ಶಹಾಬಾದ: ಬಕ್ರೀದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ಡಿವಾಯ್‍ಎಸ್‍ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಡಿವಾಯ್‍ಎಸ್‍ಪಿ ಶಂಕರಗೌಡ ಪಾಟೀಲ, ಹಬ್ಬಗಳ ಆಚರಣೆ ಸಮಾಜದ ಎಲ್ಲರಲ್ಲೂ ಸಾಮರಸ್ಯೆ ಮೂಡಿಸಬೇಕು.ಒಬ್ಬರಿಗೊಬ್ಬರಿಗೂ ಸಹಕಾರಯುತವಾಗಿ ನಡೆದುಕೊಂಡು ಆಚರಿಸಬೇಕು. ಎಂದರಲ್ಲದೇ, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದರೀತಿ ಹಬ್ಬದ ಆಚರಣೆ ಶಾಂತ ರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ಹಬ್ಬದ ಸಮಯದಲ್ಲಿ ಶಾಂತಿಗೆ ಭಂಗ ತರುವ ಯಾವುದೇ ಹೇಳಿಕೆ ನೀಡುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಪೆÇೀಸ್ಟ್ ಮಾಡುವುದು, ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು, ಕಾನೂನಿನಲ್ಲಿ ಅಪರಾಧವಾಗಲಿದೆ.ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಹಿತಕರ ಘಟನೆ ನಡೆಯದಂತೆ ಪೆÇಲೀಸರು ಕಠಿಣ ಕ್ರಮಕೈಗೊಳ್ಳಲಿದ್ದಾರೆ ಎಂದರು.
ನಗರ ಪೊಲೀಸ್ ಠಾಣೆಯ ಪಿಐ ನಟರಾಜ ಲಾಡೆ ಮಾತನಾಡಿ, ಹಬ್ಬಗಳು ಸಮಾಜದಲ್ಲಿ ಸಂತೋಷ ತರುವ ಕ್ಷಣಗಳು. ಅದನ್ನು ಎಲ್ಲಾ ಧರ್ಮಿಯರು ಎಲ್ಲರೂ ಕೂಡಿಕೊಂಡು ಸಾಮರಸ್ಯದಿಂದ ಆಚರಿಸಬೇಕು. ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು.
ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ವ್ಯಕ್ತಿಯಾಗಿರಲಿ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಮಾತನಾಡಿ, ತ್ಯಾಗ ಬಲಿದಾನದ ಹಬ್ಬವಾಗಿದ್ದರಿಂದ ಕೆಡುಕುಗಳನ್ನು ಬಲಿದಾನ ಮಾಡಬೇಕು,ಒಳಿತುಗಳನ್ನು ಮೈಗೂಡಿಸಿಕೊಂಡು ನಾವು ಭಾರತೀಯರು ಎಂಬ ಭಾವ ಎಲ್ಲರಲ್ಲಿ ಮೂಡಿ ನಾವೆಲ್ಲರೂ ಒಂದೇ ಎಂದು ಹಬ್ಬವನ್ನು ಆಚರಿಸಬೇಕೆಂದು ನುಡಿದರು.
ಶಾಂತಿ ಸೌಹಾರ್ದತೆಗೆ ಹೆಸರು ವಾಸಿಯಾದ ಶಹಾಬಾದ ನಗರದಲ್ಲಿ ಕಾನೂನು ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಿ ಯಾವುದೇ ಅಹಿತಕರ ಘಟನೆಗೆ ಎಡೆ ಮಾಡದೆ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಹಿಂದಿನಿಂದ ಬಂದಂತೆ ಮುಂದುವರಿಯಲಿ ಎಂದರು.
ಪಶು ವೈದ್ಯಾಧಿಕಾರಿ ಯಲ್ಲಪ್ಪ ಇಂಗಳೆ ವೇದಿಕೆಯ ಮೇಲಿದ್ದರು. ಭೀಮರಾವ ಸಾಳುಂಕೆ, ಕನಕಪ್ಪ ದಂಡಗುಲಕರ್, ಚಂದ್ರಕಾಂತ ಗೊಬ್ಬೂರಕರ್,ಶರಣು ವಸ್ತ್ರದ್, ಅಪ್ಸರ್ ಸೇಠ, ಮಹ್ಮದ್ ಮಸ್ತಾನ,ಕೃಷ್ಣಪ್ಪ ಕರಣಿಕ್,ಸಯ್ಯದ್ ಜಹೀರ್, ಸಿದ್ರಾಮ ಕುಸಾಳೆ, ಬಸವರಾಜ ಬಿರಾದಾರ, ದಿನೇಶ ಗೌಳಿ, ಬಸವರಾಜ ಸಾತ್ಯಾಳ,ಮೀರಲಿ ನಾಗೂರೆ, ಯಲ್ಲಾಲಿಂಗ ಹಯ್ಯಾಳಕರ್, ಅನೇಕರು ಇದ್ದರು.