ಅಫಜಲಪುರ: ತಾಲ್ಲೂಕಿನ ಬೈರಾಮಡಗಿ ಉಪಕೇಂದ್ರದ ಪೋಷಕ ಮಾಸಾಚರಣೆ ಅಭಿಯಾನ ಕಾರ್ಯಕ್ರಮವು ಇಂದು ಗ್ರಾಮ ಪಂಚಾಯತ್ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ಲಿನ ಗ್ರಾಮ ಪಂಚಾಯತ್ ಸದಸ್ಯರಾದ ಅಂಬಾರಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಪಾರ್ವತಿ ಹುನ್ನೂರು ವಹಿಸಿದ್ದರು.
ಪೌಷ್ಟಿಕ ಮಾಸಾಚರಣೆಯ ಮಹತ್ವದ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಳು ಮಾತನಾಡಿ ತಾಯಿ ಮರಣ ಹಾಗೂ ಶಿಶು ಮರಣಗಳ ತಡೆಗಟ್ಟುವಿಕೆಯಲ್ಲಿ ಪೌಷ್ಟಿಕ ಆಹಾರದಿಂದ ರಕ್ತಹೀನತೆ ತಡೆಗಟ್ಟುವ ಕುರಿತು ಮಾಹಿತಿ ನೀಡಿದರು. ಅಲ್ಲದೆ ಮಕ್ಕಳಲ್ಲಿ ರಕ್ತ ಹೀನತೆ, ಅಪೌಷ್ಟಿಕತೆ ಹೋಗಲಾಡಿಸುವಲ್ಲಿ ಪೌಷ್ಟಿಕ ಆಹಾರ ತುಂಬಾ ಮಹತ್ವದ್ದಾಗಿದೆ. ತಾವೆಲ್ಲರೂ ಈ ಸಂದರ್ಭದಲ್ಲಿ ತಮ್ಮ ಮುಂದೆ ಪ್ರತ್ಯಕ್ಷವಾಗಿ ಹಸಿರು ಕಾಯಿ ಪಲ್ಯಗಳು ಹಾಗೂ ಏಕದಳ ದ್ವಿದಳ ದಾನ್ಯಗಳು ಹಣ್ಣುಹಂಪಲುಗಳ ಬಗ್ಗೆ ಇಂದು ಹೆಚ್ಚು ಗಮನ ಕೊಡಬೇಕಾಗಿದೆ ಎಂದು ತಿಳಿಸಿದರು. ತಮ್ಮ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ 10 ಮಾರಕ ರೋಗಗಳಿಂದ ರಕ್ಷಿಸಿ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಸುಮಂಗಲ ಅವರು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಶಾಂತ ಅಂಗನವಾಡಿ ಕಾರ್ಯಕರ್ತೆ ನೆರವೇರಿಸಿದರು.