ಅಕ್ಟೋಬರ್ 21ರಂದು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಲಬುರಗಿಯಲ್ಲಿ ನ್ಯೂಸ್ ಫಸ್ಟ್ ಜತೆ ಮಾತನಾಡಿದ ಅವರು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ನಾವು ಪ್ರಿಪೇರ್ ಆಗಿದ್ದೇವೆ. ಎನ್ಸಿಪಿ, ಕಾಂಗ್ರೆಸ್ ಮೈತ್ರಿಯಾಗಿ ಚುನಾವಣೆಯನ್ನು ಎದುರಿಸಲಿದೆ . ಇದಾದ ಮೇಲೆ ನಾವು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದೇವೆ. 5 ವಿಭಾಗ ಮಾಡಿ ಐವರು ಮುಖ್ಯಸ್ಥರು ಚುನಾವಣಾ ಪ್ರಚಾರಕ್ಕೆ ನೇಮಕವಾಗಿದ್ದಾರೆ. ಈ ಐವರು ಮುಖ್ಯಸ್ಥರು ಎಲ್ಲೆಡೆ ಪ್ರಚಾರ ಮಾಡುತ್ತಾರೆ ಎಂದರು.
ಬಿಜೆಪಿ-ಶಿವಸೇನೆ ಸರ್ಕಾರ ವೈಫಲ್ಯತೆ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಬಡವರು, ರೈತರು, ದಲಿತರ ವಿಚಾರದಲ್ಲಿ ಅವರ ಧೋರಣೆ ವಿರುದ್ಧ ಸಿಟ್ಟಾಗಿದ್ದಾರೆ. ಈ ಸಲ ಜನರು ಬಿಜೆಪಿ-ಶಿವಸೇನೆಗೆ ಮತ ಕೊಡಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.