ಕಲಬುರಗಿ : ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕಗಳು ಹಾಗು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಜೀವನ ಕೌಶಲ್ಯಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ನ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪ್ರದೀಪ್ ಬಿ.ಎಸ್. ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಭೂತಕಾಲದ ಭವಿಷ್ಯತ ಕಾಲದ ಬಗ್ಗೆ ಹೆಚ್ಚಿಗೆ ಯೋಚನೆ ಮಾಡದೆ ವರ್ತನಮಾನದಲ್ಲಿ ನಾವು ಏನು ಮಾಡಬೇಕು ಎಂದು ಯೋಚಿಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರಲ್ಲದೆ ದಿನ ನಿತ್ಯದ ಕಾರ್ಯಗಳ ಜೊತೆಗೆ ಅತಿ ಹೆಚ್ಚಿನ ಸಮಯ ಓದಿನ ಕಡೆಗೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕಿದ್ವಾಯಿ ಆಸ್ಪತ್ರೆಯ ಹಿರಿಯ ವೈದಿಕೀಯ ಅಧಿಕಾರಿಗಳಾದ ಡಾ. ಮಹಾಂತೇಶ, ಸ್ಕ್ಯಾನ್ ಕಾರ್ಯಕ್ರಮ ನಿಯಂತ್ರಕರಾದ ಡಾ. ಲಾವಣ್ಯ ಗರಡೆ, ನಿಮ್ಹಾನ್ಸ್‌ನ ಡಾ. ಎ. ಮುತ್ತುರಾಜ್ ಎನ್‌ಎಸ್.ಎಸ್. ಅಧಿಕಾರಿಗಳಾದ ಡಾ. ಶ್ರೀಮಂತ ಹೋಳಕರ್, ಡಾ. ನಾಗಪ್ಪ ಗೋಗಿ, ಡಾ. ರವಿ ಬೌದ್ದೆ, ಪ್ರೊ. ಮೇರಿ ಮ್ಯಾಕ್ಯೂಸ್, ಡಾ. ಬಲಭೀಮ ಸಾಂಗ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ರಾಜೇಶ ಅಜಬ್ ಸಿಂಗ್, ಡಾ. ವಿಜಯಕುಮಾರ ಗೋಪಾಳೆ, ಡಾ. ಅರುಣಕುಮಾರ ಸಲಗರ್ ಭಾಗವಹಿಸಿದ್ದರು.
ಡಾ. ಶ್ರೀಮಂತ ಬಿ. ಹೋಳಕರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಕು. ಆಶಾರಾಣಿ ಸ್ವಾಗತಿಸಿದರು ಕು. ಜಿಲಾನಿಯವರು ವಂದಿಸಿದರು.