ಕೊಪ್ಪಳ : ಹಿಂದಿ ಭಾಷೆಯ ಹೇರಿಕೆಯನ್ನು ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಿಂದಿ ಹೇರಿಕೆ ಸಲ್ಲದು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಬಹುಭಾಷೆ, ಬಹು ಸಂಸ್ಕೃತಿ, ಬಹು ಪಕ್ಷ ಪದ್ದತಿಯನ್ನು ಸ್ವತಃ ಗೃಹ ಸಚಿವರು ವಿರೋಧಿಸುವುದು ಸದ್ಯದ ಸಂದರ್ಭದ ದುರಂತವಾಗಿದೆ.
ಭಾರತ ದೇಶ ಆರ್ಥಿಕವಾಗಿ ಕುಸಿಯುತ್ತಿದೆ. ಉತ್ಪಾದಿತ ವಸ್ತುಗಳು ಮಾರಾಟವಾಗುತ್ತಿಲ್ಲ. ಈ ದಿಸೆಯಲ್ಲಿ ಸರಕಾರ ಕ್ರಮಕೈಗೊಳ್ಳದೇ ಭಾವನಾತ್ಮಕ ವಿಷಯಗಳನ್ನು ಎತ್ತಿ ಮೂಲ ಸಮಸ್ಯೆಗಳನ್ನು ಮರೆ ಮಾಚಲು ಕೇಂದ್ರ ಸರ್ಕಾರದ ಸಚಿವರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆನರ ಭಾವನಾತ್ಮಕ ವಿಷಯಗಳಲ್ಲಿ ಸರಕಾರ ಕೈ ಹಾಕಬಾರದು ದಕ್ಷಿಣ ಭಾರತದ ಕನ್ನಡ, ತಮಿಳು, ತೆಲಗು, ಮಲೆಯಾಳ, ತುಳು, ದ್ರಾಮಿಡ ಭಾಷೆಗಳು ಹಿಂದಿಗಿಂತಲೂ ಪ್ರಾಚೀನ ಇತಿಹಾವುಳ್ಳ ಭಾಷೆಗಳ ಮೇಲೆ ಹಿಂದಿ ಹೇರಿಕೆ ಸಲ್ಲದು, ರೈಲ್ವೆ ಉದ್ಯೋಗಗಳಲ್ಲಿ ಕನ್ನಡಿಗರಿಗೆ ವಂಚನೆಯಾಗಿದೆ.
ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಬೇಗನೇ ಎಚ್ಚತ್ತುಕೊಂಡು ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು. ಭಾರತದ ಬಹುಭಾಷೆಗಳು, ಬಹು ಸಂಸ್ಕೃತಿ ರಕ್ಷಿಸದಿದ್ದರೆ ಭಾರತ ಒಂದಾಗಿ ಉಳಿಯದೆಂದು ಎಚ್ಚರಿಸುವ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಮಹಾಂತೇಶ ಕೊತಬಾಳ, ಶಿವಪ್ಪ ಹಡಪದ, ಮಹಾಂತೇಶ ಮಲ್ಲನಗೌಡರ, ಈಶ್ವರ ಹತ್ತಿ, ಡಿ.ಹೆಚ್. ಪೂಜಾರ, ಚನ್ನಪ್ಪ ಕೆ, ವಿಠ್ಠಪ್ಪ ಗೋರಂಟ್ಲಿ, ಎ.ಎಂ. ಮದರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.