ಚಿತ್ತಾಪುರ: ಕೇಂದ್ರ ಸರಕಾರದ ಅವೈಜ್ಞಾನಿಕ ಮೋಟಾರ್ ವಾಹನ ಮಸೂದೆ 2019 ತಿದ್ದುಪಡಿಯಿಂದ ದುಬಾರಿ ದಂಡ ವಿರೋಧಿಸಿ CITU 6 ನೇ ಜಿಲ್ಲಾ ಸಮ್ಮೇಳನದ ಎರಡನೇ ದಿನದ ಅಂಗವಾಗಿ ಚಿತ್ತಾಪುರ ತಾಲ್ಲೂಕಿನಲ್ಲಿ ಆಯೋಜಿಸಿದ ಬಹಿರಂಗ ಸಭೆ ನಡೆಸುವ ಮೂಲಕ ಪಕ್ಷ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ಹಾಗೂ ರೈತ ಮುಖಂಡರಾದ ಮಾರುತಿ ಮಾನ್ಪಡೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೇಟಿ ಸೇರಿದಂತೆ ಮುಂತಾದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು