ತ್ಯಾಗದಿಂದ ಜನಸಂಘ ಕಟ್ಟಿದ ಮುಖರ್ಜಿ

0
41

ಶಹಾಬಾದ: ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ಕಾಂಗ್ರೆಸ್‍ಗೆ ಪರ್ಯಾಯವಾಗಿ ಜನಸಂಘವನ್ನು ಹುಟ್ಟು ಹಾಕಿದರು ಎಂದು ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.

ಅವರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ರವಿವಾರ ಬಿಜೆಪಿಯಿಂದ ಆಯೋಜಿಸಲಾದ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮುಖರ್ಜಿ ವರು ತ್ಯಾಗ ಹಾಗೂ ಸಮರ್ಫಣೆಯಿಂದ ಸ್ಥಾಪಿಸಿದ ಜನಸಂಘ ಇಂದು ಭಾರತೀಯ ಜನತಾ ಪಕ್ಷವಾಗಿದೆ.ದೇಶ ಹಾಗೂ ವಿವಿಧ ರಾಜ್ಯಗಳಲ್ಲಿ ಅವರ ಆಶಯದಂತೆ ಆಡಳಿತ ನಡೆಸುತ್ತಿದೆ. ಬಿಜೆಪಿ ಹಿರಿಯ ಮುಖಂಡ ಚಂದ್ರಕಾಂತ ಗೊಬ್ಬೂರಕರ್ ಮಾತನಾಡಿ, ತತ್ವದ ಆಧಾರದ ಮೇಲೆ ಮಂತ್ರಿಸ್ಥಾನ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಪ್ರಥಮ ರಾಷ್ಟ್ರ ನಾಯಕ ಎಂದರೆ ಶ್ಯಾಮ ಪ್ರಸಾದ ಮುಖರ್ಜಿಯವರು. ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ ಅವಿರತ ದುಡಿದು ಭಾರತೀಯ ಜನಸಂಘವನ್ನು ಸ್ಥಾಪನೆ ಮಾಡಿದರು.

ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಅವರ ತ್ಯಾಗ, ಬಲಿದಾನ ವ್ಯರ್ಥವಾಗದಂತೆ ದೇಶದ ಅಖಂಡತೆಯನ್ನು ಉಳಿಸಿ, ದೇಶವನ್ನು ಕಟ್ಟಿ ಬೆಳೆಸುವ ಪ್ರಯತ್ನ ಮಾಡೋಣ ಎಂದು ಹೇಳಿದರು.

ಮುಖಂಡರಾದ ಶರಣಪ್ಪ ಬುಕಶೆಟ್ಟಿ, ಮಹಾದೇವ ಗೊಬ್ಬೂರಕರ, ದಿನೇಶ ಗೌಳಿ, ದೇವದಾಸ ಜಾಧವ, ನಾರಾಯಣ ಕಂದಕೂರ, ರಾಜು ಮಾನೆ, ಜಯಶ್ರೀ ಸೂಡಿ, ಪಾರ್ವತಿ ಪವಾರ, ನಂದಾ ಗುಡೂರ, ಅರುಣ ಪಟ್ಟಣಕರ, ಕಾಶಣ್ಣ ಚನ್ನೂರ, ಅನೀಲ ಬೊರಗಾಂವಕರ, ಭಾನುದಾಸ ತುರೆ, ಬಸವರಾಜ ಬಿರಾದಾರ, ಸಾಬಣ್ಣ ಬೆಳಗುಂಪಿ, ಭೀಮಯ್ಯ ಗುತ್ತೆದಾರ, ಯಲ್ಲಪ್ಪ ದಂಡಗುಲಕರ, ರಾಜು ದಂಡಗುಲಕರ, ದತ್ತಾತ್ರೇಯ ಘಂಟಿ, ಶಂಕರ ಬಗಾಡೆ, ಸಂದೀಪ್ ಹದನೂರ, ಅಮರ ಕೊರೆ, ಮೋಹನ ಹಳ್ಳಿ, ರಾಜೇಶ ಸಾಳುಂಕೆ, ಶಿವಾಜಿ ಪವಾರ, ಶಿವಶರಣಪ್ಪ ಜಟ್ಟೂರಕರ, ಅಂಬರೀಶ್ ಕಲ್ಯಾಣಿ, ವಿಠ್ಠಲ ಶಿಂಧೆ, ದೊಡ್ಡನಿಂಗಣ್ಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ದೆವದಾಸ ಜಾಧವ ಸ್ವಾಗತಿಸಿ, ನಿರೂಪಿಸಿದರು. ದಿನೇಶÀ ಗೌಳಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here