ನಾಲ್ಕು ದಿನಗಳ ವ್ಯಾಪಾರ ಅಭಿವೃದ್ಧಿ ತಯಾರಿಕಾ ಕಾರ್ಯಗಾರ

0
26

ಯಾದಗಿರಿ: ಶ್ರೀ ಬಸವೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ಒಕ್ಕೂಟದ ಸದಸ್ಯರಿಗೆ ನಾಲ್ಕು ದಿನಗಳ ವ್ಯಾಪಾರ ಅಭಿವೃದ್ಧಿ ಯೋಜನೆ ತಯಾರಿಕಾ ಕಾರ್ಯಗಾರ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ವಹಿಸಿಕೊಂಡಿದ್ದರು ಅತಿಥಿಗಳಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ರೇವಣಸಿದ್ದಪ್ಪ ಸರ್ ಭಾಗವಹಿಸಿ ಉದ್ಘಾಟನೆ ಮಾಡಿದರು ನಂತರ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಂದ ಆದಾಯ ಉತ್ಪನ್ನ ಚಟುವಟಿಕೆಗಳು ವ್ಯಾಪಾರ ಅಭಿವೃದ್ಧಿ ಮಾಡುವುದರ ಬಗ್ಗೆ ನಾಲ್ಕು ದಿನಗಳ ತರಬೇತಿ ಇದೆ ಈ ತರಬೇತಿಯ ಸದುಪಯೋಗವನ್ನು ಪಡಿಸಿಕೊಂಡು ಮಹಿಳಾ ಸಂಘದ ಸದಸ್ಯರು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.

Contact Your\'s Advertisement; 9902492681

ಈ ಒಂದು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಮಲ್ಲಮ್ಮ ಸಂಗಪ್ಪ ಕಾರ್ಯದರ್ಶಿಯಾದ ಪದ್ಮಾವತಿ ವೆಂಕಟೇಶ್ ಹಾಗೂ ಒಕ್ಕೂಟದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಸಂಗ್ವಾರ್ ಸರ್ ಭೇಟಿ ನೀಡಿ ಈ ಸಂದರ್ಭದಲ್ಲಿ ಸುತ್ತು ನಿಧಿಯನ್ನು ಖಾಜಾ ಹಜಮೀರ್ ಸಂಘಕ್ಕೆ 20,000 ಮತ್ತು ಮೌಲಾಲಿ ಸಂಘಕ್ಕೆ 20 ಸಾವಿರ ರೂಪಾಯಿಗಳು ಸುತ್ತು ನಿಧಿಯನ್ನು ವಿತರಿಸಿದರು ನಂತರ ಮದೀನ ಸಂಘಕ್ಕೆ 1 ಲಕ್ಷಗಳ ಸಾಲವನ್ನು ನೀಡಿದರು ನಂತರ ಬಸವೇಶ್ವರ ಸಂಜೀವನಿ ಒಕ್ಕೂಟಕ್ಕೆ ನಿಮಗೆ ಸಭೆ ಸಮಾರಂಭ ಮಾಡಲಿಕ್ಕೆ ಸ್ಥಳಾವಕಾಶವನ್ನು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ನಾಯಕಲ ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಮಹಿಳೆಯರು ಕೇಳಿದಾಗ ಖಂಡಿತ ಪರಿಹರಿಸುವದಾಗಿ ತಿಳಿಸಿದರು ಮತ್ತು ಇದೇ ಸಂದರ್ಭದಲ್ಲಿ ಒಕ್ಕೂಟಕ್ಕೆ ಮೂಲಭೂತ ಸೌಕರ್ಯಗಳು ಕಲ್ಪಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು ಇದೇ ಸಂದರ್ಭದಲ್ಲಿ ಗಿಡನೆಟ್ಟು ನೀರು ಹಾಕುವದರ ಮೂಲಕ ಪರಿಸರದ ಬಗ್ಗೆ ತಿಳಿಸಿದರು.

ಒಕ್ಕೂಟದ ಎಲ್ಲಾ ಸದಸ್ಯರು ಪರಿಸರ ಬಗ್ಗೆ ಒಬ್ಬರಿಗೆ ಒಂದು ಮರದಂತೆ ನೆಡಬೇಕೆಂದು ಕರೆ ನೀಡಿದರು ನಂತರ ಮತ್ತೆ ತರಬೇತಿ ಪ್ರಾರಂಭವಾಯಿತು ಈ ಕಾರ್ಯಕ್ರಮದಲ್ಲಿ ಕೃಷಿ ಸಖಿ ಭಾಗಮ್ಮ ಪಶುಸಕಿ ಸಾಬಮ್ಮ ಎಲ್ ಸಿ ಆರ್ ಪಿ ಭಾಗ್ಯ ಸುಮಿತ್ರ ಇದ್ದರು ಶಶಿಕಲಾ ವೆಂಕಟೇಶ್ ಎಮ್ ಬಿ ಕೆ ಇವರು ನಿರೂಪಣೆ ಮಾಡಿ ಹೊಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here