ಶಾಮಪ್ರಸಾದ್ ಮುಖರ್ಜಿ ಸಂಸ್ಮರಣೆ ನಿಮಿತ್ತ ಡಾ. ಉಮೇಶ್ ಜಾಧವ್ ಅವರಿಂದ ಪುಷ್ಪಾರ್ಚನೆ

0
5

ಕಲಬುರಗಿ: ಭಾರತದ ರಾಜಕೀಯದ ಧ್ರುವತಾರೆ ಬ್ಯಾರಿಸ್ಟರ್ ,ಶೈಕ್ಷಣಿಕ ತಜ್ಞ ಮತ್ತು ನೆಹರು ಸಂಪುಟದಲ್ಲಿ ಮೊಟ್ಟ ಮೊದಲ ಕೈಗಾರಿಕಾ ಸಚಿವರಾಗಿದ್ದ ಶಾಮಪ್ರಸಾದ್ ಮುಖರ್ಜಿ ಅವರ ಪುಣ್ಯ ಸ್ಮರಣೆ ದಿನವಾದ ಭಾನುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕಚೇರಿಯ ಆವರಣದಲ್ಲಿ ಗಿಡ ನೆಟ್ಟು ಶಾಮಪ್ರಸಾದ್ ಮುಖರ್ಜಿಯವರ ಪುಣ್ಯ ಸ್ಮರಣೆಯನ್ನು ವಿಧಾಯಕವಾಗಿ ಆಚರಿಸಲಾಯಿತು.

Contact Your\'s Advertisement; 9902492681

ಶಾಮ್ ಪ್ರಸಾದ್ ಮುಖರ್ಜಿಯವರಂತಹ ಮಹಾನ್ ದೇಶಭಕ್ತಬಾಗಿ ಅವರ ದೂರ ದೃಷ್ಟಿ ಹಾಗೂ ರಾಷ್ಟ್ರಪ್ರೇಮವು ಎಲ್ಲರಿಗೂ ಮಾದರಿಯಾಗಿ ಅಂತವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಮುಂದುವರಿದರೆ ನಿಜಕ್ಕೂ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಶಾಮಪ್ರಸಾದ್ ಮುಖರ್ಜಿಯವರ ಸಾಧನೆ ಯುವಕರಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ಪಕ್ಷದ ಮುಖಂಡರಾದ ಶರಣಪ್ಪ ತಳವಾರ ಹಾಗೂ ಇತರ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here