ಯುವಕರು ಸಮಾಜಮುಖಿಯಾಗಿ ಬೆಳೆಯಬೇಕು: ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್

0
2

ಕಲಬುರಗಿ:  ಇಂದಿನ ಯುವ ಜನತೆ ಸಮಾಜದಲ್ಲಿ ಮುಂದೆ ಬಂದು ಸಮಾಜ ಮುಖಿಯಾಗಿ ಬೆಳೆಯಬೇಕು ಸ್ವಯಂ ಪ್ರೇರಣೆಯಿಂದ ಜಾಗೃತಿಗೊಳಿಸಲು ರೆಡ್ ಕ್ರಾಸ್ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಕರೆ ನೀಡಿದರು.

ಶುಕ್ರವಾರದಂದು ನಗರದ ಆಲ್ ಬದರ್ ಗ್ರಾಮೀಣ ಭಾರತೀಯ ರೆಡ್‍ಕ್ರಾಸ್ ಸೊಸೈಟಿ, ಜಿಲ್ಲಾ ಕಲಬುರಗಿ ಶಾಖೆ, ಆಲ್ ಬದರ್ ಗ್ರಾಮೀಣ ದಂತ ಕಾಲೇಜು ಮತ್ತು ಆಸ್ಪತ್ರೆ ಕಲಬುರಗಿ ಸಂಯುಕ್ತಾಶ್ರಯದಲ್ಲಿ ವಿಶ್ವರಕ್ತದಾನಿಗಳ ದಿನ ಹಾಗೂ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಯುವ ಜನತೆ ರಕ್ತದಾನ ಮಾಡಲು ಮುಂದೆ ಬಂದರೆ ಅದೊಂದು ಬಹುದೊಡ್ಡ ಸಾಮಾಜಿಕ ಕಾರ್ಯವಾಗಲಿದೆ ಯುವ ಜನತೆ ರಕ್ತದಾನ ಮಾಡಲು ಮುಂದೆ ಬರಬೇಕು ಯುವಕ ಯುವತಿಯರು ಹುಮ್ಮಸದಿಂದ ಕೆಲಸ ನಿರ್ವಹಿಸಿದ್ದಾಗ ಮಾತ್ರ ನಮ್ಮ ದೇಶ ಅಭಿವೃದ್ಧಿಯಾಗಲು ಸಾಧ್ಯವೆಂದು ಅವರು ಸಲಹೆ ನೀಡಿದರು.

ಯುವ ಜನತೆ ಮೇಲೆ ಸಾಕಷ್ಟು ಹೊಣೆಗಾರಿಕೆ ಇದೆ ಅದನ್ನು ಅರಿತುಕೊಂಡು ಮುನ್ನಡೆಯಬೇಕು ರೆಡ್ ಕ್ರಾಸ್ ಸಂಸ್ಥೆ ರಕ್ತದಾನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಬರುತ್ತಿರುವುದು ಶ್ಲಾಘನೀಯವೆಂದರು.

ಯುವಕರು ಇಂಥಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಸ್ವಾರ್ಥತೆಯಿಂದ ಮುಂದೆ ಬಂದು ರಕ್ತದಾನ ಮಾಡಿ ಯುವಕರನ್ನು ನೋಡಿ ಪ್ರಶಂಸೆ ಮಾಡಿದರು ಹಾಗೂ ಆಯೋಜಿಸಿದ ಕಾರ್ಯಕ್ರಮದವರಿಗೆ ಸಂತೋಷ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿಧಿ ಎನ್. ಅವರು ಮಾತನಾಡಿ, ರಕ್ತದಾನ ಒಂದು ಮಹಾದಾನವಾಗಿದೆ ಎಲ್ಲರೂ ನಿರ್ಭಯವಾಗಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಅವರು ಸಲಹೆ ನೀಡಿದರು.

ರಕ್ತದಾನ ಮಾಡಿದರೆ ಸುಸ್ತು ಆಗುವುದಿಲ್ಲ ಆದರೆ ಭಯ ಒಂದು ಮಾತ್ರ ಇರುತ್ತೆ ಎಲ್ಲದಕ್ಕೂ ಕಾರಣವಾಗುತ್ತೆ ರಕ್ತದಾನ ಒಂದು ಪುಣ್ಯ ಒಂದು ಪುಣ್ಯದ ಕೆಲಸ ಯಾರೋದು ಒಂದು ಜೀವ ಉಳಿಸಿದ ಪುಣ್ಯ ದೊರೆಯುತ್ತದೆ ಎಂದರು.

ಕಲಬುರಗಿ ಐಆರಸಿಎಸ್ ಅಧ್ಯಕ್ಷ ಅರುಣಕುಮಾರ್ ಲೋಯಾ. ಆಲ್ ಬದರ್ ಗ್ರಾಮೀಣ ದಂತ ಕಾಲೇಜಿನ್ ಆಡಳಿತ ಮಂಡಳಿ ಸದಸ್ಯ, ನಿರ್ದೇಶಕ ಡಾ. ದಿಲ್‍ನಾಜ್ ಮುಜೀಬ್, ದಂತ ಕಾಲೇಜಿನ ಪ್ರಾಂಶುಪಾಲರು,ಡಾ.ಸೈಯದ್ ಜಕಾವುಲ್ಲಾ, ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅಪ್ಪರಾವ ಅಕ್ಕೋಣೆ, ಸಾಫ್ಟ್ ಸ್ಕಿಲ್ ಟ್ರೇನರ್ ಶೇಷಾದ್ರಿ ಕುಲಕರ್ಣಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ ಬಡಿಗೇರ, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಅತಿಥಿ ಉಪನ್ಯಸಕ ಡಾ.ಸುದರ್ಶನ್ ಐಆರ್‍ಸಿಎಸ್ ಕಾರ್ಯದರ್ಶಿ ರವೀಂದ್ರ ಶಾಬಾದಿ, ರಕ್ತದಾನ ಶಿಬಿರ,ಜಿಲ್ಲೆ ಘಟಕದ ಆಯೋಜಕರಾದ ಡಾ.ಸೈಯದ್ ಸನಾವುಲ್ಲಾ. ಕಾಲೇಜಿನ ಡೀನರು ಉಪನ್ಯಾಸಕರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here