ನಾಳೆ ಕಲಬುರಗಿಯಲ್ಲಿ ಎಚ್‌ಕೆಇ ಉದ್ಯೋಗ ಮೇಳ; ಶಶೀಲ್ ನಮೋಶಿ

0
23

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗ ಯುವಕರಿಗೆ ಕೌಶಲ ಆಧಾರಿತ ತರಬೇತಿ ಹಾಗೂ ಉದ್ಯೋಗ ಕಲ್ಪಿಸಲು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ‘ಎಚ್‌ಕೆಇ ಉದ್ಯೋಗ’ ಮೇಳ ಆಯೋಜನೆ ಮಾಡಲಾಗುತ್ತಿದ್ದು, ಮಂಗಳಬಾರ ಬೆಳಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಎಂಎಲ್ಸಿ ಶಶೀಲ್ ನಮೋಶಿ ಮಾಹಿತಿ ನೀಡಿದರು.

ನಗರದ ಪಿಡಿಎ ಕಾಲೇಜಿನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ.

Contact Your\'s Advertisement; 9902492681

ಈ ಮೇಳದಲ್ಲಿ ಕ್ಯಾಡ್‌ಮ್ಯಾಕ್ಸ್ ಸೊಲುಷನ್ ಸಂಸ್ಥೆ ಉದ್ಯೋಗ ನೀಡಲು ಆಸಕ್ತವಾಗಿದ್ದು, ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 800ಕ್ಕೂ ಹಿಚ್ಚಿನ ಮಹಿಳೆಯರಿಗೆ ಉದ್ಯೋಗ ನೀಡುವ ಭರಸವೆ ಹೊಂದಿದ್ದೇವೆ. ಈಗಾಗಲೇ 400ಕ್ಕೂ ಹೆಚ್ಚಿನ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದ್ದು ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಇಲ್ಲಿಂದ ಪ್ರಾರಂಭ: ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕೇವಲ ಕೇವಲ ‘ಎಚ್‌ಕೆಇ ಉದ್ಯೋಗ’ ಮೇಳಕ್ಕೆ ಮಾತ್ರ ಸಿಮೀತವಾಗಿರದೆ, ಇದು ಮುಂದಿನ ದಿನಗಳಲ್ಲಿ ಮುಂದುವರಿಸಲಿದೆ. ಅದಕ್ಕಾಗಿ ‘ಎಚ್‌ಕೆಇ ಉದ್ಯೋಗ’ ಾರ್ಮ್ ಲಿಂಕ್ ಕೂಡ ಮಂಗಳವಾರ ಬಿಎಸ್‌ವೈ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಈ ಲಿಂಕ್ ಮೂಲಕ ನಿರುದ್ಯೋಗಿ ಯುವಕರು ತಮ್ಮ ಮಾಹಿತಿ ನೀಡಬಹುದಾಗಿದೆ. ಅದನ್ನು ಸಂಗ್ರಹಿಸಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡ ಕಂಪನಿಗಳಿಂದ ಉದ್ಯೋಗ ಆಧಾರಿತ ತರಬೇತಿ ಕೌಶಲ ಹಾಗೂ ಪೂರ್ಣ ಪ್ರಮಾಣದ ಉದ್ಯೋಗ ನೀಡುವ ಕೆಲಸ ಎಚ್‌ಕೆಇ ಸಂಸ್ಥೆ ಮಾಡಲಿದೆ. ಈಗಾಗಲೇ ಬಜಾಜ್, ಟಾಟಾ ಟೆಕ್ನಾಲಾಜಿಸ್, ಕ್ಯಾಡ್‌ಮ್ಯಾಕ್ಸ್ ಸೇರಿ 5 ಕಂಪನಿಗಳ ಜತೆ ಒಡಂಬಡಿಕೆ ಮಾಡಲಾಗಿದೆ. ಇದಕ್ಕೆ ಮುಖ್ಯಸ್ಥರಾಗಿ ಅವಿನಾಶ ಸಾಂಬ್ರಾಣಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಸಂಸ್ಥೆ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಎಸ್.ಚಿಂಚೋಳಿ, ಜಂಟಿ ಕಾರ್ಯದರ್ಶಿ ಕೈಲಾಶ್ ಬಿ.ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ.ಕಿರಣ ಎ.ದೇಶಮುಖ, ನಿಶಾಂತ ಎಲಿ ಇದ್ದರು.

ಜವಳಿ ಇಲಾಖೆ ಜತೆ ಮಾತುಕತೆ: ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಯೋಜನೆಯಡಿ ಮೆಗಾ ಟೆಕ್ಸ್‌ಟೆಲ್ ಪಾರ್ಕ್ ನಿರ್ಮಾಣ ಆಗಲಿದೆ. ಇದರಿಂದ ಸುಮಾರು 1 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಲಿವೆ. ಇದಕ್ಕಾಗಿ ಕೇಂದ್ರ ಸರಕಾರ ಎನ್‌ಎಸ್‌ಡಿಸಿ ಹಾಗೂ ರಾಜ್ಯದ ಜವಳಿ ಇಲಾಖೆ ಜತೆ ನಿರುದ್ಯೋಗ ಯುವಕರಿಗೆ ತರಬೇತಿ ನೀಡಲು ಎಚ್‌ಕೆಇ ಸಂಸ್ಥೆ ಒಡಂಬಡಿಕೆ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಶಶೀಲ್ ನಮೋಶಿ ಹೇಳಿದರು. ಇದರಿಂದ ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೌಶಲ ನೀಡಲು ಸಂಸ್ಥೆ ಉತ್ಸುಕವಾಗಿದೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here