ಕಲಬುರಗಿ: ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಅವರನ್ನು ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ ಅವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.
ನೀಲಕಂಠರಾವ ಮೂಲಗೆ ಅವರು 2013 ವಿಧಾನ ಸಭೆ ಚುನಾವಣೆ 2018 ರ ವಿಧಾನ ಸಭೆ ಚುನಾವಣೆ 2023 ವಿಧಾನ ಸಭೆ ಚುನಾವಣೆ ಮೂರು ಬಾರಿ ಕಲಬುರ್ಗಿ ದಕ್ಷಿಣ ಮತ್ಚೆತ್ರದ ವಿಧಾನ ಸಭೆ ಚುನಾವಣೆ ಹಾಗಲ್ ಇರಳು ದುಡುದಿದ್ದಾರೆ. ಮತ್ತು 2009ಲೋಕ ಸಭೆ ಚುನಾವಣೆ 2014, 2019, 2024 ಲೋಕ ಸಭೆ ಚುನಾವಣೆಯಲ್ಲಿ ಹಾಗಲ ಇರಳು ದುಡ್ದುದಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಾದಸ್ಯರಾಗಿ ಆಗಿ ಪಕ್ಷದ ನಿಷ್ಠಾವಂತ ಕಾರ್ಯರತರು ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಗಿ ಸಾಕಷ್ಟು ಬಾರಿ ಪಕ್ಷಕೆ ಕೆಲಸ ಮಾಡಿದ್ದಾರೆ.
ಮೂಲಗೆ ಅವರು ಎಲ್ಲ ನಾಯಕರೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದು, ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಇವರು ಜಿಲ್ಲಾಧ್ಯಕ್ಷರಾದರೆ ಪಕ್ಷಕ್ಕೆ ಬಲ ಬರಲಿದೆ ಎಂದರು.
ಅವರು ಸುಮಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದಲ್ಲಿ ನಿಷ್ಠಾವಂತ, ಪ್ರಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಇಲ್ಲಿಯವರೆಗೆ ಪಕ್ಷದಲ್ಲಿ ಯಾವುದೇ ಅಧಿಕಾರ ಅಥವಾ ಹುದ್ದೆಗೆ ಆಸೆ ಪಡದೆ ಸಕ್ರೀಯವಾಗಿ ಪಕ್ಷದ ಕೆಲಸವನ್ನು ನಿಭಾಯಿಸುತ್ತಾ ಬಂದಿರುತ್ತಾರೆ.
ಇಂತಹ ಒಬ್ಬ ನಿಷ್ಠಾವಂತ ನೀಲಕಂಠರಾವ ಮೂಲಗೆ ಅವರನ್ನು ಕಲಬುರಗಿ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಬೇಕೆಂದು ಕಾಂಗ್ರೇಸ್ ಪಕ್ಷದ ಎಲ್ಲಾ ಹಿರಿಯ ನಾಯಕರಲ್ಲಿ ದತ್ತು ಭಾಸಗಿ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.