ಸುರಪುರ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಮನೆಗಳು ಹಾಳಾಗಿವೆ,ಸಾವಿರಾರು ಎಕರೆ ಬೆಳೆ ನಾಶವಾಗಿದೆ.ಸಂತ್ರಸ್ತ ಕುಟುಂಬಗಳ ಜನರು ಬದುಕ; ಉ ಯಾವುದೆ ಆಶ್ರಯ ಇಲ್ಲವಾಗಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂತ್ರಸ್ತರನ್ನು ನಿರ್ಲಕ್ಷಿಸಿ ಬಿಡಿಗಾಸಿನ ಪರಿಹಾರವನ್ನು ನೀಡದೆ ಬಡವರ ಬದುಕು ದುಸ್ಥರಗೊಳಿಸಿವೆ.ಆದ್ದರಿಂದ ಮಾಜಿ ಪ್ರಧಾನಿಗಳಾದ ತಾವು ನಮ್ಮ ಸುರಪುರ ತಾಲ್ಲೂಕಿನ ಅನೇಕ ಗ್ರಾಮಗಳ ಜನತೆ ನೆರೆಗೆ ಸಿಕ್ಕು ಬದುಕು ಕಳೆದುಕೊಂಡವರಿಗೆ ಪ್ರಧಾನ ಮಂತ್ರಿಗಳು ಕೂಡಲೆ ಪರಿಹಾರಧನ ಬಿಡುಗಡೆ ಮಾಡಲು ಒತ್ತಾಯಿಸುವಂತೆ ಸುರಪುರ ತಾಲ್ಲೂಕು ಜಾತ್ಯಾತೀತ ಜನತಾದಳ ದಿಂದ ಮಾಜಿ ಪ್ರಧಾನಿ ಹಾಗು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ದೇವೆಗೌಡರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಜೆಡಿಎಸ್ ಮುಖಂಡ ವೆಂಕೋಬ ದೊರೆ ಮಾಹಿತಿ ನೀಡಿ,ಜೆಡಿಎಸ್ ಪಕ್ಷದ ಸಭೆಯಲ್ಲಿದ್ದ ಮಾಜಿ ಪ್ರಧಾನಿ ಹಾಗು ನಮ್ಮ ರಾಅಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಹೆಚ್.ಡಿ.ದೇವೆಗೌಡಜಿ ಅವರಿಗೆ ಮನವಿ ಸಲ್ಲಿಸಿ,ಸುರಪುರ ತಾಲ್ಲೂಕಿನ ಎಲ್ಲಾ ನೆರೆ ಸಂತ್ರಸ್ತರಿಗೆ ಕೂಡಲೆ ಪರಿಹಾರ ಬಿಡುಗಡೆಗೊಳಿಸಲು ಹಾಗು ಮನೆಗಳನ್ನು ಕಳೆದುಕೊಂಡವರಿಗೆ ಮನೆ ನೀಡಲು ಮತ್ತು ಬೆಳೆ ಹಾಳಾದ ರೈತರಿಗೆ ಎಕರೆಗೆ ಕನಿಷ್ಠ ಇಪ್ಪತ್ತೈದು ಸಾವಿರ ಪರಿಹಾರ ಧನ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಲು ಮನವಿ ಮಾಡಿದ್ದು,ದೇವೆಗೌಡರು ಶೀಘ್ರದಲ್ಲಿಯೇ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಪರಿಹಾರ ಬಿಡುಗಡೆಗೊಳಿಸಲು ಒತ್ತಾಯಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ ಇತರರು ಜೊತೆಯಿದ್ದರು.