ಕಲಬುರಗಿ: ನಗರದ ಹಾಗರಗಾ ರಸ್ತೆಯಲ್ಲಿರುವ ಟೀಪು ಸುಲ್ತಾನ್ ಪ್ಯಾಲೇಸನಲ್ಲಿ ದಿ. ಮಾಜಿ ಸಚಿವ ಖಮರುಲ್ ಇಸ್ಲಾಂ ಅವರು ಪುಣ್ಯಸ್ಮರಣೆ ನಿಮಿತ್ತ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಸಂಘದ ವತಿಯಿಂದ “ಯಾದ್ ಎ ಖಮರ್” ಕಾರ್ಯಕ್ರಮಕ್ಕೆ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಕಾರ್ಯಕ್ರಮ ಉದ್ಘಾಟಿಸಿದ್ದರು.
ಈ ಸಂದರ್ಭದಲ್ಲಿ ಶರಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ನಿಟ್ಟಿ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರಯ ಸಿ ಪಾಟೀಲ್ ರೇವೂರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದು,ಶ್ರೀಶೈಲಂ-ಸುಲಫಲ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಬಜರಂಗ ಶಕ್ತಿ ಪಿಠದ ಪ್ಯೂ ಮಹಾರಾಜರು ಸದಗುರು ಶ್ರೀ ಸೇವಾ ಲಾಲ್, ಶೀಖ್ ಕಮೀನಿಟಿಯ ಉಪಾಧ್ಯಕ್ಷ ಗುರುಮಿತ್ ಸಿಂಗ್, ಬುದ್ಧ ವಿಹಾರದ ಪ್ಯೂ ಸಂಗಾನಂದ ಬಂಟೆ ಸಿದ್ಧಾರ್ಥತ್, ಶೇಖ್ ರೋಜಾ ದಕ್ಕ ದರ್ಗಾದ ಪಿಠಾಧಿಪತಿ ಡಾ. ಶೇಖ್ ಶಾ ಮೊಹಮ್ಮದ್ ಅಫಜಲೋದ್ದಿನ್ ಜುನೈದಿ, ಇಮ್ಲಿ ಮೊಹಲ್ಲಾ ದರ್ಗಾದ ಪಿಠಾಧಿಪತಿ ಸೈಯದ್ ಶಾ ಹಿದಾಯತ್ ಉಲ್ಲಾ ಖಾದ್ರಿ, ನಿಲೂರು ದರ್ಗಾದ ಪಿಠಾಧಿಪತಿ ಇಸಾಮೋದ್ದಿನ್ ಅಹ್ಮದ್ ಖಾದ್ರಿ ವಸೀಮ್ ಬಾಬಾ, ಬ್ರಹಮ್ಮ ಕುಮಾರಿ ಮುಖ್ಯಸ್ಥರಾದ ರಾಜ ಯೋಗಿನಿ ಬಿಕೆ ವಿಜಯಾ ದೀದಿ ವೇದಿಕೆ ಮೇಲೆ ಇದ್ದರು.
ಕಾರ್ಯಕ್ರದಲ್ಲಿ ಅಬ್ದುಲ್ ಖದೀರ್ ಚೊಂಗೆ, ಮಜಹರ್ ಅಲಾಂ ಖಾನ್, ಮಾಜಿ ಮೇಯರ್ ಸೈಯದ್ ಅಹ್ಮದ್, ವಾಹೇದ್ ಅಲಿ ಫಾತೆಖಾನಿ, ಕಾರ್ಯಕ್ರಮದ ಪ್ರಾರಂಭಿಕವಾಗಿ ಹುಸೈನ್ ಸಯೀದ್ ಮಾತನಾಡಿದರು. ಪತ್ರಕರ್ತ ಅಜೀಜ್ ಉಲ್ಲಾ ಸರಮಸ್ತ, ಮಹ್ಮದ್ ಅಮಜದ್ ಜಾವೀದ್ ಹಂದರ್ಗಿ, ಶಿಕ್ಷಣ ಇಲಾಖೆಯ ಹಾಗೂ ಸರಕಾರಿ ನೌಕರರ ಸಂಘದ ಸದಸ್ಯರಾದ ಖಾಜಾ ಗೇಸುದರಾಜ್ ಅವರು ಕಾರ್ಯಕ್ರಮ ನಿರೂಪಿಸಿದರು, ಸಂಘದ ಮುಸ್ತಾಕ್ ಅಹ್ಮದ್ ಅವರು ಸ್ವಾಗತಿಸಿದರು.