ಓಟದ ಸ್ಪರ್ಧೆ: ಮೋನಿಕಾ ರಾಜ್ಯ ಮಟ್ಟಕ್ಕೆ ಆಯ್ಕೆ

0
73

ವಾಡಿ: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಚಿತ್ತಾಪುರ ತಾಲೂಕಿನ ದಂಡಗುಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಮೋನಿಕಾ ತಂದೆ ಮೋನಪ್ಪ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ 600 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಶಿಕ್ಷಕ ಸಿದ್ದಣ್ಣ ಹಡಪದ ತಿಳಿಸಿದ್ದಾರೆ. ಶಿಕ್ಷಕರಾದ ಕಲಾವತಿ, ಸಿದ್ದಾರಾಮ ಎನ್, ಪ್ರವೀಣ ಬಿ.ಎನ್, ಚಂದ್ರಕಾಂತ, ದೇವಕಿ, ಶರಣಪ್ಪ ಹಾಗೂ ಪೋಷಕರು ಬಾಲಕಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here