ಹಾವು, ಚೇಳು ಕಚ್ಚಿದ್ರೆ ಈ ದರ್ಗಾದ ಬಾವಿ ನೀರು ಕುಡಿದ್ರೆ ವಾಸಿ ಆಗುತ್ತೆ..!

0
70
ಕಲಬುರಗಿ: ಜಿಲ್ಲೆಯಿಂದ ಸ್ವಲ್ಪ ದೂರದಲ್ಲಿರುವ ಕಪನೂರು ಬಳಿಯ ಹಜರತ್ ಬಿಬಿ ಕಮಾಲಾ ಸುಲ್ತಾನಾ ಖುನ್ಜಾ-ಮಾ-ಸಾಹೇಬಾರ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಸ್ಥಳವಾಗಿದ್ದು, ಅಲ್ಪಸಂಖ್ಯಾತ ಹಿಂದೂ-ಮುಸ್ಲಿಂ ಭಕ್ತರು ದರ್ಗಾಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ.

ಊರಲ್ಲಿ ಹಿಂದೂ-ಮುಸ್ಲಿಂರಿಂದ ಅದ್ದೂರಿ ಜಾತ್ರೆ..! ಭಕ್ತರು ದರ್ಗಾದಲ್ಲಿನ ದೀಪಕ್ಕೆ ಎಣ್ಣೆ ಹಾಕಿ, ತೆಂಗಿನಕಾಯಿ ಒಡೆದು ದರ್ಗಾದ ಗದ್ದುಗೆಗೆ ಫಲಪುಷ್ಪ ಸಮರ್ಪಿಸುತ್ತಾರೆ. ಅಮವಾಸ್ಯೆ, ಹುಣ್ಣಿಮೆ ದಿನದಂದು ಭಕ್ತರು ಸಾಲು ಸಾಲಾಗಿ ಆಗಮಿಸ್ತಾರೆ. ಇಲ್ಲಿ ಯಾವುದೇ ತಾರತಮ್ಯ ಇಲ್ಲದೇ ಒಟ್ಟಿಗೆ ದೇವರ ಕಾರ್ಯಗಳನ್ನ ನೆರವೇರಿಸುತ್ತಾರೆ. ಅಲ್ಲದೇ ವರ್ಷಕ್ಕೊಮ್ಮೆ ಹಿಂದೂ-ಮುಸ್ಲಿಮರೆಲ್ಲ ಸೇರಿ ಅದ್ಧೂರಿಯಾಗಿ ಉರುಸ್ (ಜಾತ್ರೆ) ಮಾಡುತ್ತೇವೆ ಅಂತಾ ದರ್ಗಾ ಸಿಬ್ಬಂದಿ ಸಯ್ಯದ್ ಅಕ್ಬರ್ ಹುಸೇನ್ ಹೇಳುತ್ತಾರೆ.

ದರ್ಗಾದಲ್ಲಿರುವ ಪವಿತ್ರ ಬಾವಿ ಇದ್ದು, ನಾಯಿ, ಹಾವು, ಚೇಳು ಅಥವಾ ಇತರೆ ವಿಷ ಜಂತುಗಳು ಕಚ್ಚಿದ್ರೆ, ಈ ಬಾವಿಯ ನೀರು ಕುಡಿದರೆ ವಾಸಿಯಾಗುತ್ತೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ದರ್ಗಾಕ್ಕೆ ಭೇಟಿ ನೀಡುವ ಭಕ್ತರು ಬಾವಿಯಲ್ಲಿ ನೀರನ್ನು ಸೇವಿಸಿ ಬಾಟಲ್ಳಲ್ಲಿ ತುಂಬಿ ಮನೆಗೆ ಒಯ್ಯುವುದು ಸಾಮಾನ್ಯವಾಗಿರುತ್ತದೆ. ಈ ದರ್ಗಾ ಸೂಫಿ ಸಂತರ ನಾಡು ಕಲಬುರಗಿಯಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯತೆ ದೊಡ್ಡ ಸಾಕ್ಷಿ ಎಂದು ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ರೀಶೈಲ ಗುಬ್ಬಿ ಹೇಳುತ್ತಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here