ಕಲಬುರಗಿ: ತಾಲೂಕಿನ ಸಾವಳಗಿ (ಬಿ) ಗ್ರಾಮದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ನಿಲಯಪಾಲಕರಾದ ಸಿರಾಜುದ್ದೀನ ಅವರು, ಮೇ.31 ರಂದು ವಯೋ ನಿವೃತ್ತರಾದ ಹಿನ್ನಲೆಯಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿರಾಜುದ್ದೀನ ಅವರು, ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಯಾಗಿ, ಆಳಂದ ಪಟ್ಟಣದ ಎಂಎಂಡಿಆರ್‍ಎಸ್ ಕಾಲೇಜಿನ ಪ್ರಾಂಶುಪಾಲರಾಗಿ, ಕಲಬುರಗಿಯ ಟಿಎಂಇಓ – ಪಿಯುಸಿ ಕಾಲೇಜು ಪ್ರಾಚಾರ್ಯರಾಗಿ, ಚಿತ್ತಾಪೂರು ತಾಲೂಕು ವಿಸ್ತಾರಣ ಅಧಿಕಾರಿಯಾಗಿ ವಿಶೇಷವಾಗಿ ವಾರ್ಡನ ಹುದ್ದೆಯಲ್ಲಿ ಸೇವೆಸಲ್ಲಿಸಿದ ತಮಗೆ ಎಲ್ಲ ರಿತಿಯಲ್ಲಿಯೂ ಸಹಕಾರ ನೀಡಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ತಮ್ಮ 28 ವರ್ಷಗಳ ಸುದಿರ್ಘ ಸೇವಾವಧಿಯಲ್ಲಿ ಈ ಹಿಂದೆ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಮಹಬೂಬಸಾಬ ಕಾರಟಗಿ, ಜಿಡಿ ಮಹಮೂದ ಸಾರ್, ಮುನ್ವರ ದೌಲಾ ಹಾಗೂ ಡಾ.ಶಫಿಖುನ್ನಿಸಾ ರುಬಿನಾ ಮೇಡಂ, ಡಿಓ ಜಾವೇದ ಸೇರಿದಂತೆ ಶಿಕ್ಷಕರು, ಡಿ ಗ್ರೂಪ ನೌಕರರಿಗೆ ಕೃತಜ್ಞೆತೆಯನ್ನು ಸಲ್ಲಿಸುತ್ತೇನೆ. ಅವರು ನೀಡಿದ ಪ್ರೀತಿ ಬೆಂಬಲವನ್ನು ಜೀವನಲದಲ್ಲಿ ಎಂದೂ ಮೆರಯುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶಿಫಿಕುನ್ನಿಸಾ ರುಬಿನಾ ಅವರು ವಹಿಸಿದ್ದರು. ಮೊಹ್ಮದ ಖಾಜಾ, ಸುರೇಶ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಭಾಗವಹಿಸಿದ್ದರು.