46 ರೈತರ ಆತ್ಮಹತ್ಯೆ: ಪರಿಹಾರ ವಿಳಂಬ ವಿರೋಧಿಸಿ ರೈತ ಕಾರ್ಮಿಕರಿಂದ ಪ್ರತಿಭಟನೆ

0
33

ಕಲಬುರಗಿ: ಜಿಲ್ಲೆಯಲ್ಲಿ ಕಳೆದ 2021ರಿಂದ ಒಟ್ಟು 46 ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಅಧಿಕಾರಿಗಳ ನಿಷ್ಕಾಳಜಿಯಿಂದ ಅನುದಾನ ಬಂದಿಲ್ಲ. ಹೀಗಾಗಿ ಕೂಡಲೇ ಆ ರೈತರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಕಾರ್ಮಿಕರ ಸೇವಾ ಸಂಘದ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.

ಶಾಂತಪ್ಪ ಪಾಟೀಲ್ ಸರ್ಣಣೂರ್, ಚಂದು ಜಾಧವ್, ಮಹಾನಿಂಗಪ್ಪ ಪಾಟೀಲ್ ಬೇನೂರು, ವಿಠ್ಠಲ್ ಪೂಜಾರಿ, ಸುನೀಲ್ ಮಾರುತಿ ಮಾನಪಡೆ, ಸೋಮಶೇಖರ್ ಸಿಂಗೆ, ಜಲೀಲ್ ಸಾಬ್ ಮಡಕಿ, ಸುರೇಶ್ ಹೊಡಲ್, ಮೈಲಾರಿ ದೊಡ್ಡಮನಿ, ಅನಿಲ್ ಕೊಳ್ಳೂರೆ, ಕಿರಣ್ ಬಣಗಾರ್, ಹನುಮಂತ್ ಚವ್ಹಾಣ್, ಸಂಗಮೇಶ್ ಕಲಬುರ್ಗಿ, ಮನೋಜ್ ಜವಲಗೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯಲ್ಲಿ ಕಳೆದ 2021ರಿಂದ ಒಟ್ಟು 46 ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಅಧಿಕಾರಿಗಳ ನಿಷ್ಕಾಳಜಿಯಿಂದ ಅನುದಾನ ಬಂದಿಲ್ಲ. ಹೀಗಾಗಿ ಕೂಡಲೇ ಆ ರೈತರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ದೇಶದ ಬೆನ್ನೆಲುಬು ರೈತರು ಎಂದು ಹೇಳುತ್ತಲೇ ಅವರ ಬದುಕೇ ಅಸ್ಥಿರ ಮಾಡಲಾಗುತ್ತಿದೆ. ಆಳುವ ಸರ್ಕಾರಗಳು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದವರು ಸಾಲ ಬಾಧೆ, ಬರ ಪರಿಸ್ಥಿತಿ ಕಾರಣಕ್ಕೆ ರೈತರು ಆತ್ಮಹತ್ಯೆಗೆ ಶರಣಾಗಿ ಹಲವು ವರ್ಷಗಳು ಕಳೆದರೂ ಸಹ ಪರಿಹಾರ ಧನ ನೀಡುವಲ್ಲಿ ವಿಳಂಬ ನೀತಿ ಅನುಸರಿಸುವ ಮೂಲಕ ಸರ್ಕಾರವು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಟೀಕಿಸಿದರು.

ರೈತರು ಆತ್ಮಹತ್ಯೆ ಅಥವಾ ಆಕಸ್ಮಿಕ ಮರಣ ಹೊಂದಿದರೆ ಎಫ್‍ಎಸ್‍ಎಲ್ ಹಾಕಲು ವಿಳಂಬ, ಕೃಷಿ, ಕಂದಾಯ ಇಲಾಖೆ ವರದಿ ನೀಡುವಿಕೆಯಲ್ಲಿ ವಿಳಂಬ, ಸಹಾಯಕ ಆಯುಕ್ತರ ಕಚೇರಿಯಲ್ಲಿ ಬರುಬರುತ್ತಾ ಮತ್ತಷ್ಟು ವಿಳಂಬ ಧೋರಣೆಗಳಿಂದಾಗಿ ಜಿಲ್ಲೆಯಲ್ಲಿ ಈಗಲೂ ಸಹ 46 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಧನ ಕೊಟ್ಟಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಬರದ ಛಾಯೆಯಿಂದ ಜಿಲ್ಲೆಯ ರೈತರು ನೇಣಿಗೆ ಕೊರಳೊಡ್ಡುವುದು ಮುಂದುವರೆದಿದೆ. ಕಳೆದ ಎರಡು ವರ್ಷಗಳಲ್ಲಿ 84 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಕಸ್ಮಿಕ ಮರಣ 55 ರೈತರದ್ದಾಗಿದ್ದು, ಒಟ್ಟು 139ರ ಪೈಕಿ 86 ರೈತರ ಕುಟುಂಬಗಳಿಗೆ ಪರಿಹಾರÉೂಡಲಾಗಿದ್ದು, ಇನ್ನುಳಿದ 53 ಪ್ರಕರಣಗಳಲ್ಲಿ ಪರಿಹಾರದ ಚೆಕ್ ನೀಡಬೇಕಾಗಿದೆ. ಎರಡು ವರ್ಷಗಳಲ್ಲಿ ವರದಿಯಾದ ರೈತರ ಆತ್ಮಹತ್ಯೆ ಪ್ರಕರಣದಲ್ಲಿ 18 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣಗಳನ್ನು ಪತ್ತೆ ಹಚ್ಚಲು ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಒಳಗೊಂಡ ಸಮಿತಿಯು ಪ್ರಕರಣಗಳನ್ನು ಪರಿಹಾರ ವಿತರಣೆ ಪ್ರಕ್ರಿಯೆಯಿಂದ ಕೈಬಿಟ್ಟಿದೆ ಎಂದು ಅವರು ದೂರಿದರು.

ಜಿಲ್ಲೆಯಲ್ಲ ಯಾವುದೇ ನೀರಾವರಿ ಯೋಜನೆಗಳು ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪೂರ್ಣಗೊಂಡಿಲ್ಲ. ಎಲ್ಲವೂ ನೀರು ಹರಿದಷ್ಟು ಹಣ ಹರಿದಿದೆ. ಆದಾಗ್ಯೂ, ರೈತರ ಜಮೀನಿಗೆ ನೀರು ಹರಿಯಲಿಲ್ಲ. ಮಳೆಯಾಶ್ರಿತ ಪ್ರದೇಶ ಹೊಂದಿದೆ. ಮೂರ್ನಾಲ್ಕು ವರ್ಷಗಳಿಂದ ಸರಿಯಾದ ಮಳೆ ಇಲ್ಲದೇ ಇರುವುದು, ಒಮ್ಮೆ ಅತಿವೃಷ್ಟಿ, ಇನ್ನೊಮ್ಮೆ ಅನಾವೃಷ್ಟಿಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕೆರೆಗಳ ಪುನಶ್ಚೇತನಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಮೂಲಕ ರೈತರಿಗೆ, ಕೂಲಿಕಾರರಿಗೆ ಕೈಗಳಿಗೆ ಕೆಲಸ ಕೊಡುವ ಅವಕಾಶವೂ ಆಗುತ್ತಿಲ್ಲ. ವರ್ಷಕ್ಕೆ ಎರಡ್ಮೂರು ಬೆಳೆಗಳನ್ನು ತೆಗೆಯುವವರು ಒಂದು ಬೆಳೆಗೆ ಸೀಮಿತವಾಗಿದ್ದಾರೆ. ಸಾಲ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿರುವ ಕಾರಣಕ್ಕೆ ಆತ್ಮಹತ್ಯೆಗಳು ಆಗುತ್ತಿವೆ. ಅದರಲ್ಲಿ ಬಹುಪಾಲು ಜನ ಸಣ್ಣ ರೈತರೇ ಸೇರಿದ್ದಾರೆ. ಪರಿಹಾರ ವಿತರಣೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಜೀವ ಮರಳಿ ತರುವುದಕ್ಕಂತೂ ಸಾಧ್ಯವಿಲ್ಲ. ಆದಾಗ್ಯೂ, ಆತ್ಮಹತ್ಯೆಗೆ ಶರಣಾದ ರೈತರ ಅವಲಂಬಿತರಿಗೆ ಸಾಂತ್ವನದ ಕಾರ್ಯದ ಜೊತೆಗೆ ಕುಟುಂಬ ಮತ್ತೆ ನೆಲೆ ನಿಲ್ಲಲು ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ರೈತರ ಆದಾಯ ಎರಡು ಪಟ್ಟು ಅಧಿಕ ಮಾಡುವುದಾಗಿ ಹೇಳಿದವರು ಎಂಎಸ್‍ಪಿ ನಿಗದಿ ಮಾಡುತ್ತಿಲ್ಲ. ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ಏರಿಕೆ ಕಂಡಿದೆ. ರೈತರಿಗೆ ಸಹಾಯಧನ ಕಡಿತ ಮಾಡಿ ಬೆನ್ನಿಗೆ ಬರೆ ಹಾಕಿದ್ದಾರೆ ಎಂದು ಆಕ್ರೋಶ ಹೊರಹಾಕಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿದಿರುವ ರೈತರ ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಪರಿಹಾರ ನೀಡದೇ ಇದ್ದರೆ ಕುಟುಂಬಕ್ಕೆ ಆಧಾರವಾಗಿದ್ದ ರೈತರ ಜೀವ ಕಳೆದುಕೊಂಡ ಬಳಿಕ ಅವಲಂಬಿತರು ಬೀದಿ ಪಾಲಾಗುತ್ತಿದ್ದಾರೆ. ಸಾಲ ಮರುಪಾವತಿ ಜೊತೆಗೆ ಕುಟುಂಬ ನಿರ್ವಹಣೆ ಅವರಿಗೆ ಕಷ್ಟ ಸಾಧ್ಯವಾಗುತ್ತಿದೆ. ಹೀಗಾಗಿ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಮುಖವಾಗಿ ಎರಡ್ಮೂರು ವರ್ಷಗಳ ಕಾಲ ವಿಳಂಬ ಧೋರಣೆ ಅನುಸರಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here