ಕಲಬುರಗಿ : ಜಿಲ್ಲೆಯ ನೂತನ ಕಾಳಗಿ ತಾಲ್ಲೂಕಿನ, ಕೋಡ್ಲಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮುಂಭಾಗ ಮತ್ತು ಹಿಂಭಾಗದ ಸ.ನಂ: 107, 108, 109 ಮತ್ತು 137 ಮತ್ತು ಇದರ ಸುತ್ತ-ಮುತ್ತಲಿನ ಜಮೀನುಗಳಲ್ಲಿ ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ಸೌಳು ಗಣಿಗಾರಿಕೆ ಮಾಡುತ್ತಿದ್ದಾರೆ. ಇವರು ಸೌಳು ಗಣಿಗಾರಿಕೆಗೆ ಸರ್ಕಾರದಿಂದ ಯಾವುದೇ ರೀತಿಯ ಅನುಮತಿ ಮತ್ತು ನಿರಾಪೇಕ್ಷಣಾ ಪತ್ರ ಬರೆದುಕೊಂಡಿರುವುದಿಲ್ಲ ಎಂದು ವೀರ ಕನ್ನಡಿಗರ ಸೇನೆಯ ಚಿಂಚೋಳಿ ತಾಲುಕ ಘಟಕದ ಅಧ್ಯಕ್ಷ ವಿಠ್ಠಲ ಎಸ್. ಕುಸಾಳೆ ಅವರು ಕಾಳಗಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ನಿಯಮಾನುಸಾರ ಸರಕಾರಿ ವಸತಿ ನಿಲಯ ಅಥವಾ ಸರಕಾರಿ ಕಟ್ಟಡದ ಸುತ್ತ-ಮತ್ತಲಿನ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮಾಡುವಂತ್ತಿಲ್ಲ. ಆದರೆ ಅಲ್ಲಿ ವಸತಿ ಶಾಲೆಯಿದ್ದರೂ ಕೂಡ ಗಣಿಗಾರಿಕೆ ಮಾಡುತ್ತಿರುವುದರಿಂದ, ಅದರ ಹೊರಸೂಸುವ ವಿಷಕಾರಿ ಧೂಳಿನಿಂದ ವಸತಿ ಶಾಲೆಯಲ್ಲಿನ ನಿಲಯಾರ್ಥಿಗಳಿಗೆ ಅನಾರೋಗ್ಯ ಸಮಸ್ಯೆ ಉದ್ಭವಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ಸಾಕಷ್ಟು ಪ್ರಮಾಣದಲ್ಲಿ ಸೌಳು ಅಗೆದು ಸಾವಿರಾರು ಮೆಟ್ರಿಕ್ ಟನ್ ಗಟ್ಟಲೆ ಶೇಖರಣೆ ಮಾಡಿ, ಜಂಬೋ ಕಂಪನಿಗೆ ಸರಬರಾಜು ಮಾಡಿ ಅಲ್ಲಿಂದ ಕಾಕಿನಾಡ್ ಪೆÇೀರ್ಟ (ಆಂಧ್ರ ಪ್ರದೇಶ) ಮೂಲಕ ಹೊರ ದೇಶಗಳಿಗೆ ಹಡಗುಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದರಿಂದ ನಮ್ಮ ರಾಜ್ಯದ ಗಣಿ ಸಂಪತ್ತು ಅನ್ಯರಿಗೆ ಲೂಟಿಯಾಗುತ್ತಿದೆ. ಹಾಗೂ ರಾಜ್ಯಕ್ಕೆ ಬರುವ ರಾಯಲ್ಟಿ, ರಾಜಧನವು ಕೂಡ ಅಕ್ರಮಗಣಿದಾರರ ಪಾಲಾಗುತ್ತಿರುವುದರಿಂದ ಸರ್ಕಾರಕ್ಕೆ ಸಾಕಷ್ಟು ನಷ್ಟವಾಗುತ್ತಿದೆ. ಆದ್ದರಿಂದ, ಈ ನನ್ನ ಮನವಿ ಅರ್ಜಿಯನ್ನು ಸ್ವೀಕರಿಸಿ, ತಾವುಗಳು ಮೋಖಾದ ಮೇಲೆ ಬಂದು ಪರಿಶೀಲನೆ, ಸರ್ವೆ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲಾತಿಗಳು ಕೂಡ ಪರಿಶೀಲನೆ ಮಾಡಬೇಕು, ಅಕ್ರಮ ಗಣಿದಾರರು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮೀನಲ್ ಖಲ್ಲೆ ಹೂಡಿಸಿ, ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು, ಕಾನೂನು ಬಾಹಿರವಾಗಿ ನಡೆಸುತ್ತಿರುವ ಸವಳು ಸವಳು ಗಣಿಗಾರಿಕೆ, ಅಕ್ರಮ ದಾಸ್ತಾನು, ಜೆ.ಸಿ.ಬಿ., ಟಿಪ್ಪರ್‍ಗಳು, ಲಾರಿಗಳು ಮತ್ತು ಇತರೆ ವಾಹನಗಳು ತಮ್ಮ ಕಣ್ಣಿಗೆ ತೆಗೆದುಕೊಂಡು, ಗಣಿ ಪ್ರದೇಶ ಸರ್ವೆ ಮಾಡಿ. ಇಲ್ಲಿಯವರೆಗೆ ಎಷ್ಟು ಗಣಿಗಾರಿಕೆ ಮಾಡಿ ಸವಳು ಸರಬರಾಜು ಮಾಡಿರುವ ಮೊತ್ತ ಮತ್ತು ಅದರ ದಂಡವನ್ನು ಅವರಿಂದ ವಸೂಲಿ ಮಾಡಿ, ಸರ್ಕಾರದ ಭೋಕ್ಕಸಕ್ಕೆ ಜಮಾ ಮಾಡಿಸಿಕೊಳ್ಳಬೇಕೆ ಮತ್ತು ಮುಂದಿನ ದಿನಗಳು ಪುನಃ ಇಂತಹ ಅಚಾತುರ್ಯ ಆಗದಂತೆ ನೋಡಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.