ಕ್ರೀಡೆಗಳಲ್ಲಿ ಸ್ಪರ್ದಾ ಮನೋಭಾವನೆ ಮುಖ್ಯ: ವಡವಡಿಗಿ

0
47

ಸುರಪುರ: ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಸೋಲು ಗೇಲುವಿಗಿಂತ ಸ್ಪರ್ದಾ ಮನೊಭಾವನೆಯಿಂದ ಭಾಗವಹಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ದೆವತಕಲ್ ಗ್ರಾಮ ಪಂಚಾಯತ ಸದಸ್ಯ ನರಸಪ್ಪ ವಡವಡಿಗಿ ಹೇಳಿದರು.

ಸಗರನಾಡು ಯುವಕ ಸಂಘ ಕನ್ನಳ್ಳಿ ಹಾಗೂ ಯುವಸಬಲಿಕರಣ ಕ್ರಿಡಾ ಇಲಾಖೆ ಸಹಯೋಗದೊಂದಿಗೆ ದೇವತಕಲ್ ಗ್ರಾಮದ ವಿವೇಕಾನಂದ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೊತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಉತ್ತಮ ಸ್ಪರ್ದಾ ಮನೋಭಾವನೆಯಿಂದ ಭಾಗವಹಿಸಬೇಕು ಸೋಲು ಗೆಲುವಿಗಿಂತ ಸ್ಪರ್ದಿಸುವುದು ಅತ್ಯಂತ ಮುಖ್ಯವಾಗುತ್ತದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿ ದಿಶೇಯಿಂದಲೆ ಕ್ರೀಡೆಗಳತ್ತ ಹೆಚ್ಚು ಒಲವುತೊರುವುದರ ಮೂಲಕ ಕ್ರೀಡಾ ಕ್ಷೇತ್ರದಲ್ಲಿಕೂಡ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ಅಧ್ಯಕ್ಷತೆ ವಹಿಸಿದ್ದರು ಸ್ಥಳಿಯ ಬಬಲಾದಿ ಮಠದ ಸಾಯಿಬಣ್ಣ ಪೂಜಾರಿ ಸಾನಿಧ್ಯ ವಹಿಸಿದ್ದರು, ಅತಿಥಿಗಳಾಗಿ ಶೀವಶರಣಪ್ಪ ಎಡಿಗಿನಾಳ , ನಾಗರಾಜ ಬಾವಿಹೂಲ , ಬೀರೇಶಕುಮಾರ ವೇದಿಕೆಮೆಲಿದ್ದರು, ಕಾರ್ಯಕ್ರಮವನ್ನು, ಲಂಕೆಪ್ಪ ದೇವತ್ಕಲ್ ನಿರೂಪಿಸಿದರು ಮಹೇಶ ಬಿಶಟ್ಟಿ ಸ್ವಾಗತಿಸಿದರು, ಬಸವರಾಜ ಚನ್ನಪಟ್ಟಣ್ಣ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here