ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ರಾಗಿ ಮನೋಹರ್ ಕುಮಾರ ಬೀರನೂರು ಆಯ್ಕೆ

0
33

ಕಲಬುರಗಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ರಾಗಿ ಹೆವೆನ್ ಫೈಟರ್ ಸಂಸ್ಥೆಯ ಅಧ್ಯಕ್ಷ ಮತ್ತು ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ್ ಕುಮಾರ ಬೀರನೂರು ಆಯ್ಕೆ ಆಗಿದ್ದಾರೆ.

ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಸಿಟೋರಿಯೋ ಕರಾಟೆ ಡು ಯೂನಿಯನ್ ಅಧ್ಯಕ್ಷ ಮತ್ತು ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಶಿಹಾನ ಸಿ.ಎಸ್ ಅರುಣ್ ಮಚಯ್ಯ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಪ್ರಧಾನಿ ಕಾರ್ಯದರ್ಶಿಗಳಾದ ಸೆಂಚಯ್ ಭಾರ್ಗವ ರೆಡ್ಡಿ ರವರ ಆದೇಶದ ಮೇರೆಗೆ ಹೆವೆನ್ ಫೈಟರ್ ಸಂಸ್ಥೆಯ ಅಧ್ಯಕ್ಷ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ್ ಕುಮಾರ್ ಬೀರನೂರ ಅವರನ್ನು ಕರ್ನಾಟಕ ರಾಜ್ಯ ಕರಾಟೆ ಸ್ಪೋರ್ಟ್ಸ್ ಕಮಿಷನ್ ಚೇರ್ಮನರಾಗಿ ಆಯ್ಕೆ ಮಾಡಿದ್ದಾರೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ಪೋರ್ಟ್ ಕಮಿಷನ ಚೇರ್ಮನನಾಗಿ ಆಯ್ಕೆಯಾಗಿದ್ದು ಮತ್ತು ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯು ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಪ್ರಾತಿನಿತ್ಯ ನೀಡುತ್ತಿರುವುದು ಮನೋಹರ್ ಕುಮಾರ್ ಬೀರನೂರ್ ರವರ ಸಾಧನೆಗೆ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕ ಜನತೆ ಕ್ರೀಡಾಭಿಮಾನಿಗಳು ಮತ್ತು ಹೆವೆನ್ ಫೈಟರ್ಸ್ ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here