ಗಜಲ್ ಎಂದರೆ ಪ್ರೇಮದ ಲಾಲಿತ್ಯ : ಮಹಿಪಾಲರೆಡ್ಡಿ ಮುನ್ನೂರ್

0
137

ಯಾದಗಿರಿ: ಕಲ್ಯಾಣ ಕರ್ನಾಟಕದಲ್ಲಿ 1980-90 ದಶಕದಲ್ಲಿ ಶಾಂತರಸರು ಹಾಕಿಕೊಟ್ಟ ಗಜಲ್ ಮಾರ್ಗದಲ್ಲಿ ಅನೇಕ ಗಜಲ್ ಕಾರರು ಹುಟ್ಟಿಕೊಂಡಿದ್ದಾರೆ, ಗಜಲ್ ಆಸಕ್ತಿದಾಯಕ ಕ್ಷೇತ್ರವಾಗಿದೆ. ಗಜಲ್ ಕಾವ್ಯಕ್ಕೆ ಅದರದ್ದೇ ಆದ ದಿವ್ಯ ಚೇತನವಿದೆ. ಮೋಹಕ ಕಾವ್ಯ, ಹೆಂಗರೆಳೆಯ ಪಿಸುನುಡಿ, ಭಾವತರಂಗವೆAದೆಲ್ಲಾ ಗಜಲ್ ಖ್ಯಾತಿ ಪಡೆದಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅಭಿಪ್ರಾಯಪಟ್ಟರು.

ಜಿಲ್ಲೆಯ ಇಬ್ರಾಹಿಂಪುರ ಗ್ರಾಮದ ಸಾಯಿ ಬಾಬಾ ಮಂದಿರದಲ್ಲಿ ಶಹಾಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಬುದ್ದ ಬಸವ ಅಂಬೇಡ್ಕರ್ ಜನ್ಮದಿನ ಅಂಗವಾಗಿ ನಡೆದ ಕಾವ್ಯ ಮತ್ತು ಕಥಾ ಕಮ್ಮಟ ಶಿಬಿರದಲ್ಲಿ ಗಜಲ್ ಹಾಗೂ ಹೈಕು ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

Contact Your\'s Advertisement; 9902492681

ಗಜಲ್ ಎಂದರೆ ಆಕಾಶ ಬಳಸಿ ಹಾರಿದ ಹಕ್ಕಿಯ ರೆಕ್ಕೆಯ ಸ್ವತಂತ್ರ, ಕಡಲ ಅಲೆಗಳ ಸರತಿಯ ಓಟದಂತೆ, ಫಕಿರನ ಬಿಳಿ ಗಡ್ಡದ ನಡುವೆ ಇರುವ ಬಿಳಿ ಚಿಟ್ಟೆಯಂತೆ, ಅರಳಿದ ಹೂವಿನ ಸುಗಂಧದAತೆ, ಅಂತರಾಳದ ನೋವು ತಾಕಿ ಚದುರಿದ ನುಣುಪಾದ ಹೂವಿನ ಭಾವ ಯಾನವಿದ್ದಂತೆ ಎಂದು ಹೇಳಿದರು.

ಗಜಲ್ ರಚಿಸಲು ಬುದ್ಧನ ಕಾರುಣ್ಯವಿರಬೇಕು, ಅಂತರ್ಗತದಲ್ಲಿ ಪ್ರೇಮದ ಸೆಲೆ ಇರಬೇಕು, ನಿರಂತರ ಹಪಹಪಿಸುವ ಕಾವ್ಯದ ಉನ್ಮಾದವಿದ್ದಾಗ ಮಾತ್ರ ಗಜಲ್ ಹುಟ್ಟಲು ಸಾಧ್ಯ, ಗಜಲ್ ವಿಧಗಳಲ್ಲಿ ಅನೇಕರು ಈ ಭಾಗದಲ್ಲಿ ಸಂಕಲನಗಳನ್ನು ಹೊರತಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು.

ವೇದಿಕೆಯ ಮೇಲೆ ಹಿರಿಯ ಸಾಹಿತಿಗಳಾದ ಅಮ್ಲಾಯ ಸೈದಾಪುರ, ಡಾ.ಸಂಗಮೇಶ ಹಿರೇಮಠ, ಬಾಬುರಾವ್, ಶ್ರೀಸಾಯಿಬಾಬಾ ಅಣಬಿ, ಗೌಡಪ್ಪಗೌಡ, ಗಜಲ್‌ಗಾರ್ತಿ ಸುವರ್ಣ ರಾಠೋಡ, ಶರಣಗೌಡ ಚಂದಾಪುರ ಉಪಸ್ಥಿತರಿದ್ದರು. ಕಸಾಪ ತಾಲೂಕಾಧ್ಯಕ್ಷ ರವೀಂದ್ರನಾಥ ಹೊಸಮನಿ, ಸಿ.ಎಸ್.ಭೀಮರಾಯ, ದೇವೆಂದ್ರ ಹೆಗ್ಗಡೆ, ಶಿವಣ್ಣ ಇಜೇರಿ, ಗೋವಿಂದರಾಜ, ಬಾಬುರಾವ ದೊರೆ, ಆಲ್ದಾಳ, ಶರಣಬಸವ, ಶಕುಂತಲಾ ಹಡಗಲಿ, ದೇವಿಂದ್ರಪ್ಪ ಹಡಪದ, ಗುರುಲಿಂಗಪ್ಪ ಸಾಗರ, ಸಾಯಿಬಾಬ ಅಣಬಿ, ಮರೆಪ್ಪ ನಾಟೇಕರ್, ಆನಂದ, ಜ್ಯೋತಿ ದೇವಣಗಾಂವ, ತಿಪ್ಪಣ್ಣ ಕ್ಯಾತನಾಳ, ಸುರೇಶ ಅರುಣಿ ಸೇರಿದಂತೆ ಅನೇಕರಿದ್ದರು.

ವರ್ಣನೆಗೆ ದಕ್ಕದ, ಅನುಭವಗಳನ್ನು ಹಂಚಿಕೊಳ್ಳಲಾಗದ ಅಂತರಮುಖಿ ಸಂವಾದದ ಮೌನದಿ ಮುಗುಳ್ನಗುವ ಭಾಷೆಯೆ ಗಜಲ್ ಆಗಿದೆ. ಪ್ರೇಮ ಅನುರಕ್ತಿಯಲ್ಲಿ ತಲ್ಲಣಿಸುತ್ತಾ, ಏಕತಾನತೆಯಲ್ಲಿ ತನ್ನನ್ನು ಮುಖಾಮುಖಾಗಿಯಾಗಿ, ಅಂತರ್ಗತಿಯಾಗುತ್ತಾ ಮಧುರ ಯಾತನೆಯ ಪರಮಾವಧಿಯೇ ಗಜಲ್ ಎನ್ನಲಾಗುತ್ತದೆ. ಕನ್ನಡ ಕಾವ್ಯ ಭಾವವನ್ನು ತಣಿಸುವ, ಅಕ್ಷರಗಳ ಮೂಲಕ ಆತ್ಮಸಖಿಯಾಗಿ ಓದುಗರಿಗೆ ಆಕರ್ಷಿಸುವ ಗಜಲ್ ಎಂಬುದು ಕಾವ್ಯದ ರಾಣಿಯಾಗಿದೆ. – ಮಹಿಪಾಲರೆಡ್ಡಿ ಮುನ್ನೂರ್, ಹಿರಿಯ ಸಾಹಿತಿ, ಕಲಬುರಗಿ

ಎರಡು ದಿನದ ಕಾವ್ಯ ಮತ್ತು ಕಥಾ ಕಮ್ಮಟ ಶಿಬಿರದಲ್ಲಿ ನಾಡಿನ ಅನೇಕ ವಿದ್ವಾಂಸರು, ಸಾಹಿತಿಗಳು ಉಪನ್ಯಾಸ ನೀಡುವ ಮೂಲಕ ಶಿಬಿರಾರ್ಥಿಗಳಿಗೆ ಹೊಸ ದಿಕ್ಕನ್ನು ತೆರೆದಿಟ್ಟಂತಾಯಿತು. ಕ.ಸಾ.ಪ ಶಹಾಪುರ ಘಟಕ ಆಯೋಜಿಸಿದ ಈ ಶಿಬಿರದಲ್ಲಿ ವಿವಿಧ ಗ್ರಾಮದಿಂದ ಶಿಬಿರಾರ್ಥಿಗಳು ಆಗಮಿಸಿ ಲಾಭವನ್ನು ಪಡೆದುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here