ಕಲಬುರಗಿ: ಜೇವರ್ಗಿ ತಹಶೀಲ್ ಕಚೇರಿಯ ಇಬ್ಬರು ಅಧಿಕಾರಿಗಳು ಆಸ್ತಿಯನ್ನು ಎನ್ಎ ಮಾಡಿಕೊಡಲು 50 ಸಾವಿರ ಲಂಚ ಪಡೆಯುತ್ತಿದ್ದಾಗ ರೇಡ್ ಹ್ಯಾಂಡ್ ಗಿ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜೇವರ್ಗಿ ತಹಶೀಲ್ ಕಚೇರಿಯಲ್ಲಿ ಕಾರ್ಯಾನಿರ್ವಹಿಸುತ್ತಿದ್ದ ಶೀರಸ್ತಾರರಾದ ಸಿದ್ದರೇವಣ್ಣಪ್ಪ ಮತ್ತು ಕೇಸ್ ವರ್ಕರ್ ಬಂದೇನವಾಜ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು ಎಂದು ತಿಳಿದು ಬಂದಿದೆ.
ನೇಲೂಗಿ ಗ್ರಾಮದ ಅಲ್ಲಾವೂದ್ದೀನ್ ಎಂಬುವರ ಜಮೀನನ್ನು ಎನ್ಎ ಮಾಡಿಕೊಡಲು 80 ಸಾವಿರ ಲಂಚದ ಬೇಡಿಕೆ ಇಟ್ಟಿದರು ಎನ್ನಲಾಗಿದ್ದು, ಲೋಕಾಯುಕ್ತ ಡಿವೈಎಸ್.ಪಿ ಗೀತಾ ಮೆನಹಾಲ್ ಅವರ ನೇತೃತ್ವದಲ್ಲಿ ದಾಳಿ ನಡೆಸಿ 50 ಸಾವಿರ ಲಂಚ ಪಡೆಯುತ್ತಿದ ವೇಳೆ ಬೆಲೆಗೆ ಬಿದ್ದಿದ್ದಾರೆ.
ಕುರಿತು ಲೋಕಾಯುಕ್ತ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ.