ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಪರಿಸರ ಜಾಗೃತಿ

0
6

ಸುರಪುರ: ನಗರದ ಶಿಕ್ಷಕರ ಕಲಿಕಾ ಕೇಂದ್ರ ತಿಮ್ಮಾಪುರದಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಪರಿಸರ ಸಂರಕ್ಷಣೆಗಾಗಿ ನಮ್ಮ ಪ್ರಯತ್ನಗಳು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಅನೇಕ ಯೋಚನೆಗಳು,ನೀರಿನ ಸಂರಕ್ಷಣೆ, ಗಿಡಮರಗಳ ಬೆಳೆಸುವಿಕೆ ಹಾಗೂ ಘನ ತ್ಯಾಜ್ಯಗಳನ್ನು ವಿಲೇವಾರಿ ಕುರಿತು ಜಾಗೃತಿಯನ್ನು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತಾದ ಪೋಸ್ಟರ್ಗಳ ಮೂಲಕ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಸಂಪನ್ಮೂಲ ವ್ಯಕ್ತಿ ಅನ್ವರ್ ಜಮಾದಾರ್ ಮಾತನಾಡುತ್ತ, ಪರಿಸರ ಸಂರಕ್ಷಣೆ ಕಾಳಜಿ ಕೇವಲ ಜೂನ್ 5 ಕ್ಕೆ ಸೀಮಿತಗೊಳ್ಳದೆ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರಬೇಕೆಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಕೃಷ್ಣ ಬಿಜಾಪುರ್,ರಾಜಶೇಖರ್, ಇಲ್ಯಾಸ್, ಪರಮಣ್ಣ, ಗುರುರಾಜ್ ಕುಲಕರ್ಣಿ,ಹುಲಗಪ್ಪ, ಚೆನ್ನಪ್ಪ ,ಲೊಹಿತಾಶ್ವ ,ಅನುಷಾ, ಹರೀಶ್, ಸಚಿನ್, ಭೀಮಣ್ಣ,ರವಿಚಂದ್ರನ್, ಸಂತೋಷ್, ಸಾಬೀರ್ ,ಪವಿತ್ರ ,ಅಪೂರ್ವ, ಸಿದ್ದನಗೌಡ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here