ಖಾಸಗಿ ಶಾಲೆಗಳಲ್ಲಿನ ಡೊನೆಷನ್ ಹಾವಳಿ ತಡೆಗೆ ಮನವಿ

0
19

ಸುರಪುರ: ತಾಲೂಕಿನಾದ್ಯಂತ ಅನೇಕ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ (ಡೊನೆಷನ್) ಪಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಖಂಡರು ಆರೋಪಿಸಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಮುಖಂಡರು,ಸುರಪುರ ನಗರ,ರಂಗಂಪೇಟೆ,ಕೆಂಭಾವಿ,ಕನ್ನೆಳ್ಳಿ,ಅಮ್ಮಾಪುರ,ಹುಣಸಗಿ,ಕಕ್ಕೇರಾ ಹೀಗೆ ಅನೇಕ ಕಡೆಗಳಲ್ಲಿ ಖಾಸಗಿ ಶಾಲೆಗಳಲ್ಲಿ ಮತ್ತು ಅನುದಾನಿತ ಶಾಲೆಗಳಲ್ಲೂ ಸರಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದು ಇದರಿಂದ ಬಡ ಕುಟುಂಬದ ಮಕ್ಕಳಿಗೆ ತೊಂದರೆಯಾಗುತ್ತಿದೆ,ಆದ್ದರಿಂದ ಎಲ್ಲಾ ಶಾಲೆಗಳಿಗೂ ಸರಕಾರ ನಿಗದಿಪಡಿಸಿದ ಶುಲ್ಕವನ್ನೆ ಪಡೆದುಕೊಳ್ಳುವಂತೆ ಆದೇಶ ಮಾಡಬೇಕು ಹಾಗೂ ಹೆಚ್ಚಿನ ಶುಲ್ಕ ಡೊನೆಷನ್ ರೂಪದಲ್ಲಿ ಪಡೆಯುವುದಕ್ಕೆ ಕಡಿವಾಣ ಹಾಕಬೇಕು,ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಕೇತ್ರಶಿಕ್ಷಣಾಧಿಕಾರಿಗಳಿಗೆ ಬರೆದ ಮನವಿಯನ್ನು ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ತಾ.ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಎಮ್.ಪಟೇಲ್,ಶೇಖರ ಮಂಗಳೂರ,ರಾಜು ಬಡಿಗೇರ,ಚನ್ನಬಸಪ್ಪ ತಳವಾರ,ವೆಂಕಟೇಶ ದೇವಾಪುರ,ಹುಸನಪ್ಪ ಪೂಜಾರಿ,ಹಣಮಂತ ದೇವಾಪುರ,ಮಲ್ಲಪ್ಪ ದೇವಾಪುರ,ಮೌನೇಶ ತಿಂಥಣಿ,ಶಾಂತಪ್ಪ ತಳವಾರಗೇರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here