ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನದಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

0
114

ರಾವೂರು: ಇಲ್ಲಿನ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಹತ್ತನೇ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.

ದಿನಾಚರಣೆಯ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ ಯೋಗದಿಂದಾಗುವ ಲಾಭವನ್ನು ನಂಬದವರನ್ನೂ ಕೂಡ ಕೈ ಹಿಡಿಯುವ ದೇವರೆಂದರೆ ಅದು ಯೋಗ. ನಾವು ಪ್ರತೀ ದಿನ ಅನ್ನ, ನೀರು, ಆಹಾರ,ಹೇಗೆ ಸೇವಿಸುತ್ತೇವೆಯೋ, ಪ್ರತೀ ರಾತ್ರಿ ಹೇಗೆ ನಿದ್ರಿಸುತ್ತೇವೆಯೋ ಹಾಗೆಯೇ ಯೋಗದಿಂದ ನಮ್ಮ ದಿನ ಪ್ರಾರಂಭವಾಗಬೇಕು. ಇದು ಪ್ರತಿಯೊಬ್ಬರ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಸಹಕಾರಿಯಾಗಿದೆ ಯೋಗ ದಿಂದ ಆರೋಗ್ಯ, ಆರೋಗ್ಯವಂತನೇ ಪ್ರಪಂಚದ ಅತೀ ಶ್ರೀಮಂತ ಮತ್ತು ನೆಮ್ಮದಿಯ ವ್ಯಕ್ತಿ. ಯೋಗ ಮಾಡುವವರಿಗೆ ಯಾವ ರೋಗ ರುಜಿನದ ಭಯವೂ ಇರು ವುದಿಲ್ಲ. ಗುಣ, ಆರೋಗ್ಯ, ದೈವಿಕ ಶಕ್ತಿ ಮತ್ತು ಜ್ಞಾನದಲ್ಲಿ ಐಶ್ವರ್ಯವಂತರಾಗುತ್ತಾರೆ. ಅಷ್ಟೇ ಅಲ್ಲದೇ ತಾಳ್ಮೆ ಅವರ ಸ್ವತ್ತಾಗುತ್ತದೆ, ಮನುಷ್ಯನ ಎಲ್ಲ ನಕರಾತ್ಮಕತೆ ದೂರವಾಗಿ ವ್ಯಕ್ತಿತ್ವ ವಿಕಾಸನಕ್ಕೆ ದಾರಿಯಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಪತಂಜಲಿ ಯೋಗ ಶಿಕ್ಷಕರಾದ ದಾಮೋದರ ಕುಲಕರ್ಣಿ,ವೀರಣ್ಣ ಯಾರಿ, ಶರಣಬಸಪ್ಪ ಮೂಲಗೆ,ಎಚ್ ಸಚ್ಚಿದಾನಂದ, ಜಗದೇವಿ ಚಿನ್ನಮಳ್ಳಿ,ಜಯಶ್ರೀ ಹರವಾಳ ಅವರು ಯೋಗಾಭ್ಯಾಸ ಮಾಡಿಸಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಡಾ ಗುಂಡಣ್ಣ ಬಾಳಿ,ಸಂಸ್ಥೆ ಪ್ರಾಚಾರ್ಯರಾದ ಕಾಂತಪ್ಪ ಬಡಿಗೇರ, ಮುಖ್ಯ ಉಪಾಧ್ಯಾಯರಾದ ಗಂಗಪ್ಪ ಕಟ್ಟಿ,ವಿಜಯಲಕ್ಷೀ ಬೊಮ್ಮನಹಳ್ಳಿ, ಈಶ್ವರಗೌಡ ಪಾಟೀಲ, ಭೀಮಾಶಂಕರ ಬೊಮ್ಮನಹಳ್ಳಿ,ಮಲ್ಮಮ್ಮ ಸೇರಿದಂತೆ ಶಿಕ್ಷಕ ವೃಂದದವರು, ಸಂಸ್ಥೆಯ ಸಿಬ್ಬಂದಿಯವರು, ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here