುವ ಬೇಸಾಯ ಹೆಚ್ಚಳ ಗೊಳಿಸುವುದು, ಗಿಡ-ಮರಗಳು, ಪ್ರಾಣಿ -ಪಕ್ಷಿಗಳನ್ನು ಸಂರಕ್ಷಿಸುವುದು ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜೀವವೈವಿಧ್ಯತೆಯನ್ನು ಕಾಪಾಡಬಹುದಾಗಿದೆ ಎಂದರು.

ಜಗತ್ತಿನ ಸಕಲ ಜೀವರಾಶಿ ಗಳಿಗೆ ಪರಿಸರವೇ ಆವಾಸ ಸ್ಥಾನವಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಪರಸ್ಪರ ಜೀವಿಗಳು ಪೂರಕವಾಗಿ ಸಂಬಂಧ ಹೊಂದಿರುತ್ತವೆ. ಪರಿಸರ ಸಮತೋಲನದಲ್ಲಿರಲು ಜೀವರಾಶಿಗಳು ಸಮತೋಲನವಾಗಿರ ಬೇಕು. ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಜ್ಞಾನ ಕೇಂದ್ರದ ಕೃಷಿ ಭೂಮಿಯಲ್ಲಿ ಮರಗಳ ಮಹತ್ವವನ್ನು ವಿವರಿಸಿದರು.ಅಲ್ಲದೇ ತೆಂಗಿನ ಮರಗಳನ್ನು ನೆಟ್ಟು ನೀರುಣಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here