ವಾಡಿ: ಪಟ್ಟಣದ ಶ್ರೀ ಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಶಾಲೆ ಯಲ್ಲಿ ಹತ್ತನೆಯ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸುತ್ತಾ ಮಾತನಾಡಿ
ಬಾಲ್ಯದಿಂದಲೇ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತುಂಬಾ ಸಹಕಾರಿಯಾಗುತ್ತದೆ. ಯೋಗದ ಮೂಲಕ ಮಕ್ಕಳು ಲಘು ವ್ಯಾಯಾಮ ಮಾಡುವ ಅಭ್ಯಾಸ ರೊಡಿಸಿಕೂಂಡಾಗ ಓದಿನಲ್ಲಿ ಆಸಕ್ತಿ ಹೊಂದಿವುದರ ಜೊತೆಗೆ ಫಿಟ್ ಆಗಿರುತ್ತಾರೆ. ಯೋಗವು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಹೊಂದಲು ಸಹಕಾರಿಯಾಗಿದೆ. ಯೋಗವು ಮಕ್ಕಳ ದೈಹಿಕ ಬೆಳವಣಿಗೆ ಸುಧಾರಿಸುತ್ತದೆ ಆದ್ದರಿಂದ ಪಾಲಕರು ಮತ್ತು ಶಿಕ್ಷಕರು ಯೋಗದ ಅರಿವು ಮೂಡಿಸುವ ಕೆಲಸ ದಲ್ಲಿ ನಿರತರಾಗಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಅಣ್ಣರಾವ ಪಸಾರ,ಸಿದ್ದಣ್ಣ ಕಲ್ಲಶೆಟ್ಟಿ,ಶರಣಗೌಡ ಚಾಮನೂರ,ಬಸವರಾಜ ಕಿರಣಗಿ,ಬಸವನಗೌಡ ಯರಗಲ ಹಾಗೂ ಶಾಲೆಯ
ಮುಖ್ಯ ಉಪಾಧ್ಯಾಯರಾದ ಶಿವಕುಮಾರ ಮಲ್ಕಂಡಿ,ಸಂತೋಷ ಕುಮಾರ ಪಾಟೀಲ, ಚಂದ್ರಶೇಖರ ಕಲ್ಲೂರೆ,ಶಿವಕುಮಾರ ಕೊಳ್ಳಿ,ನಾಗರಾಜ ತಳವಾರ,ಶಂಕ್ರಪ್ಪ ಜಮ್ಲಾಪುರ,ಅನೀತಾ ಗಾಯಕವಾಡ,ಚಂದ್ರಕಲಾ ಶೆಳ್ಳಗಿ,ಪದ್ಮಾವತಿ ನಾಯಕ,ಕವಿತಾ ಪಾಟೀಲ, ನಿರ್ಮಲಾ ಪಾಟೀಲ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.